ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕಲ್ಲು ಕಲ್ಲಿನ ನಡುವೆ ಒಲ್ಲೆ ಎನ್ನದ ಜೀವ…’ – ವಿದ್ಯಾ ಕುಂದರಗಿ ಬರೀತಾರೆ

ರೊಟ್ಟಿ, ಅವಳು ಮತ್ತು ಹಾಡು


ವಿದ್ಯಾ ಕುಂದರಗಿ

ಜಟ್ಟಿ ತೊಡೆತಟ್ಟಲು…….
ಗಜಗಮಿಸದ ಗಟ್ಟಿತನ
ಗಟ್ಟಿಗಿತ್ತಿ ರಟ್ಟೆಯಲ್ಲಿರಬೇಕು.
ಬಯಲ ಒಡಲಿನ ಹಸಿವೆಗೆ
ಕಡಲ ಮೀನು,ಕಲ್ಪವೃಕ್ಷಫಲ,
ಮಡು ನಿಂತ ನೀರಿನ ಭತ್ತಕ್ಕಿ
ಅದ್ಯಾವ ಲೆಕ್ಕ?
ಒಡಲ ಮೇಲಿನ ಒಂಟಿಮಳೆ ಹಣಿತಕ್ಕೆ
ಗರ್ಭದಾಳದಿ
ಘಮ್ಮನೆ ಅರಳುವ ಎರೆಮಣ್ಣು
ಇಳುವರಿ ಈಯುವುದು
ಜವ್ವಾರಿ ಜೋಳವಾಗಿ…….
ಬೀಸುತ್ತ, ನಾದುತ್ತ,
ಬಡಿಯುತ್ತ, ಹಿಗ್ಗುತ್ತ,
ಮೂಗುಸೀಳು ಮುಚ್ಚುತ್ತ
ಬೆಂದರೂ ಉಬ್ಬಿಬಿಡುವ
ಅವಳ ಹಾಡಾಗಿ………
 
ಕಲ್ಲು ಕಲ್ಲಿನ ನಡುವೆ
ಒಲ್ಲೆ ಎನ್ನದ ಜೀವ
ಹಿಟ್ಟಾಗಿ ಸೂಸುವುದು
ಬೆಳಕ ಚಲ್ಲಿದಂತೆ,
ಬಿಸಿ ನೀರ ಬೆರಕೆಯಲಿ
ನಾದಿ ಹದವಾದ ಹೃದಯ
ಕಂಪ ಬೀರುವುದು ತಂಪಿನಲ್ಲಿ,
ಕಲ್ಲು ಕೊರಡಿನ ಕೊಣವಿಗೆ
ಬೆತ್ತಲೆದೆಯ ಮೇಲೆ
ತಿರುತಿರುಗಿ ಪೆಟ್ಟು ಬಿದ್ದಷ್ಟು….
ಹಿಗ್ಗುವುದು ದೇಹ ಅರಳಿ
 
ಕತ್ತರಿಸಿ ಕಳಚದಂತೆ
ಎತ್ತಿ ಹರಡುವ ಚಳಕ
ಹಸಿ ಮರಳಿಸದಂತೆ,
ಅಲ್ಲಲ್ಲಿ ಕಪ್ಪು ಮೂಡದಂತೆ ಮೇಲೆಕೆಳಗೂ,
ಹದವಾಗಿ ಬೆಂದು ಬರಬೇಕು
ಒಳಹೊರಗೂ…
 
ಬದುಕು…ಉರಿ ಮೇಲಿನ ಹಂಚು
ಹೆಚ್ಚಿದರೆ…ತಳದ ಬಿಸಿ
ಕರಕಲಾಗುವುದು ರೊಟ್ಟಿ,
ಕಮ್ಮಿಯಾದರೆ ಕಾಕುಳ್ಳು
ಎಲ್ಲವೂ ಹಸಿಬಿಸಿ…
 

‍ಲೇಖಕರು avadhi

22 August, 2013

7 Comments

  1. mmshaik

    nice poem..vidya !

  2. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ

    ‘ಬದುಕು ಉರಿಯ ಮೇಲಿನ ಹಂಚು..’ಸೊಗಸಾದ ಕವಿತೆ.

  3. MANJUNATH.P

    chennaagide, badukina roopaka adbhutavaagide. ‘kaakullu’shabda namma bhaagada jana indigoo balasuttaare..
    superb..

  4. Raghunandan K

    ಇಷ್ಟವಾಯಿತು

  5. veda

    ಬದುಕು…ಉರಿ ಮೇಲಿನ ಹಂಚು ಹೆಚ್ಚಿದರೆ…ತಳದ ಬಿಸಿ ಕರಕಲಾಗುವುದು ರೊಟ್ಟಿ,ಕಮ್ಮಿಯಾದರೆ ಕಾಕುಳ್ಳು ಎಲ್ಲವೂ ಹಸಿಬಿಸಿ…
    Ehstu artha poorna salugalu. Kavana tumba ishtavaythu Vidya

  6. nagraj.harapanahalli

    ಕಲ್ಲು ಕಲ್ಲಿನ ನಡುವೆ
    ಒಲ್ಲೆ ಎನ್ನದ ಜೀವ
    ಹಿಟ್ಟಾಗಿ ಸೂಸುವುದು
    ಬೆಳಕ ಚಲ್ಲಿದಂತೆ………..
    ತುಂಬಾ ಸೊಗಸಾದ ರೂಪಕ ….ಹೆಣ್ಣಿನ ಬದುಕಿನ ಎಂದು ಮುಗಿಯದ ಹಾಡು ಇದು..ಮರೆಯಲಾಗದ ಕವಿತೆ ಕೂಡಾ..

  7. ವಿದ್ಯಾ.ಕುಂದರಗಿ.

    ಕವಿತೆ ಓದಿ ,ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಮತ್ತು ಇಷ್ಟಪಟ್ಟ ಎಲ್ಲರಿಗೂ ನನ್ನ ಖುಷಿಖುಷಿ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading