ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿಗಳೆಂದ್ರೆ ಭಯ ಎನಗೆ..

ಧನಂಜಯ.ಎನ್.

ನನಗೆ
ಈ ಕವಿಗಳೆಂದರೆ
ಭಯ.

ನೋಡಿ
ಅವರು, ಆ ಭಾವದ ಆಳಕ್ಕೆ
ಎಷ್ಟೆಂದು, ಇಳಿದು
ಏಳುತ್ತಾರೆ !!

ಹಾಗೆ, ಇಳಿದೇಳುವಾಗ
ಅವರನ್ನು
ಯಾರೂ ಸಹ
ಕದಲಿಸಬಾರದು,
ಮಾತೂ ಸಹ..

ಗಿರಿ ಕಣಿವೆಗಳನ್ನು
ಕುಳಿತಲ್ಲೇ ಏರಿ
ಇಳಿದುಬಿಡುತ್ತಾರೆ,
ಕೊಂಚವೂ
ಕದಲದೇ..

ಅತ್ಯಮೂಲ್ಯ ಎನಿಸುವ
ಸ್ವಾತಿ ಮುತ್ತೂ, ಸಹ
ಇವರಿಗೆ
ಅಷ್ಟಕ್ಕಷ್ಟೇ..

 

ಹಾಗೆ ನೋಡಿದರೆ,
ಅವೆಲ್ಲದರ ಬೆಲೆಯನ್ನೂ
ಬದಿಗೊತ್ತಿ,
ಮಾನ ಕಳೆಯುವಲ್ಲಿ
ಇವರು, ನಿಸ್ಸೀಮರು.

ಆದರೂ, ನನ್ನ
ಆತಂಕ
ಇಷ್ಟಕ್ಕೇ ನಿಲ್ಲುವುದಿಲ್ಲ.

ಬಹುಕಾಲದಲ್ಲಿ
ಪಡೆದು ಗೆಲ್ಲಬೇಕಾದ
ಬದುಕನ್ನ
ಇವರೆಲ್ಲರೂ, ಕುಳಿತಲ್ಲೇ
ಕಳೆದುಬಿಡುತ್ತಾರೆ.

ಕೇಳಿದರೆ, ಅದೆಲ್ಲವೂ
ಭ್ರಮೆ
ಎನ್ನುವ ಸಬೂಬು ಬೇರೆ.

ಕಲ್ಪನೆಯಲಿ ಅರಳಿದ
ಹೂವು
ಅದೆಂಥಾ ಸುವಾಸನೆಯನ್ನು ತಾನೇ
ಬೀರೀತು ??

ಇನ್ನಾದರೂ ಏಳಿ
ಬಯಸಿದೆಲ್ಲವನ್ನೂ
ಬಯಲಲ್ಲಿ ಪಡೆಯಿರಿ,
ಬದುಕು
ಬದುಕಿದಷ್ಟೇ ದಕ್ಕೀತು..!

‍ಲೇಖಕರು avadhi

10 September, 2019

4 Comments

  1. Darshan Jayanna

    ತುಂಬಾ ಕವಿತೆಗಳು ನಾಸ್ಟಾಲ್ಜಿಯಾ ( poetry is an emotion recollected in tranquility) ಅನ್ನುತಾನೆ

    ಹಾಗೆಯೇ ಕವಿತೆ ನಮ್ಮ ಮನದ ಪಿಸುಮಾತೂ ಹೌದು. ಬರೆಯುವವಗೆ ಕವಿತೆ ಬರಿಯ skill ಆಗಿಬಿಟ್ಟರೆ ? ಈ ಪ್ರಶ್ನೆ ಆತಂಕ ಹುಟ್ಟಿಸುತ್ತದೆ ! ಕವಿತೆ ಪಿಸುಮಾತಿನ ಜೊತೆಗೆ ಕೊಂಚ introspection ಕೂಡ ಆಗಬೇಕು. ಒಟ್ಟಿನಲ್ಲಿ ಕವಿತೆ ಪ್ರಾಮಾಣಿಕತೆಯನ್ನು ಧ್ವನಿಸಬೇಕು. ಅದಕ್ಕೆ ಕವಿ ಮೊದಲು ಹಾಗಿರಬೇಕು !

    ಧನಂಜಯರ ಈ ಪದ್ಯ ಕವಿಯ ಪ್ರಾಮಾಣಿಕತೆ, ಭೋಳೆತನ, ಬರೆವುದೆಂದರೆ skill ಅಷ್ಟೇಯಾ ?
    ಕವಿ ಸೋಂಬೇರಿಯಾ ? ಸಾಮಾಜಿಕವಾಗಿ ಭದ್ದನಾ ? ಈ ಎಲ್ಲ ಪ್ರಶ್ಮೆಗಳನ್ನ ಕೇಳಿ ಬರೆಯುವವರನ್ನ ಸ್ವಲ್ಪ ಬೆಚ್ಚಿಬೀಳಿಸುತ್ತದೆ !

    ಚೆನ್ನಾಗಿ ಬದುಕುವುದೂ ಒಂದು ಕವಿತೆ ಅಲ್ಲವೇ ? ಬೇಂದ್ರೆ ಬಯಲಲ್ಲಿ ಬೆಂದು ಬರೆದವರು !
    ಅವರ ಬೆಂದ ಬದುಕಿನ ಕವಿತೆ “ ನೀ ಹಿಂಗ s ನೋಡಬ್ಯಾಡ ನನ್ನ !” ರಸಿಕನ ಮನದಲ್ಲಿ ಬೇರೇನೋ ಭಾವನೆ ಮೊಳೆಸಿದರೆ ಅದಕ್ಕೆ ಬೇಂದ್ರೆ ಕಾರಣವೇ ? ಬಸ್ ಟಿಕೆಟ್ನ ಮೇಲೆ ಮಧ್ಯಾಹ್ನದ ಬಿಸಿಲಿನಲ್ಲಿ ಕವಿತೆಬರೆದವರು ಅವರು ಅಷ್ಟೇಅಲ್ಲ ನಮ್ಮೆಲ್ಲ ಕಲ್ಯಾಣ, ದಾಸ, ಬಂಡಾಯ,ದಲಿತ ಜಾನಪದ, ಸಾಹಿತ್ಯ ಮತ್ತು ಅದರ ಕವಿಗಳು ಬಯಲಿನಲ್ಲೆಯೇ ಬದುಕಿದವರು ಮತ್ತು ಅಲ್ಲಿಂದಲೇ ಬರೆದವರಲ್ಲವೇ ?

  2. Parameshwarappa Kudari

    ಸುಂದರ ಕವಿತೆ

  3. T S SHRAVANA KUMARI

    ಒಳ್ಳೆಯ ಕವಿತೆ

  4. Adivala Gangamma

    ಒಳ್ಳೆಯ ಊಹೆ,ಅನಿಸಿಕೆ ಏನಾದರೂ ಅನ್ನಿ ಕವಿತೆಯಂತೂ ತುಂಬಾ ಇಷ್ಟವಾಯಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading