ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಂಕ್ರೀಟ್ ಕಾಡು…

ಮೋಹನ್ ಮಿರ್ಲೆ

ನಗರಗಳು
ಮಹಾನಗರಗಳು
ಸುತ್ತ ಕಿರು ನಗರಗಳು
ಹೂತುಹೋದ ಕೆರೆಗಳು
ತೇಲುವ ಲೇಔಟ್ ಗಳು

ಪ್ಲಾಸ್ಟಿಕ್ ಹಸಿರಿನ
ಕೃತಕಾಲಂಕಾರ
ರಾತ್ರಿ ಅಂದಕೆ
ಜಗಮಗಿಸುವ
ವಿದ್ಯುತ್ತಿನ ಚಿತಾಗಾರ!

ಅಬ್ಬಾ!
ಇದೇನು ಇಂದ್ರಪುರಿಯೋ,
ಯಮಪುರಿಯೋ..!

ಹೌದು! ಇಲ್ಲಿ
ಕುಬೇರರೂ ಇದ್ದಾರೆ
ಅಂತೆ ಬಹುಜನ ಕುಚೇಲರೂ..

ಇಬ್ಬರದೂ ಹುಡುಕಾಟ
ಒಬ್ಬರದು
ನೆಲ ವಿಸ್ತರಿಸುವ ಧಾವಂತ
ಮತ್ತೊಬ್ಬರದು
ನೆಲೆಕಂಡುಕೊಳ್ಳುವ ಹಗಲುಗನಸು..

‍ಲೇಖಕರು Admin

25 July, 2022

1 Comment

  1. ಪ್ರಸನ್ನ kumar

    ನಗರಗಳಲ್ಲಿ ವಾಸ್ತವ ಮತ್ತು ಭ್ರಮೆಯ ಚಿತ್ರಣ ಚೆನ್ನಾಗಿದೆ ಹಾಗೆಯೇ ನೆಲೆ ಕಂಡು ಕೊಳ್ಳಲು ಪರದಾಡುವವರು ಮತ್ತು ನೆಲೆ ವಿಸ್ತರಿಸಿಕೊಳ್ಳಲು ಬಯಸುವವರ ನಡುವಿರುವ ವ್ಯತ್ಯಾಸ ಗಮನಾರ್ಹವಾದುದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading