
1
ಸದ್ಯಕ್ಕೆ ಸ್ವಲ್ಪೇ ಸ್ವಲ್ಪೇ ಧ್ಯಾನ ಕಲಿತರೂ ಸಾಕು.
ಗೋರಿಗೆ ಶೀಫ್ಟ್ ಆದ ಮೇಲೆ
ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡರಾಯ್ತು.
2
ಐ ಯಾಮ್ ವೆರೀ ಡೌನ್ ಟು ದ ಅರ್ತ್
ಎಂದು ಪದೇ ಪದೇ ಬಡಾಯಿ ಕೊಚ್ಚುಕೊಳ್ಳುತ್ತಿದ್ದೆ.
ದೂರದಲ್ಲಿ ಸ್ಮಶಾನಗಳು ಬಾಯಿ ಚಪ್ಪರಿಸಿಕೊಳ್ಳುತ್ತಿದ್ದವು.
3
ಮೀನುಗಳು ಮೈಥುನಕ್ಕಿಳಿದ್ದಿದ್ದನ್ನ
ಕಂಡ ಸಮುದ್ರ ತನ್ನಲ್ಲಿ ಬಂದು ಸೇರಿಕೊಳ್ಳುತ್ತಿದ್ದ
ನದಿಗಳನ್ನ ಮೋಹಿಸತೊಡಗಿತು.
4
ಮುದುಕಿಯ ಸುಕ್ಕುಗಟ್ಟಿದ್ದ ಚರ್ಮವನ್ನ ಕಂಡ
ಮುದುಕ ತನ್ನ ಯೌವ್ವನದ ಒಣ ಪುಂಢಾಟಿಕೆಗಳನ್ನ
ಅರೆಕ್ಷಣ ನೆನೆದು ಶಪಿಸಿಕೊಂಡ.
5
ತನಗೆ ಸಂಬಂಧಪಡದ ವಿಷಯಗಳಿದ್ದರೆ
ನಾಯಿ ತೆಪ್ಪಗೆ ಬಾಲ ಅಲ್ಲಾಡಿಸಿಕೊಂಡು ನಡೆದು ಬಿಡುತ್ತೆ.
ಈ ನಿಟ್ಟಿನಲ್ಲಿ ಮಾನವ ಕಲಿಯೋದು ಬಹಳ ಇದೆ.
6
ಸಿಕ್ಕಿದ್ದ ಸಂಜೆಯನ್ನ ಚೆನ್ನಾಗಿ ರುಬ್ಬಿದೆ ನೋಡಿ.
ಚಂದಿರ ಕಮಕ್ ಕಿಮಕ್ಕೆನ್ನದೇ ನನ್ನಾಕೆಯಿದ್ದ
ರಥವನ್ನ ಬಾನ ತುಂಬ ಎಳೆದ.
7
ಕನ್ನಡಿಯೂ ಅವಳೊಂದಿಗೆ ಶಾಮೀಲಾಗಿದೆ.
ಜಪ್ಪಯ್ಯ ಅಂದ್ರೂ ಅವಳ
ವಯಸ್ಸಿನ ಗುಟ್ಟು ಬಿಟ್ಟುಕೊಡುತ್ತಿಲ್ಲ.
8
ಸಿಕ್ಕ ಹಳೆಯ ಪ್ರೇಮಪತ್ರವನ್ನ
ಸವರುತ್ತಿದ್ದ ಸದ್ದಿಗೆ ಹೃದಯ
ಒಳಗಿಂದೊಳಗೇ ಲಗಾಟಿ ಹೊಡೆಯುತ್ತಿತ್ತು.
9
ರೈತನ ಕೊರಳ ಬೆವರು ಬೆವರಿ
ಸುಗ್ಗಿಗಳು ತಗ್ಗಿ, ಕಡಲು ಬಿಕ್ಕಿತೋ
ನಾಳೆಗಳಲ್ಲ ಹುಡಿ ಹಾರಿದ ಧೂಳಾದವು.
10
ಮೊಂಡುಗೈ ಚಾಚಿದ ಭಿಕ್ಷುಕ ಕೈ ಮಡಚಲೇ ಇಲ್ಲ.
ಮನಸ್ಸೂ ಮೊಂಡಾಗಿರಬಹುದೆಂದು ಭಾವಿಸಿದೆ.
ಸಣ್ಣ ಮೊತ್ತದ ನಾಣ್ಯ ಕಲ್ಪಿಸುತ್ತ ಕಿಸೆಗೆ ಕೈ ಹಾಕಿದೆ.
ನಾಣ್ಯ ಸಿಗುತ್ತಿಲ್ಲ ನಾನು ಬಿಡುತ್ತಿಲ್ಲ,ನನ್ನ ಮನಸ್ಸೂ ಮೊಂಡಾಗಿದೆ ಎನ್ನಿ.





Bahala arthapoorna padyagalu. Kavitheya kikku, maja, shakthi ellavoo ive
ಮೀನುಗಳು ಮೈಥುನಕ್ಕಿಳಿದ್ದಿದ್ದನ್ನ
ಕಂಡ ಸಮುದ್ರ ತನ್ನಲ್ಲಿ ಬಂದು ಸೇರಿಕೊಳ್ಳುತ್ತಿದ್ದ
ನದಿಗಳನ್ನ ಮೋಹಿಸತೊಡಗಿತು. gives a inexplicable mystic feeling and joy….
4
Chennagide, Odhi Kushi aiytoo………..
ಸೊಗಸಾದ ಕವಿತೆ, ಮುಂದುವರೆಸಿ….