ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕಲಿಯುಗ ಶ್ರೀ ರಾಮಚಂದ್ರನ ಸ್ಥಾನ ಖಾಲಿ ಸಧ್ಯಕ್ಕೆ…' – ಶೋಭಾ ರಾಣಿ

ಎರಡು ಕವಿತೆಗಳು

ಶೋಭಾ ರಾಣಿ


ನಿನ್ನ ನೆನಪುಗಳ ಸಂತೆಯಲ್ಲಿ ದಾರಿ ತಪ್ಪಿದ್ದೇನೆ ಹುಡುಗ..
ನೀ ಬಂದು ನಮ್ಮ ಗಮ್ಯದೆಡೆಗೆ ಕರೆದೊಯ್ಯುವುದು ಯಾವಾಗ..
 
ಸುಖಾ ಸುಮ್ಮನೆ ಭಯವಾಗುತ್ತಿದೆ, ನೀ ಬಂದು ಬಿಡು ಬೇಗ..
ಅರಿವಿಲ್ಲದಂತೆ ಜಾರುತ್ತಿದೆ ನಾ ನಿಂತ ಜಾಗ…
 
ಮೈ ಮನಗಳ ತುಂಬಾ ಹೊತ್ತು ನಿಂತಿದ್ದೇನೆ ನಾ ನಿನ್ನ..
ತಾಳಲಾಗುತ್ತಿಲ್ಲ ಭಾರ, ಬಂದು ಸೇರಿಬಿಡು ನಾ ಬೀಳುವ ಮುನ್ನ..
 
ನನ್ನ ನಿದ್ರೆಇರದ ಎಷ್ಟೋ ರಾತ್ರಿಗಳಿಗೆ ಜೊತೆಗಾರ ಆ ಮೇಲಿರುವ ಚಂದಿರ..
ನಿನ್ನ ಊರಿನ ದಾರಿ ಕಾಯುತ್ತಿರುವ ನನ್ನ ಕಣ್ಣು ಗಳಿಗೆ ನಿನ್ನದೇನು ಉತ್ತರ..
 

ಅಳೆದು ತೂಗಿ ಬಂದೆ ಒಂದು ನಿರ್ಧಾರಕ್ಕೆ


ಇರುವಳೊಬ್ಬಳೆ ಹೆಂಡತಿ ಅಪ್ರತಿಮ ಸುಂದರಿ
ನನ್ನ ಮುದ್ದಿನ ಮಗಳೋ ದೇವಲೋಕದ ಕಿನ್ನರಿ
ಮನೆ ತುಂಬಾ ನಲಿದಾಡುತ್ತಿದೆ ಹೊನ್ನ ಸಿರಿ
 
ಇನ್ನೇನು ಬೇಕು ಹಚ್ಚಲು ಕಿಚ್ಚು ಸ್ವರ್ಗಕ್ಕೆ
ಅರೆರೆ ಇವಳ್ಯಾವಾಗ ಬಂದಳು ಗೊತ್ತಿಲ್ಲದೇ ಪಕ್ಕಕ್ಕೆ
ಈ ಕಲಿಯುಗ ಶ್ರಿ ರಾಮಚಂದ್ರನ ಎದೆಯೊಡೆಯಲಿಕ್ಕೆ
 
ಮನೆಯಲ್ಲಿರುವಾಗ ಅಪ್ಸರೆಯಂತಹ ಸತಿ
ಬಯಸಿದರೆ ಅನ್ಯ ಸ್ತ್ರೀ ಎನಾಗುವುದು ನನ್ನಗತಿ
ಗಾಳಿಗೆ ತೂರಲಾದಿತೇ ಸಮಾಜದ ರೀತಿ ನೀತಿ
 
ಆದರೂ ಅಂಡೆಲೆಯುತ್ತಿದ್ದೆಯಲ್ಲ ಈ ಮರ್ಕಟ ಮನ ಅವಳ ಹಿಂದೆ
ಇನ್ಯಾರು ಗತಿ ನನ್ನ ಸಂಸಾರಕ್ಕೆ ಮುಂದೆ
 
ನನ್ನ ಮಡದಿಯೊಬ್ಬಳೇ ಹೆಗಲು ಕೊಟ್ಟಿದ್ದಾಳೆ ಸಂಸಾರದ ನೊಗಕ್ಕೆ
ಕಿಂಚಿತ್ತಾದರು ನಾ ಅವಳಿಗೆ ಸಹಾಯ ಮಾಡಬಾರದೇಕೆ
ಕೂಡಿ, ಕಳೆದು, ಅಳೆದು ತೂಗಿ ಬಂದೆ ಒಂದು ನಿರ್ಧಾರಕ್ಕೆ
 
ಇವಳೀಗ ಎರಡನೇ ಸತಿಯಾಗಿ ನನ್ನ ತೆಕ್ಕೆಗೆ
ಕಲಿಯುಗ ಶ್ರೀ ರಾಮಚಂದ್ರನ ಸ್ಥಾನ ಖಾಲಿ ಸಧ್ಯಕ್ಕೆ……….
 

‍ಲೇಖಕರು avadhi

3 May, 2013

6 Comments

  1. narayan raichur

    yeradoo kavanagaloo gamana seleyuttave ; bashe-bandha-vastu-niroopsane galalli biguvide -yeradane kavanbadalli vyanga-vidambane chennaagide, aarambhada -madhyadalli innastu biguvu bekittu yenisuttade – GOOD !! – narayan raichur (Ranga vimarshaka-rangakarmee)

    • Dr. Shobha Rani

      Narayan sir..thank u for ur kind suggestions..

  2. GURURAJ KATHRIGUPPE

    you are really on the way of being a good kannada poet, first poem is very good ,impressed with it’s simplicity, beauty,second one needs improvement.I am looking forward for more poems. keep on writing.

    • Dr. Shobha Rani

      Gururaj sir..thank u..ur comments inspires to write more..

  3. Parvathi.D.V

    very good shobha…

  4. Gangadhar

    nice poems ma’m:)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading