ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವನ ಸಂಕಲನಗಳ ಆಹ್ವಾನ

ಸಿದ್ಧಲಿಂಗ ಪಟ್ಟಣಶೆಟ್ಟಿ ಸಾಹಿತ್ಯ ಪುರಸ್ಕಾರಕ್ಕೆ
ಕವನ ಸಂಕಲನಗಳ ಆಹ್ವಾನ

ಖ್ಯಾತ ಕವಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಸಾಹಿತ್ಯ ಕ್ಷೇತ್ರದ ಅನುಪಮ ಸೇವೆಯನ್ನು ಗೌರವಿಸಿ, ಗದುಗಿನ ಸಾಹಿತ್ಯ ಪ್ರಕಾಶನ ಸಂಸ್ಥೆಯಾದ ಸಾಂಗತ್ಯ ಪ್ರಕಾಶನವು ‘ಸಿದ್ಧಲಿಂಗ ಪಟ್ಟಣಶೆಟ್ಟಿ ಸಾಹಿತ್ಯ ಪುರಸ್ಕಾರ’ವನ್ನು 2005 ರಿಂದ 2009 ರ ವರೆಗೆ ಐದು ವರ್ಷಗಳ ಕಾಲಾವಧಿಯಲ್ಲಿ ಪ್ರಕಟಗೊಂಡ ಸ್ವತಂತ್ರ ಕವನ ಸಂಕಲನಗಳಿಗೆ ನೀಡಲು ನಿರ್ಧರಿಸಿದೆ.
ಈ ಪುರಸ್ಕಾರವು ಹತ್ತು ಸಾವಿರ ರೂಪಾಯಿಗಳ ನಗದು, ಸಮ್ಮಾನ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಪುರಸ್ಕೃತರನ್ನು ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಹುಟ್ಟುಹಬ್ಬವಾದ 26ನೆಯ ಮೇ 2010ರಂದು ಪ್ರದಾನ ಮಾಡಿ ಗೌರವಿಸಲಾಗುವುದು.
2005 ರಿಂದ 2009 ರವರೆಗಿನ ಕಾಲಾವಧಿಯಲ್ಲಿ ಪ್ರಕಟಗೊಂಡ ಸ್ವತಂತ್ರ ಕವನ ಸಂಕಲನಗಳ ನಾಲ್ಕು ಪ್ರತಿಗಳನ್ನು ಪ್ರೊ.ಸಿದ್ದು ಯಾಪಲಪರವಿ, ಸಾಂಗತ್ಯ ಪ್ರಕಾಶನ, #123, 7ನೆಯ ಕ್ರಾಸ್, ಶಿವಾನಂದ ನಗರ, ಕಳಸಾಪೂರ ರಸ್ತೆ, ಗದಗ 582103 ದೂರವಾಣಿ – 9448358040 ಈ ವಿಳಾಸಕ್ಕೆ 25 ಫೆಬ್ರುವರಿ,2010 ರೊಳಗಾಗಿ ತಲುಪಿಸಬೇಕು. ಪುರಸ್ಕಾರಕ್ಕಾಗಿ ಕವಿಗಳು, ಪ್ರಕಾಶಕರು ಹಾಗೂ ಕಾವ್ಯಾಸಕ್ತರು ಕವನ ಸಂಕಲನಗಳನ್ನು ಕಳುಹಿಸಬಹುದು.

‍ಲೇಖಕರು avadhi

24 January, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

2 Comments

  1. k.s.jadhav

    it is good decosion

  2. GOPAL TRASI

    ITS A GREAT DEED, FOR THE GREAT PERSONALITIES
    LIKE DR.PATTANASHETTY. KEEP IT UP GOOD WORK

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading