ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಳೆದ ಖುಷಿಗಳ ಭೂತ..

-ಕವಿತಾ ವಿರೂಪಾಕ್ಷ

ಕಾಲ ಮತ್ತು ನಾನು

ನೀನೊಂದು ಜೀನ ಧರಿಸಿದ ಕುದುರೆ
ಸುಮ್ಮನೆ ಓಡುತ್ತಲೇ ಇರುವೆ
ಜನನವೋ, ಮರಣವೋ
ನೋವೋ, ನಲಿವೋ
ಶಾಂತಿಯೋ, ಯುದ್ದವೋ..?

ನಿನ್ನ ಚಲನೆಯ ನಶೆ ಏರಿಸಿಕೊಂಡ
ಕೆಲವರು; ಭವ್ಯತೆಯನ್ನು
ಬಡಿದು ಕೊಂದರು
ನೋಡಿದೆಯಲ್ಲಾ,
ಗಾಜಾಪೆಟ್ಟಿಯಲ್ಲಿ?

ಭೂತ ವರ್ತಮಾನ ಭವಿಷ್ಯದ
ಯಾವ ಸುಳಿಗೂ ನಿಲುಕದ
ನಿನ್ನ ಜೊತೆ ನಡೆಯುವುದೇ ಬದುಕೋ;ಬಂಡತನವೋ..?

ಅವರಿಂದ ಕಿತ್ತ ಬದುಕನ್ನೆಲ್ಲಾ
ಭೂತದ ಕೂಪಕ್ಕೆ ತಳ್ಳಿ,
ಹೊಸ ಬದುಕ ತರುವ,ತೋರುವ
ನಿನ್ನ ರಫ್ತಾರ್ :ಅಲ್ಲಿನ ಎಳೆ ಕಣ್ಗಳಲ್ಲಿ ಲವಲೇಶವೂ ಇಲ್ಲ.
ಭರವಸೆಯೇ ಕೊಚ್ಚಿ ಹೋಯ್ತಲ್ಲ
ಹರಿದ ಕೋಡಿ ಕಣ್ಣೀರಿನಲಿ.

ಬಾಂಬುಗಳು ಬೀಳುವ ಗಳಿಗೆಯಲ್ಲಾದರೂ
ನಿಧಾನಿಸಯ್ಯಾ
ಅದ ಎಸೆವ ಕೈಗಳಿಗಿಷ್ಟು ಕರುಣೆಬಂದು,
ಕನಸುಗಳ ಸಾವಾದರೂ ತಪ್ಪಲಿ.

ಕಳೆದ ಖುಷಿಗಳ ಭೂತ
ಮನದೊಳಿರುವಾಗ
ನೆತ್ತರ ನಾತ ಬಡಿವ
ಈ ವರ್ತಮಾನ
ಬೇಡವೇ ಬೇಡ.

ಸಾಕಿನ್ನು ಬಿಡು
ಈ ಯುದ್ಧಕಾಂಡ.
ನಿನ್ನ ಕಟ್ಟಳೆಗೆ ದಫನ್ ಆದ
ಆ Rapha ನೆಲದಲ್ಲಿ
ಬಿಳಿ ಹೂವು ಅರಳಿ,
ಶಾಂತಿಯ ಮಳೆ ಹುಯ್ದು
ನೆತ್ತರ ನಾತವೆಲ್ಲಾ ತೊಲಗಿ ಹೋಗಲಿ.
ದ್ವೇಷ ದಾಟಿದ ನಿನ್ನ ಹಾದಿಯಲಿ
ಬಿಳಿ ಪಾರಿವಾಳಗಳು ಹಾರಿ


ಯುದ್ಧವೆಂಬ ಯುದ್ಧದ
ಸಾವಾಗಿಹೋಗಲಿ ..!

‍ಲೇಖಕರು Admin

17 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading