ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲ್ಬುರ್ಗಿಯನ್ನು ಮತ್ತೆ ಕೊಂದರು..

ಸನತ್ ಕುಮಾರ್ ಬೆಳಗಲಿ 

ಎಡಬಲ ಬೇಡ ಮಧ್ಯಮ ಮಾರ್ಗ ಎಂದು ಗಿರಡ್ಡಿ ಅವರು ಹೇಳಿದಾಗಲೆ ಅವರು ಬಲಪಂಥಿಯರನ್ನು ಒಲೈಸುತ್ತಿದ್ದಾರೆಂದು ಗೊತ್ತಾಗಿತ್ತು ಆದರೆ ಸಾಹಿತ್ಯ ಸಂಭ್ರಮ ವೇದಿಕೆಯನ್ನು ಸಂವಿಧಾನ ಒಪ್ಪದ ಹಿಂದುರಾಷ್ಟ್್ರ ನಿರ್ಮಾಣದ ಗುರಿ ಹೊಂದಿದ ಸಂಘಪರಿವಾರಕ್ಕೆ ಬಿಟ್ಟು ಕೊಡುತ್ತಾರೆ ಅಂದುಕೊಂಡಿರಲಿಲ್ಲ ಅಲ್ಲಿ ನಿನ್ನೆ ಕಲಬುರಗಿ ಅವರ ಹತ್ಯೆಯ ಬಗ್ಗೆ ಮಾತಾಡಿದ ಮಂಜನಾಥ ಅಜ್ಜಂಪುರ ಆರ್ ಎಸ್ ಎಸ್ ಪ್ರಚಾರಕ ಇಂಥ ಸಂಭ್ರಮಕ್ಕೆ ಕನ್ನಡ ಸಂಸ್ಕೃತಿ ಇಲಾಖೆ ನೆರವು ನೀಡಿದೆ

ಧನಂಜಯ ಕುಲಕರ್ಣಿ

ಸರ್! ಈ ಸಂಭ್ರಮದಲ್ಲಿ ನಾನೂ ಇದ್ದೇನೆ. ಅಲ್ಲಿ ನಡೆದಿರುವ ಚರ್ಚೆಯೇ ಬೇರೆ, ಮಾಧ್ಯಮದವರು ಅದನ್ನು ತೋರಿಸುತ್ತಿರುವುದೇ ಬೇರೆ. ತನಿಖೆ ಪೂರ್ತಿಯಾಗದ ಹೊರತು ಯಾವುದೇ ಒಂದು ನಿರ್ಧಿಷ್ಠ ನಿರ್ಧಾರಕ್ಕೆ ಬರಬಾರದು. ತನಿಖೆಯನ್ನು ಬೇಗ ಮುಗಿಸಿ ತಪ್ಪಿತಸ್ಥರನ್ನು ಬಂಧಿಸಿ, ಶಿಕ್ಷಿಸಿ ಎಂದು ಒತ್ತಡ ಹೇರಬೇಕೇ ಹೊರತು, ಸ್ವಯಂ ಘೋಷಿತ ನಿರ್ಧಾರ ತರವಲ್ಲ.

ಕೈದಾಳ ಕೃಷ್ಣಮೂರ್ತಿ

ನೀವು ಅಲ್ಲಿ ಇರುವುದಾದರೆ ಮಂಜುನಾಥ ಅಜ್ಜಂಪುರ ಮಾತನಾಡಿದ್ದರಲ್ಲಿ ಬರೀ ಮಾಧ್ಯಮದವರ ಪಾತ್ರವಿದೆಯೇ? ಹಾಗಾದರೆ ಸಭಿಕರು ಗದ್ದಲವೆಬ್ಬಿಸಿದ್ದರಲ್ಲೂ ಮಾಧ್ಯಮದವರ ಕೈಯಿತ್ತೆ? ಸ್ಪಷ್ಟಗೊಳಿಸಿ

ಮಮತಾ ಅರಸೀಕೆರೆ

ಮಾಧ್ಯಮ ಅಲ್ಲ . ಅವರು ಮಾತಾಡಿದ್ದು ಹಾಗಿತ್ತು .
ಆರಂಭದಿಂದಲೂ ಅವೈಜ್ಞಾನಿಕವಾಗಿಯೇ ಮಾತಾಡ್ತಿದ್ರು . ಆದರೂ ಅಭಿಪ್ರಾಯವನ್ನು ಗೌರವಿಸುತ್ತಾ ಕುಳಿತಿತ್ತು ಸಭೆ .

ಶೋಷಣೆ ದೌರ್ಜನ್ಯದಲ್ಲಿ ಪರಂಪರೆಯದೇನೂ ತಪ್ಪಿಲ್ಲ ಎಂದಾಗ ತಣ್ಣಗೆ ಅಸಮಾಧಾನ ಹೊಗೆಯಾಡತೊಡಗಿತು . ಎಂ ಎಂ ಕಲ್ಬುರ್ಗಿಯವರ ಬಗ್ಗೆ ಮಾತು ಬಂದಾಗ ಎಸ್ಕೇಪಿಸ್ಟ್ ತರ ಮಾತಾಡತೊಡಗಿ ಆಸ್ತಿ ವಿಚಾರದ ಬಗ್ಗೆ ‘ ಟಂಗ್ ಸ್ಲಿಪ್’!!! ಆಗಿ ಆಡಿಬಿಟ್ರು .

ತಕ್ಷಣ ಎದ್ದಿದ್ದು ವಿರೋಧಿ ಅಲೆ. ಸುಮಾರು ಮಂದಿ ವೇದಿಕೆ ಮುಂಭಾಗಕ್ಕೆ ಧಾವಿಸಿದ್ರು. ಕೈಲಿ ಮೈಕ್ ಹಿಡಿದಿದ್ದ ನಾನೂ ಜೋರ್ ಜೋರಾಗಿ ಕೂಗಾಡಿಬಿಟ್ಟೆ. ಮಂಜುನಾಥರವರು ತಮ್ಮ ಮಾತನ್ನ ವಾಪಸ್ ತಗೊಂಡ್ರು. ಎಡಕ್ಕೂ ಬಲಕ್ಕೂ ಇರೊ ವ್ಯತ್ಯಾಸ ಇಷ್ಟೆ ಎಡಬಿಡಂಗಿಗಳು , ಜೀವ ವಿರೋಧಿ ಹೇಳಿಕೆ … ಎಂದೆಲ್ಲ ಕೂಗಾಡಿದ್ದು ಹೌದು .

ಟೋಟಲಿ ಮಧ್ಯಮ ಮಾರ್ಗವೆಂಬುದು ನುಣುಚಿಕೊಳ್ಳುವ ಸೇಫ್ಟಿ ಜೋನಲ್ಲಿ ಹೋಗಿ ಸೇರ್ಕೊಳ್ಳುವ ದಾರಿ …
ಎಡವೆಂದರೆ ಬರೀ ಕಮ್ಯುನಿಸ್ಟ್ ಎಂಬಂತಾಗಿ, ದಲಿತ ದಮನಿತರ ಬಗ್ಗೆ ಪ್ರಸ್ತಾಪ ಆಗಲಿಲ್ಲ

ಕಳಲೆ ಪಾರ್ಥಸಾರಥಿ

ಮೂರೂ ಹತ್ಯೆ ಗಳಿಗೂ ಒಂದೇ ಕಡೆಯಿಂದ ಗುಂಡು ಸರರಾಜಾಗಿದೆ ಅಂತ ಮಹಾರಾಷ್ಟ್ರ ಪೊಲೀಸ್ ನಿನ್ನೆ ಹೇಳಿದ್ದಾ ರೆ

ಸಂಧ್ಯಾರಾಣಿ

ಸರ್ ಅಲ್ಲಿ ನಾನೂ ಇದ್ದೇನೆ. ಮಂಜುನಾಥ ಅಜ್ಜಂಪುರ ಅವರು ಆ ಬೇಜವಾಬ್ದಾರಿ ಹೇಳಿಕೆ ನೀಡಿದಾಗ ಎದ್ದ ಪ್ರತಿಭಟನೆಯ ಅಲೆಯನ್ನು ನೀವು ನೋಡಬೇಕಿತ್ತು. ಮಮತಾ, ನೀನು ಕೂಗಾಡಿದ್ದು ನೋಡಿ ವಿಪರೀತ ಖುಷಿ ಪಟ್ಟೆ, ಆಗ ಚಾ ಕುಡಿಯಲು ಹೊರಗೆ ಬಂದಿದ್ದೆ, ಇಲ್ಲದಿದ್ದರೆ ನಾನೂ ನಿನ್ನ ಜೊತೆಗಿರುತ್ತಿದ್ದೆ.

‍ಲೇಖಕರು admin

21 January, 2017

1 Comment

  1. BVKulkarni

    It is too much to dictate to Professor Giraddi Govindraj. He is as important as Professor Kalaburgi. You cannot curtail rights of Mr Giraddi. Giraddi used to be very vocal against his own community men. They need not be from Maharashtra and Kolhapur. He was not liked as a group of his community did not like his outbursts. For this nothing could be atributed to Hindu Fundamentalists as Mr Kalaburgi had not attached RSS and extreme Hindu elements. It is our state Police did not venture to arrest as they proceeded against Extreme Hindu elements. In Dharwad many know that culprit is from Dharwad as Kalaburgi was attacking Lingayaytism.
    Professor Giraddi he was my Lecturer in Karnataka College, I appreciate his stand. Rightist and Leftist is frame of Individual Mind. That way I am centerist. I am not leftist nor Sangha Parivari. Where these people put me. Getting Kanada Culture Grants is not to promote leftist ideas. It is Professor Giraddi,s right to get as he has done much contribution to Kanada and English. It is unbecoming to ask Giraddi to dance to play to the tune of Leftists. We have seen enough of Leftist ideology and sick of it. I would like to clarify here that I am certainly not supportive of BJP. RSS too.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading