ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಷ್ಟಕಾಲದಲಿ ನೀನಿರಬೇಕಿತ್ತು!

ಕು.ಸ.ಮಧುಸೂದನ

ಇರಬೇಕಿತ್ತು ನೀನು
ನನ್ನಾತ್ಮದ ಕನ್ನಡಿಯಲಿ ದೂಳು ಕೂರದಂತೆ
ನನ್ನ ಪ್ರಜ್ಞೆಯಾಳದೊಳಗೆ ಅಹಮ್ಮಿನ ಮುಳ್ಳು ಬೆಳೆಯದಂತೆ
ನನ್ನ ಹೃದಯದಾಳದಲಿ ಪಾಪಿಷ್ಠ ಲಹರಿಗಳು
ಗುನುಗದಂತೆ ನೋಡಿಕೊಳ್ಳಲು

ಜನರಹಿತ ರಾತ್ರಿಯ ಬೆತ್ತಲು ರಸ್ತೆಗಳಲ್ಲಿ
ಸಂಜೆ ಉರಿಸಿದ ಚಿತೆಯ ಬೆಂಕಿ ಆರದ ಮಸಣಗಳಲಿ
ಗತದ ನೆನಪುಗಳೆಲ್ಲ ಹಾವುಗಳಂತೆ ಹರಿದಾಡುವ
ಅಸಹನೀಯ ಕ್ಷಣಗಳ ಪಯಣದಲಿ.

ಎಂದೂ ಮಳೆಯಾಗದ
ಬೀಜ ಸಸಿಯಾಗದ
ಸಸಿ ಮರವಾಗಿ
ಮರ ಹೂವರಳಿಸಿ ಹಣ್ಣುಗಳ ಫಲಿಸಿ
ತಾಯಾಗಲಾರದಂತಹ ತೀರಗಳಿರದ

ರುದ್ರಭೀಕರ ಮರಳುಭೂಮಿಯ
ನಡುವಲ್ಲೂ ಹಸಿರು ಚಿಗುರಿಸುವ
ಛಲದೊಡತಿ ನೀನಿರಬೇಕಿತ್ತು
ಮುಗಿದ ನನ್ನಿಷ್ಟಕಾಲದ ಜೊತೆಗೆ
ಆರಂಭಗೊಂಡ ಕಷ್ಟಕಾಲದಲಿ

 

‍ಲೇಖಕರು Avadhi

9 January, 2019

1 Comment

  1. Bidaloti Ranganath

    Fine madhu sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading