ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಸ ಎತ್ತುವವರ ಆಯುಧಕ್ಕೂ ಪೂಜೆ..

t-ramachandrappa

ಟಿ ರಾಮಚಂದ್ರಪ್ಪ  

ಕಸ ಎತ್ತುವವರ ವಿಶಿಷ್ಠ ಆಯುಧ ಪೂಜೆ

ದಾವಣಗೆರೆ../ ೯ ೧೦ ೧೬ /ಮಟ ಮಟ ಮಧ್ಯಾಹ್ನ..

ಎಂ.ಸಿ.ಸಿ ಬಿ ಬ್ಲಾಕ್ ನಲ್ಲಿ ಹೀಗೊಂದು ಗಮನ ಸೆಳೆಯುವ ದೃಶ್ಯ ಕಂಡೆ..

14517493_1661740834139420_6411802166015566705_nಹತ್ತು ಹಲವು ವರ್ಷಗಳ ಹಳೆಯದಾದ ,ನಿತ್ಯ ಕಸ ಎತ್ತಲು ಉಪಯೋಗಿಸುವ ತಳ್ಳುವ ಬಂಡಿ

(ಗಂಟೆ ಬಂಡಿ ಅಂತೆ.. ತಳ್ಳಿದಾಗ ಗಂಟೆಯ ಶಬ್ಧ ಮನೆಯವರಿಗೆ ಗುರುತಂತೆ.. ಅಲ್ಲಿದ್ದ ಯಾವ ಬಂಡಿಗೂ ಗಂಟೆ ಇರಲಿಲ್ಲ!.. ಕೇಳಿದೆ.‌. ಕದ್ದೊಯ್ದಾರೆ ಅಂದ್ರು)

ಹರಕಲು ಪ್ಲಾಸ್ಟಿಕ್ ಬುಟ್ಟಿಗೆ ಬಣ್ಣ ಬಳಿಯುವ ಸಂಭ್ರಮದಲ್ಲಿದ್ದ ರು..‌ ರವಿ ಹಾಗೂ ಸ್ನೇಹಿತರು.. ಯಾಕೆಂದು ಕೇಳಿದೆ.. ಆಯುಧ ಪೂಜೆ ಸಾರ್ ಎಂದ್ರು..

ಬಣ್ಣದ ಖರ್ಚು ಯಾರದು ಎಂದೆ.‌. ಹಬ್ಬದ ಖುಷಿಗೆ ಎಲ್ಲಾ ಮನೆಯ ಅಮ್ಮಂದಿರು ಕೊಟ್ಟಿದ್ದು, ಅದರಲ್ಲೇ ನಿಭಾಯಿಸ್ತೀವಿ ಅಂದ್ರು..

ಪಾಲಿಕೆ ಕೊಡುವುದಿಲ್ಲವೇ ಎಂದೆ.. ಮೂರು ತಿಂಗಳ ಸಂಬಳ ಬಾಕಿ ಇದೆ, ಅದು ಕೊಟ್ರೆ ಸಾಕು.. ಬರಿತೀರಾ ಸಾರ್ ಅಂದ್ರು,.

ನಾ ಪತ್ರಕರ್ತ ಅಲ್ಲ.. ಪಾಲಿಕೆಯಲ್ಲಿ ಗೊತ್ತಿರೋರಿಗೆ ಹೇಳ್ತೀನಿ ಅಂತ ಮಾತು ಕೊಟ್ಟೆ..

ಇಂಥವರ ನಡುವೆಯೂ ನಾನೇಕೆ ಅಬ್ಬರದ ಹಬ್ಬ ಮಾಡಬೇಕಾ? ಅನಿಸ್ತು..

14449008_1654439078202929_1571184010613181461_n

14611042_1661740757472761_7991429041566406021_n

‍ಲೇಖಕರು Admin

11 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading