ಗೊರೂರು ಶಿವೇಶ್
ಭಾರತ ಇಂಗ್ಲೆಂಡ್ ವಿರುದ್ಧ ಟೆಸ್ಟ್ ನಲ್ಲಿ ಹೀನಾಯವಾಗಿ ಸೋತಿದೆ. ಜೊತೆಗೆ ಟೆಸ್ಟ್ ರ್ಯಾಂಕಿಂಗ್ನಲ್ಲಿ ಐದನೆ ಸ್ಥಾನಕ್ಕೆ ಕುಸಿದಿದೆ. ಪಂದ್ಯಗಳಲ್ಲಿ ಸೋಲು-ಗೆಲುವು ಸಹಜ. ಆದರೆ ಹೋರಾಡಿ ಸೋತರೆ ಕನಿಷ್ಠ ಸೋತ ತಂಡದ ಬಗ್ಗೆ ಅನುಕಂಪವಾದರೂ ಇರುತ್ತದೆ. ಆದರೆ ಕೊನೆಯ ಎರಡು ಟೆಸ್ಟ್ಗಳನ್ನು ಮೂರೇ ದಿನಕ್ಕೆ ಸೋತು ಕ್ರಿಕೆಟ್ ದಿಗ್ಗಜರೆಂದು ಹೆಸರಾಗಿದ್ದ ಭಾರತ ತಂಡದವರು ಮಕಾಡೆ ಮಲಗಿದ್ದಾರೆ.
ಅತ್ತ ಕ್ರಿಕೆಟನ್ನು ಕಲಿಸಿದ ಗುರುಗಳೆದುರು ತೊಡೆತಟ್ಟಿ ಸೆಣಸಿ ಬಹಳಷ್ಟು ಪಂದ್ಯಗಳಲ್ಲಿ ವಿಜಯ ಸಾಧಿಸಿದ ಭಾರತ ಇಂದು ಅವರ ನೆಲದಲ್ಲಿಯೇ ಸೋತು ಶರಣಾಗುತ್ತಿರುವಂತೆಯೆ ಇತ್ತ ಭಾರತದಿಂದ ಸಂತಸದ ಘಟನೆಯೊಂದು ಘಟ್ಟಿಸುತ್ತಿದೆ. ಅದುವೆ ಭಾರತದ ಗ್ರಾಮೀಣ ಕ್ರೀಡೆಯೆಂದೆ ಹೆಸರಾದ ಕಬಡ್ಡಿಗೆ ಇನ್ನಿಲ್ಲದಂತೆ ಜನಾದರಣೆ ದೊರಕುತ್ತಿರುವುದು. ಐ.ಪಿ.ಎಲ್. ಮಾದರಿಯಲ್ಲಿಯೆ ಸಂಘಟಿತವಾಗುತ್ತಿರುವ ಪ್ರೊ ಕಬಡ್ಡಿಯ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದ್ದು ಸ್ಟಾರ್ ಸ್ಪೋರ್ಟ್ಸ್ನ ಜೊತೆಗೆ ಸುವರ್ಣ ಪ್ಲಸ್ನಂತಹ ಸ್ಥಳೀಯ ಛಾನಲ್ನಲ್ಲೂ ಪ್ರಸಾರ ಹೊಂದುತ್ತಿದೆ. ಪ್ರಾರಂಭದ ದಿನಗಳ ಟಿ.ಆರ್.ಪಿ.ಯೂ ವರ್ಲ್ಡ್ ಕಪ್ ಫುಟ್ಬಾಲ್ ಗಿಂತಲೂ ಹೆಚ್ಚಾಗಿದೆ.
ಭಾರತೀಯ ಕ್ರೀಡೆಗಳೆಲ್ಲವು ಬಹುತೇಕ ಸರಳ. ಅದೂ ಕಬಡ್ಡಿಯಾಗಿರಬಹುದು, ಕೋಕೋ ಆಗಿರಬಹುದು. ಆದರೆ ಕ್ರಿಕೆಟ್ನ ಭರಾಟೆಯಲ್ಲಿ ಈ ಆಟಗಳು ಪ್ರೋತ್ಸಾಹವಿಲ್ಲದೆ ಸೊರಗಿಹೋಗುತ್ತಿವೆ. ನಾವು ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿದ್ದಾಗ ಶಾಲೆಯಲ್ಲಿ ಸಾಮಾನ್ಯವಾಗಿ ಆಡಿಸುತ್ತಿದ್ದ ಎರಡು ಕ್ರೀಡೆಗಳು ಇವೆ ಆಗಿದ್ದವು.

ಗೇಮ್ಸ್ ಪೀರಿಯಡ್ನಲ್ಲಿ ಆಚೆಗೆ ಕಳುಹಿಸಿದಾಗ ಹೆಚ್ಚು ಮಕ್ಕಳು ಕೋಕೋ ಆಡುತ್ತಿದ್ದರೆ ಗಂಡು ಮಕ್ಕಳಿಗೆ ಕಬಡ್ಡಿ. ಪ್ರತಿದಿನ ಕೊನೆಯ ಪಿರಿಯಡ್ ಬಹುತೇಕ ಎಲ್ಲಾ ಮಕ್ಕಳು ಮೈದಾನದಲ್ಲಿರುತ್ತಿದ್ದರು. ಆಗ ಮೈದಾನಕ್ಕೆ ಬರುತ್ತಿದ್ದ ಕೆಲ ಶಿಕ್ಷಕರು ನಮ್ಮೊಂದಿಗೆ ವಾಲಿಬಾಲ್ನಲ್ಲಿ ಜೊತೆಗೂಡುತ್ತಿದ್ದರೆ ಮತ್ತೆ ಕೆಲವರು ಕಬಡ್ಡಿ ಆಟದಲ್ಲಿ ಎರಡು ತಂಡಗಳನ್ನು ವಿಭಾಗಿಸಿ ಒಂದೊಂದು ತಂಡಕ್ಕೆ ಒಬ್ಬೊಬ್ಬ ಶಿಕ್ಷಕರು ಬೆಟ್ ಮಾಡುವುದರ ಮೂಲಕ ರಂಗೇರಿಸುತ್ತಿದ್ದರು. ಕೊನೆಯ ಬೆಂಚಿನಲ್ಲಿ ಪಾಠದ ಪಿರಿಯಡ್ನಲ್ಲಿ ತಲೆತಗ್ಗಿಸಿ ಕೂತು ಉಳಿದಂತೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ದಡಿಯ ವಿದ್ಯಾಥರ್ಿಗಳು ಇಲ್ಲಿ ತಾವೇ ತಾವಾಗಿ ಮೆರೆಯುತ್ತಿದ್ದರು. ‘ಆಟಕ್ಕುಂಟು ಲೆಕ್ಕವಿಲ್ಲ’ ಎಂಬಂತೆ ತಂಡದಲ್ಲಿರುತ್ತಿದ್ದ ನಾವು ಸುಮ್ಮನೆ ಸೈಡಿನಲ್ಲಿ ನಾಮಾಕಾವಸ್ತೆ ಇರುತ್ತಿದ್ದವು. ಉಳಿದವರೆಲ್ಲರೂ ಔಟಾದಾಗ ವಿಧಿಯಿಲ್ಲದೇ ರೈಡಿಂಗ್ಗೆ ಹೋದಾಗ ಬ್ರೆಥ್ ಲೈನ್ ಮುಟ್ಟಲು ಕೂಡ ಅವಕಾಶ ನೀಡದೆ ಗೋಳು ಹುಯ್ದು ಕಡ್ಡಿ ಎತ್ತಿದಂತೆ ಮೇಲೆತ್ತುತ್ತಿದ್ದರು. ಮುಂದೆ ಕ್ರಿಕೆಟ್ ಶಾಲಾ ಕಾಲೇಜುಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ಪ್ರಾರಂಭವಾದಾಗ ದೇಸೀಯ ಕ್ರೀಡೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ.
ಮುಂದೆ ಕಬಡ್ಡಿ ಏಷ್ಯನ್ಗೇಮ್ಸ್ಗೆ ಸೇರ್ಪಡೆಗೊಂಡು ಭಾರತಕ್ಕೆ ಚಿನ್ನ ದೊರೆಯುವ ಖಚಿತ ಆಟವೆಂದರೆ ಕಬಡ್ಡಿ ಎನ್ನುವ ಮಟ್ಟಕ್ಕೆ ಮುಟ್ಟಿತು. ನೆರೆಯ ಪಾಕಿಸ್ತಾನ, ಚೀನಾ, ಬಾಂಗ್ಲಾಗಳು ಪೈಪೋಟಿ ನೀಡುತ್ತಿವೆಯಾದರೂ ಇದುವರೆವಿಗೂ ಚಿನ್ನದ ಬೇಟೆಗೆ ಭಂಗವಾಗಿಲ್ಲ. ಇದನ್ನು ಒಲಂಪಿಕ್ಸ್ಗೂ ಸೇರ್ಪಡೆಗೊಳಿಸುವ ಪ್ರಯತ್ನ ಸಾಗಿದೆ.
ಕಬಡ್ಡಿ ಬಹಳ ಮುಖ್ಯವಾಗಿ ದೀರ್ಘಕಾಲದವರೆಗೂ ಉಸಿರುಕಟ್ಟುವ ಕ್ರಿಯೆಯನ್ನು ಹೇಳಿಕೊಡುವ ಆಟ. ಕಬಡ್ಡಿ ಪದದ ಉಚ್ಛಾರಣೆಯ ಸಂದರ್ಭದಲ್ಲಿ ಉಸಿರನ್ನು ಒಳಗೆ ತೆಗೆದುಕೊಳ್ಳುವುದು ಬಿಡುವುದು ಅಸಾಧ್ಯ. ಅದಕ್ಕಾಗಿ ಕಬಚ್ಚಿ-ಕಬಚ್ಚಿ ಎಂದು ಕೆಲವರು ಆಡಿ ಮೋಸ ಮಾಡಲು ಹೊರಡುವರಾದರೂ ಅದಕ್ಕೆ ಮಾನ್ಯತೆಯಿಲ್ಲ. ಕಬಡ್ಡಿ ಒರಟಾಟವೂ ಹೌದು. ರೈಡಿಂಗ್ ಮಾಡುವವನ ಮೇಲೆ ಆಟಗಾರರೆಲ್ಲರೂ ಮುಗಿಬೀಳುವುದರಿಂದ ಏಟಾಗುವ ಸಾಧ್ಯತೆಗಳೂ ಹೆಚ್ಚು. ಹೀಗಾಗಿ ಅನೇಕ ಪೋಷಕರು ಮಕ್ಕಳನ್ನು ಈ ಆಟವಾಡಲು ಪ್ರೋತ್ಸಾಹಿಸುವುದಿಲ್ಲ. ಆದರೆ ಎಲ್ಲಾ ಆಟಗಳಿಗೂ ಅದರದೇ ಆದ ರಿಸ್ಕ್ ಗಳಿರುತ್ತವೆ. ಅಂತೆಯೆ ಕಬಡ್ಡಿಯಲ್ಲೂ ಕೂಡಾ.
ಬಹಳಷ್ಟು ಹಳ್ಳಿಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ ಕಬಡ್ಡಿ ಟೂರ್ನಮೆಂಟ್ಗಳು ಸಾಕಷ್ಟು ನಡೆದಿವೆ. ಕಾರಣ ಇಷ್ಟೆ. ಕಬಡ್ಡಿಯ ಕೋಟರ್್ಗಳನ್ನು ಕೆತ್ತಿದರೆ ಮುಗಿಯಿತು. ಸುಣ್ಣ ಇಲ್ಲವೆ ರಂಗೋಲಿಯನ್ನು ಬಿಟ್ಟು ಅಂಕಣ ತಯಾರಿ ಮಾಡಿದರೆ ಯಾವುದೇ ಖಚರ್ಿಲ್ಲದೇ ಪಂದ್ಯಾವಳಿಯನ್ನು ಮುಗಿಸಬಹುದು.
ಇನ್ನೂ ಪ್ರೋ ಕಬಡ್ಡಿಯನ್ನು ಆಟವನ್ನು ಹೆಚ್ಚು ಆಕéರ್ಷಣೀಯಗೊಳಿಸಲು ಅನೇಕ ನಿಯಮಗಳನ್ನು ರೂಪಿಸಲಾಗಿದೆ. ಆಟವನ್ನು ಇಪ್ಪತ್ತು ನಿಮಿಷಗಳ ಎರಡು ಹಂತಗಳನ್ನಾಗಿ ರೂಪಿಸಿದ್ದಾರೆ. ರೈಡಿಂಗ್ಅನ್ನು ಮೂವತ್ತು ಸೆಕೆಂಡಿಗೆ ಸೀಮಿತಗೊಳಿಸಲಾಗಿದೆ. ಬೋನಸ್ ಗೆರೆಯನ್ನು ನಿಮರ್ಿಸಲಾಗಿದ್ದು ಎಲ್ಲಾ ಆಟಗಾರರು ಅಂಕಣದಲ್ಲಿದ್ದಾಗ ಅದನ್ನು ಮುಟ್ಟಿದರೆ ಬೋನಸ್ ಅಂಕ ದೊರೆಯಲಿದೆ.
ಇದೇ ರೀತಿ ಜನಪ್ರಿಯಗೊಳಿಸಬಹುದಾದ ಮತ್ತೊಂದು ಆಟ ಖೋಖೋ. ಇದು ಕೂಡಾ ಹೆಚ್ಚು ಖಚರ್ಿಲ್ಲದ ಆಟ. ಕಡಿಮೆ ಅವಧಿಯಲ್ಲಿ ಮುಗಿದುಹೋಗುವ ಆಟ. ಪಾದ ಚಲನೆ, ಎದುರಾಳಿಯಿಂದ ತಪ್ಪಿಸಿಕೊಳ್ಳುವ ಚಾಣಾಕ್ಷತೆ, ವೇಗವಾಗಿ ಓಡುವಿಕೆ ಮುಂತಾಗಿ ಖೋಖೋ ಕೌಶಲ್ಯಭರಿತ ಆಟವೂ ಆಗಿದೆ.
ಕಬಡ್ಡಿ ಆಟ ಜನಪ್ರಿಯಗೊಳ್ಳಲು ಬಾಲಿವುಡ್ ಆಟಗಾರರ ಕೊಡುಗೆಯು ಸಾಕಷ್ಟಿದೆ. ಅಮೀರ್ ಖಾನ್, ಶಾರೂಖ್ ಖಾನ್, ಅಮಿತಾಬ್, ಕುಟುಂಬ ಇವರ ಜೊತೆಗೆ ತೆಲುಗು ಚಿತ್ರರಂಗದ ನಟರೂ ಭಾಗವಹಿಸುತ್ತಿದ್ದು ಆಟದ ರಂಗನ್ನು ಹೆಚ್ಚಿಸುತ್ತಿದ್ದಾರೆ.
‘ಹಣತೆಗಳಿವೆ, ಹಚ್ಚುವವರಿಲ್ಲ’ ಎನ್ನುವಂತೆ ಎಲ್ಲಾ ಆಟಗಳಿಗೂ ಅದರದೇ ಆದ ಆಕರ್ಷಣೆಯಿದೆ. ಆ ಆಕರ್ಷಣೆಯನ್ನು ಮುಂದುಮಾಡಿ ಆ ಆಟವನ್ನು ಸೆಲೆಬ್ರಿಟಿಗಳ ಭಾಗವಹಿಸುವಿಕೆಯಿಂದ ಜನಪ್ರಿಯಗೊಳಿಸಿದರೆ ಕಬಡ್ಡಿ-ಖೋಖೋನ ಜೊತೆಗೆ ಇತರೆ ಗ್ರಾಮೀಣ ಕ್ರೀಡೆಗಳನ್ನು ಜನಪ್ರಿಯಗೊಳಿಸಲು ಸಾಧ್ಯ.






shareerada ella angagaliguu vyaama dorakuva namma deshi kreedegalannu janapriya golisabeku ennuvudu tumbaa sari.kriketinataha aatagalalli onde angakke hechhu stress dorakuvudarinda aagirabahudu aatagaararige operation ityaadigalu bekgibaruvudu. kriketanne holuva aadare adakkintha bhinnavaagi vaividhyamaya varasegalinda ella angagaliguu vyayaama dorakisuva talema emba aatavannu chikkandinalli naavu aaduthiddudu chenaagi nenapide.aadare indu adu kriketina daalige moolegumpaagide.
ಕಬಡ್ಡಿ ಆಟ ಮತ್ತಷ್ಟು ಪ್ರಸಿದ್ಧವಾಗುತ್ತಿದೆ ಎನ್ನುವದನ್ನು ಕೇಳಿ ಸಂತಸವಾಯಿತು.ಇನ್ನು ಕಬಡ್ಡಿ ಒಂದು ದಕ್ಷಿಣ ಭಾರತದ ಆಟ. ಕಬಡ್ಡಿ ಈ ಶಬ್ದದ ಮೂಲ ನಮ್ಮ ಹಳಗನ್ನಡ(ಅಥವಾ ದ್ರಾವಿಡ). ಕೈಪಿಡಿ(ಕೈ-ಕೈ ಯನ್ನು ಹಿಡಿದುಕೊಂಡು ಆಡುವ ಆಟ ಅಂತ ಈ ಹೆಸರು)ಯಲ್ಲಿಯ ನಡುವಿನ ಪ ಕ್ಕೆ ಬ ಆದೇಶವಾಗಿ ಕಬಡ್ಡಿ ಆಗಿದೆ.
ಆಸಕ್ತರು,ಗೊತ್ತಿರುವವರು ಇ ವಿಷಯದ ಮೇಲೆ ಇನ್ನೂ ಹೆಚ್ಚಿನ ಬೆಳಕ ಚೆಲ್ಲಬಹುದು