ಕಡಲ ತಡಿಯ ಹುಡುಗಿ ಕವಿತಾರಿಗೆ ಪ್ರತಿಷ್ಠಿತ ವಿ ಎಂ ಇನಾಂದಾರ್ ಪ್ರಶಸ್ತಿ ಸಿಕ್ಕಿದೆ. ಕನ್ನಡದ ಕೃತಿಗಳನ್ನು ತನ್ನ ಸೂಕ್ಷ್ಮ ದೃಷ್ಟಿಯಿಂದ ಸಾಣೆ ಹಿಡಿಯುತ್ತಿದ್ದ ಕವಿತಾ ಎಲ್ಲರಿಗೂ ಕವಿಯಾಗಿಯೇ ಪರಿಚಯ. ಕ್ರೈಸ್ಟ್ ಕಾಲೇಜು ಇವರ ‘ಹಕ್ಕಿ ಹರಿವ ನೀರು’ ಹಾಗೂ ಅಭಿನವ ಇವರ ‘ನೀರ ತೇರು’ ಕೃತಿಗಳನ್ನು ಪ್ರಕಟಿಸಿದೆ.
‘ಕನ್ನಡದ ಮಹಿಳಾ ಕಾದಂಬರಿಗಳಲ್ಲಿ ವಿವಾಹ ಮತ್ತು ಕುಟುಂಬದ ಪರಿಕಲ್ಪನೆ’ ಇವರ ಮಹಾ ಪ್ರಬಂಧ. ಇದು ‘ಮಹಿಳೆ: ಅಸ್ತಿತ್ವದ ಸಂಕಥನ’ ವಾಗಿ ಪ್ರಕಟವಾಗಿದೆ. ಕೊಡವ ಸಾಹಿತ್ಯದ ಬಗ್ಗೆಯೂ ನೋಟ ಹರಿಸಿರುವ ಕವಿತಾ ಕನ್ನಡಕ್ಕೆ ಹೊಸತನ್ನು ಕಟ್ಟಿ ಕೊಡಬಲ್ಲರು. ಈ ನಿಟ್ಟಿನಲ್ಲಿ ವಿ ಎಂ ಇನಾಂದಾರ್ ಪ್ರಶಸ್ತಿ ಹುರುಪು ತುಂಬಲಿ.
ಈ ‘ಅರಿವಿನ ನಡೆ’ಯನ್ನು ಪ್ರಕಟಿಸಿರುವ ಲೋಹಿಯಾ ಪ್ರಕಾಶನದ ಸಿ ಚೆನ್ನಬಸವಣ್ಣ ಕವಿತಾಳ ನಡೆಯನ್ನು ಕಂಡಿರುವುದು ಹೀಗೆ:
ವಿಮರ್ಶೆ ಕ್ಷೇತ್ರವನ್ನು ಆರಿಸಿಕೊಳ್ಳುವವರು ವಿರಳ. ಅದರಲ್ಲೂ ಮಹಿಳೆಯರು ತಮ್ಮ ಅನುಭವದ ಅಭಿವ್ಯಕ್ತಿಗೆ ಕಥೆ ಹಾಗೂ ಕವಿತೆಗಳ ಗೋಡೆ ಇರಲಿ ಎಂದೇ ಬಯಸುತ್ತಾರೆ. ಇಂತಹವರ ಮಧ್ಯೆ ಕವಿತಾ ರೈ ಭಿನ್ನ . ವಿಮರ್ಶೆ ಇವರ ಆಟದ ಅಂಗಳ. ಕವಿಯಾಗಿ ಈಗಾಗಲೇ ಹೆಸರು ಮಾಡಿರುವ ಕವಿತಾಳನ್ನು ವಿಮರ್ಶಕಿಯಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಲು ನಮಗೆ ಹೆಮ್ಮೆ.
ವಿಮರ್ಶೆಯಲ್ಲೂ ಈಕೆಯ ಆಸಕ್ತಿ ಭಿನ್ನ. ಕೊಡಗು, ಕರಾವಳಿಯ ಅಗುಳಿ ಹಾಕಿದ ಲೋಕವನ್ನು ಬಿಚ್ಚಿಡುವಲ್ಲಿ ಕವಿತಾ ಸದಾ ಮುಂದು. ಈ ಮೂಲಕ ಕನ್ನಡಕ್ಕೆ ಮತ್ತೊಬ್ಬ ಅಂತಃಕರಣದ ವಿಮರ್ಶಕಿ ದಕ್ಕಲಿ.






ಕವಿತಾ ರೈ ಗೆ ಇನಾಂದಾರ್ ಪ್ರಶಸ್ತಿಗಾಗಿ ಅಭಿನಂದನೆಗಳು. ಅವರ ಬರಹಗಳನ್ನು ಸದಾ ಗಮನಿಸುತ್ತಾ ಬಂದ ಓದುಗರಲ್ಲಿ ನಾನೂ ಒಬ್ಬ. ‘ಹಕ್ಕಿ ಹರಿವ ನೀರು’ ಕವನ ಸಂಕಲನದ ‘ಒಲೆ’ ಕವನ ಹಲವು ಕಾರಣಗಳಿಗಾಗಿ ೯೮ರಲ್ಲಿ ಅದು ಪ್ರಕಟವಾದಾಗ ನಾನು ಮೆಚ್ಚಿಕೊಂಡದ್ದಿದೆ. ಇಂದಿಗೂ ಒಲೆ, ಬಾವಿಕಟ್ಟೆ ಅಲ್ಲದೆ ‘ನೀರತೇರು’ ಸಂಕಲನದ ಹಲಹತ್ತು ಕವನಗಳು ನನಗೆ ಮೆಚ್ಚುಗೆ. ‘ಒಲೆ’ ಯನ್ನು ಕನ್ನಡದಿಂದ ಇಂಗ್ಲಿಷ್‌ಗೆ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ. ಮೂಲ ಕವನ ಹಾಗೂ ಅದರ ಇಂಗ್ಲಿಷ್ ಅನುವಾದ ನಿಮಗಾಗಿ:
ಒಲೆ
ನಾನೇನು ಕಾಣದ್ದಲ್ಲ
ನಾನಿರುವಂತಹ ಮನೆಗಳನ್ನು
ಹಜಾರ ಅಡುಗೆ ಬಚ್ಚಲು ಮಲಗಲು
ಬೆರಳೆಣಿಕೆಯ ಕೋಣೆಗಳು
ಗಾಳಿ ಬೆಳಕಿಗೆ ಎರಡು ಬಾಗಿಲು
ದಿಕ್ಕಿಗೊಂದರಂತೆ ಕಿಟಕಿ
ಅಡುಗೆ ಮನೆಯ ಕೇಂದ್ರ ಒಲೆ
ಅಜ್ಜಿ ಅಮ್ಮ ಈಗ ಸರದಿಯಲ್ಲಿ ನಾನು
ಕುಳಿತ ಭಂಗಿಗಳೆಷ್ಟು ಊದಿ
ಊದಿ ಹೊಗೆ ಹೀರಿದ್ದೆಷ್ಟು
ಹೊಸ್ತಿಲು ಹಿತ್ತಲು ಹಜಾರ
ಎವೂ ಇರಲಿ ಮಲಗುವ
ಕೋಣೆಗಳ ಪಿಸಿ ಪಿಸಿ
ಹುಸಿ ಬಿಸಿ ಒಣ ಒಡಕು
ಮಾತು ಕತೆಗಳಿಗೆಲ್ಲ ಒಲೆ
ಮುಂದಿನ ನಿಟ್ಟುಸಿರೇ ಪರಿಹಾರ
ಇಲ್ಲಿ ಏನೆಲ್ಲ ಬೆಂದಿಲ್ಲ!
ಹಸಿ ಹಸಿರು ಕಾಯಿಪಲ್ಲೆಗಳೆಲ್ಲ
ಕಂದು ಕಪ್ಪಾಗಿ ಮಾಗಿಲ್ಲ
ಹಿಟ್ಟು ರೊಟ್ಟಿಯಾಗಿ ರುಚಿಗಟ್ಟಿಲ್ಲ
ಅಪರೂಪಕ್ಕೆ ಮಾಂಸವೂ ಬೆಂದಿಲ್ಲ!
ಇಲ್ಲವೆನ್ನುವವರು ಯರು
ಅಜ್ಜಿ ಅವಳಮ್ಮ ನನ್ನಮ್ಮ
ನಾನು ಹೇಳುತ್ತೇನೆಯೇ
ಹೋಗಲಿ ಒಲೆ ಹೇಳುತ್ತದೆಯೇ
ಅದು ಕೇಳಿದ ಕತೆಗಳನು
ಒಲೆ ತಾನೆ ಏನು ಹೇಳೀತು
ಎಲ್ಲವು ಉರಿದು ಬೂದಿಯಾಗಿದೆ
ಬೂದಾಗಿದೆ ಬಣ್ಣ ಕಳೆದು ಕೊಂಡಿದೆ
ಪಡೆದು ಕೊಂಡದ್ದೂ ಇದೆ
ಇತ್ತೀಚೆಗೆ ಮಾವ ಬೇಡವೆಂದರೂ
ಇವರು ಒಲೆ ತೆಗೆಸಿದ್ದು
ಕಟ್ಟೆ ಹಾಕಿಸಿದ್ದು ಗ್ಯಾಸ್ ಕೊಂಡದ್ದು
ಈಗ ಹೊಗೆ ಇಲ್ಲ ಧಗೆಯಿಲ್ಲ
ಕೊತ ಕೊತ ಕುದಿ ಕಾಣುವುದಿಲ್ಲ
ಇಕ್ಕಳವಿದೆಯಲ್ಲ ಕೈಸುಡುವುದಿಲ್ಲ
ಒಲೆಯ ಜೊತೆಗೆ ಬದಲಾಗಿದೆ
ಬಚ್ಚಲಿನಿಂದ ಎಲ್ಲವೂ ಹಜಾರದವರಗೆ
ಎರಡು ಬಾಗಿಲಿದ್ದರೇನು ಹೊಸ ಗಾಳಿ
ಬೆಳಕಿನ ವ್ಯವಸ್ಥೆ ಎಲ್ಲಾ
ಮನೆಯೊಳಗೆ ಇದೆ
ಬದಲಾದ ಬಗ್ಗೆ ಮತ್ತೆ ಮಾವನ ಮಾತಿಲ್ಲ
ಇಂದು ಇವರು ಹೇಳುತ್ತಾರೆ
ನಾನು ನಿನ್ನ ಜೊತೆಗೆ ಇದ್ದೇನೆ
ಅಡುಗೆ ಮನೆಯಲ್ಲಿ ನಿನ್ನ ಸೆರಗು ಹಿಡಿದಿಲ್ಲ
ಕೈಗೆ ಕಾಲಿಗೆ ಬೇಕು ಬೇಕಾದ್ದು ಇದೆಯಲ್ಲ
ಕೆಲಸಕ್ಕೆ ಜೊತೆ ಸೇರಿದ್ದೇನೆ ಸುಖಿ ನೀನು
ನಮ್ಮಜ್ಜಿ ನಿನ್ನಜ್ಜಿ ಅಮ್ಮಂದಿರಿಗಿಂತ
ಒಳಗೆ ಕುಕ್ಕರು ಕೂಗುತ್ತಿದೆ ಒತ್ತಡದಿಂದ
ಒಲೆ ಬದಲಾದರೇನು ಉರಿ ಬದಲಾಗಿದೆಯೆ
ಅಡುಗೆಯ ಅನುಭವ ಇಬ್ಬರಿಗೂ ಇದೆ
ಉಷ್ಣತೆಯ ತಾಪಕ್ಕೆ ಮುಚ್ಚಳ ಹಾರೀತು
ಕುಕ್ಕರಲ್ಲವೇ ತಾನೇ ತಣಿಯಲೆಂದು ಕಾಯಲಾಗುವುದಿಲ್ಲ
ಆವಿ ಹೋಗಲೇಬೇಕು ಹೊರಗೆ.
(ಹಕ್ಕಿ ಹರಿವ ನೀರು: ಕವಿತಾ ರೈ)
Kavitha Rai, kavitha.anwaya@gmail.com
The English version of the same is as follows:
Hearth
Haven’t I seen
The houses I live in
Hall, Kitchen, bathroom,
A few rooms to sleep in
Two doors to let in air and light
A window in each direction
Hearth, the centre of the kitchen
Grandmother and mother
And my turn now
How many posters are sitting
How much of blowing
Seeking in of smoke
Let alone the porch, garden, hall
Whispers from the bedroom
False, hot, dry, broken words all
Find their solace
In the sigh at the hearth
What hasn’t boiled here
Fresh green vegetables
Haven’t they turned brown
Black and cooked
Flour turned to tasty cake
Even meat baked, rarely though!
Who denies
Grand mother, her mother
My mother or even
Could I or the hearth, tell?
The tales it had heard
What could it tell
All has burned become ash
Turned gray, discolored
Sometimes gained color too
Lately despite
Father-in-laws disapproved
He laid the pavement
Bought gas
No more smoke, no more heat
No more bubbling and seething seen
No more burning hands
Thanks to tongs
With the hearth changed all
From bathrooms to hall
What if there are
Two doors new air and light
Everything in the home stands arranged
On the change
Father-in-law has no word
Today he says
I am with you
Am not behind you in the kitchen
Every needed is at hand
I have joined you in work
Happier you are
Than my grand mother
Your grand mother and the mothers
In there the cooker is
Whistling out of the pressure
What if the hearth has
Changed, has the fire?
We both know to cook
To burning heat the lid
Might explode
A cooker it is
Can’t wait for to cool on its own
Steam has to find its
Way out.
(Bird Float Water –Translated by Dr. Shekar)
Dr. B H Shekar,
Department of Computer Science,
Mangalore University,
Mangalagangotri, MANGALORE
bhshekar@gmail.com
Mobile: +91-9480146921