ಇನ್ನೇನು?
ನಂದಿನಿ ವಿಶ್ವನಾಥ ಹೆದ್ದುರ್ಗ
ಸುಡುವ ನೋವುಗಳ ನಡುವೆ
ಕಾಡುವ ಕವಿತೆಯೊಂದು
ಮೂಡದ ಮೇಲೆ,
ಜಡಿಮಳೆಯ ಹಗಲುಗಳು
ಹಿಡಿ ವಿರಹ
ಹುಟ್ಟಿಸದ ಮೇಲೆ,
ನೋಟಗಳ ಭೇಟಿಗಳು
ಕೂಟದ ಉನ್ಮಾದ
ಹೊಮ್ಮಿಸದ ಮೇಲೆ,
ಸಂಪಿಗೆ ಸೊಗಸಿಗೆ
ಬೆಸೆದ ಬಂಧವೊಂದು
ಸೋಗಿಗೆ ಸೋತ ಮೇಲೆ,

ಏನೇನೂ ಆಗಿರದೆ
ಏನೆಲ್ಲ ಆದವ,
ಏನಿದೆಲ್ಲಾ ಎನ್ನುತ್ತ
ಬೆನ್ನು ತೋರಿದ ಮೇಲೆ,
ಮೊರೆವ ರಾತ್ರಿಗಳಲ್ಲಿ
ಹಾಸು ಮಾಸದೆ
ಮಂಚ ಮೌನವಾದ ಮೇಲೆ,
ನಿಶ್ಚಯವಾಗಿದೆ ನನಗೆ:
ದೇವರಿಗೂ ದ್ವೇಷವಿದೆ,
ನನ್ನ ಮೇಲೆ.!






ತಟ್ಟುವಂತಹ ಕವಿತೆ
Nice one
ಚಂದದ ಸಾಲುಗಳು
Nice one ,,,
ಹಿತವೆನಿಸುವ ಕವಿತೆ…