ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ಪುಸ್ತಕ ದಿನಾಚರಣೆ ಫೋಟೋ ಆಲ್ಬಂ..

ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ವಿಶ್ವ ಪುಸ್ತಕ ದಿನ ಮತ್ತು ಸಾಧಕರಿಗೆ ಗೌರವಾರ್ಪಣೆ ಸಮಾರಂಭವನ್ನು ಬಿಎಂಶ್ರೀ ಪ್ರತಿಷ್ಠಾನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಡಾ ಸಿ ಸೋಮಶೇಖರ್‌ ಹಾಗೂ ಕನ್ನಡಪ್ರಭ ಪುರವಣಿಯ ಪ್ರಧಾನ ಸಂಪಾದಕರು ಜೋಗಿ ಮುಖ್ಯ ಅತಿಥಿಗಳಾಗಿದ್ದರು.

ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯ ಅಧ್ಯಕ್ಷತೆ ವಹಿಸಿದ್ದರು.

ವಿಕ್ರಂ ಪ್ರಕಾಶನದ ನಂದಾ ಹರಿಪ್ರಸಾದ್‌, ಜ್ಞಾನಯೋಗಿ ಪ್ರಕಾಶನದ ಜ್ಞಾನಯೋಗಿ, ಪುಸ್ತಕ ಪರಿಚಾರಕರು ರಾಮಚಂದ್ರಯ್ಯ, ಕನ್ನಡ ಪರಿಚಾರಕಿ ಶೋಭಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಕಾರ್ಯದರ್ಶಿ ಸಪ್ನ ಬುಕ್ ಹೌಸ್ ನ ಆರ್‌ ದೊಡ್ಡೇಗೌಡ ಸ್ವಾಗತಿಸಿದರು. ಸ್ನೇಹ ಬುಕ್ ಹೌಸ್ ನ ಕೆ ಬಿ ಪರಶಿವಪ್ಪ ಕಾರ್ಯಕ್ರಮ ನಿರ್ವಹಿಸಿದರು.

‍ಲೇಖಕರು avadhi

24 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading