ವಿನಯ್ ಭಾರದ್ವಾಜ್
ಕೆಲವೊಮ್ಮೆ ಚಿತ್ರದ ಮೊದಲಿಗೆ ಏನೆಲ್ಲಾ ಆಯ್ತು ಅನ್ನೋದಕ್ಕಿಂತ ಚಿತ್ರದ ಕೊನೆಗೆ ಏನಾಯ್ತು ಅನ್ನೋದೇ ಇಂಪಾರ್ಟೆಂಟ್ ಅನ್ನಿಸಿಬಿಡತ್ತೆ. Probably ಆ ಕಾರಣಕ್ಕೆ, ವೀ ಆಲ್ ಲುಕ್ ಫಾರ್ ಹ್ಯಾಪಿ ಎಂಡಿಂಗ್ಸ್…! ಹಾಗೆ ನೋಡಿದರೆ we have got enough movies which does not have happy endings…ಹಾಗು ಆ ಕಾರಣಕ್ಕಾಗಿಯೇ ಚಿತ್ರಗಳು ಇಷ್ಟವಾಗುವುದೂ ಉಂಟು. ಮೈನ ಚಿತ್ರ ಈ ಕಾರಣಕ್ಕಾಗಿಯೂ ಒಂದು ಸುಂದರ ಅನುಭವವಾಗಿ ಹಾಗು ದೃಶ್ಯ ಕಾವ್ಯವಾಗಿ ತೋರುತ್ತದೆ. ಇದೊಂದು ರೀತಿ ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿರುವ ರೊಮ್ಯಾಂಟಿಕ್ ಚಿತ್ರ. ಇಫ್ ನಾಟ್, ಇದರ Vice versa …ಅಂದ್ರೆ ರೋಮ್ಯಾಂಟಿಕ್ ಥ್ರಿಲ್ಲರ್ ಅನ್ನಬಹುದೇನೋ! ಇದೊಂದು ನೈಜ್ಯ ಕಥೆಗೆ, ಕಾಲ್ಪನಿಕ ಚಿತ್ರಕಥೆ ಹೆಣೆದಿರುವ ಕಾರಣದಿಂದಲೋ ಏನೋ, ಹಾಗು ರೋಮ್ಯಾನ್ಸ್ ಹಾಗು ಥ್ರಿಲ್ಲರ್ ನ ಎರಡೂ ಅಂಶಗಳು ಇರುವುದರಿಂದಲೋ ಏನೋ, ಚಿತ್ರಕಥೆ ನಡು-ನಡುವೆ ಸಡಿಲಗೊಳ್ಳುತ್ತಾ, ಬಿಗಿಯಾಗುತ್ತಾ ಸಾಗುತ್ತದೆ. ಅಂಡ್ ಈ ಒಂದು deliberateness ಕಥೆಗೆ ಒಂದು ಪಾಸಿಟಿವ್ ಫ್ಲೋ ತಂದುಕೊಟ್ಟಿದೆ ಅನಿಸುತ್ತದೆ.
ಮಗುವಿನಂತೆ ಮುದ್ದಾಗಿ ಕಾಣುವ ನಿತ್ಯಾ ಮೆನನ್, ಹಾಲಿನಲ್ಲಿ ಅದ್ದಿ ತೆಗೆದಂತೆಯೂ, ಸಣ್ಣ ನಗು ಬೀರಿದಾಗ ಸ್ವತಃ ದೇವತೆಯೇ ನಕ್ಕ ಹಾಗೆ ಕಾಣುತ್ತಾಳೆ! ಆಕೆಯ ದ್ವನಿ, ಅಭಿನಯ ಹಾಗು ಪಾತ್ರದ ಸೂಕ್ತತೆಗೆ ಮಗುವಿನಂತಹ ಸೂಕ್ಷ್ಮ ಲೇಪ brings a divine touch to the character and to the movie. ಅಟ್ ಸಂ ಪಾಯಿಂಟ್, ಆ ಪಾತ್ರದಲ್ಲಿನ ಆಕೆಯ ಅಂಗ ವೈಕಲ್ಯ ನನ್ನಂಥವನಿಗೆ ಸರಿಯಾಗಿ ಡೈಜೆಸ್ಟ್ ಆಗಲೊಲ್ಲದೊ ಏನೋ! And there she wins. ಅದು ಆ ಪಾತ್ರದ ವಯಕ್ತಿಕ ಗೆಲುವು.
ಅಥ್ಲೀಟ್ ನ ಮೈಮಾಟ ಹೊಂದಿರುವ ಹಾಗು ಕಣ್ಣಿನ ಸೂಕ್ಷ್ಮಗಳಲ್ಲಿ ಅಭಿನಯಿಸಬಲ್ಲ ಚೇತನ್, ಆ ಪಾತ್ರಕ್ಕೆ ಬೇಕಾದ tenderness ಹಾಗು ‘ನಿನ್ನ ಬದುಕಿಗೆ ಕಾಲಾಗಿರ್ತೀನಿ…’ ಅನ್ನುವಾಗ, ಆ ಕ್ಷಣಕ್ಕೆ ಆತನಷ್ಟು ತನ್ಮಯನಾಗಿ ಪ್ರೀತಿಸುವವ ಮತ್ತೊಬ್ಬನಿರಲಾರನೇನೋ ಅನಿಸುತ್ತದೆ. One thing what I have noticed is, ಚೇತನ್ ಅಭಿನಯಿಸಿರುವ ಈವರೆಗಿನ ಚಿತ್ರಗಳಲ್ಲಿ, ಪ್ರತಿಯೊಂದರಲ್ಲೂ ಆತನಿಗೊಂದು ನೆಗಟಿವ್ ಶೇಡ್ ಇದೆ. ಆತನ ‘ಆ ದಿನಗಳು, ಬಿರುಗಾಳಿ, ಸೂರ್ಯಕಾಂತಿ ಹಾಗು ಮೈನ….!’ Has he been branded?! ಗೊತ್ತಾಗುತ್ತಿಲ್ಲ..
ಅಶೋಕ್ ಕುಮಾರ್ ಪಾತ್ರಧಾರಿಯಾಗಿ ತಮಿಳಿನ ಶರತ್ ಕುಮಾರ್, ಆತನ ಸಹಚರಳಾಗಿ ಸುಮನ್ ರಂಗನಾಥ್, ಚೇತನ್ ನ ಸ್ನೇಹಿತನಾಗಿ ಬಿಡುವ ತಬಲಾ ನಾಣಿ and what not, the comedy of Sadhu kokila, ಪ್ರತಿಯೊಂದೂ speckless ಇವೆಂಟ್ಸ್ ಗಳಾಗಿ ಕಾಣುತ್ತವೆ.
ಜಿ.ಎಸ್.ಶಿವರುದ್ರಪ್ಪನವರ ‘ಕಾಣದ ಕಡಲಿಗೆ…ಹಂಬಲಿಸಿದೆ ಮನ…’ ಭಾವ ಗೀತೆಯು ಚಿತ್ರದ ಉದ್ದಕ್ಕೂ ಅತ್ಯಂತ ಮಾರ್ಮಿಕವಾಗಿ ಹಾಗು ಕಥೆಗೆ ಸೂಕ್ತವಾಗಿ ಬಳಸಿರುವುದು, is a sheer intelligence of the director.
ಜೆಸ್ಸಿ ಗಿಫ್ಟ್ ನ ಸಂಗೀತ, ಸಾಧು ಕೊಕಿಲರ ಹಿನ್ನಲೆ ಸಂಗೀತ ಹಾಗು ಸತ್ಯ ಹೆಗಡೆಯವರ ಛಾಯಾಗ್ರಹಣ ಜಿದ್ದಿಗೆ ಬಿದ್ದು ಗೆಲ್ಲುತ್ತವೆ. ಯಾರ್ಯಾರ ಅಭಿನಯ, ಕಥೆ, ಚಿತ್ರಕಥೆ ಗಳು ಏನೇ ಇರಲಿ, ಮುಂಗಾರು ಮಳೆಯ ನಂತರ ತುಸು ಹೆಚ್ಚೇ ಎನಿಸುವಷ್ಟು ಮಳೆ, ದೂಧ್ ಸಾಗರ್ ಜಲಪಾತದ ಅಗಾಧತೆ, ಸೌಂದರ್ಯ, ಪಶ್ಚಿಮ ಘಟ್ಟಗಳ ಕಾಡು, ಜಿಟಿ ಜಿಟಿ ಮಳೆ, ಹಾಡಿನ ಮನ ಮೋಹಕತೆ ಹಾಗು ಪ್ರತಿ ಫ್ರೇಮಿನೊಳಗಣ ಸೌಂದರ್ಯಕ್ಕಾದರೂ the movie is worth watching. ಎಲ್ಲವನ್ನೂ ಹಿಮ್ಮೆಟ್ಟಿಸುವಂತಹ ನಿತ್ಯ ಮೆನನ್ ಳ ಅಭಿನಯ ಹಾಗು ಕಥೆಯ ಮೇಲಿನ ಹಿಡಿತವನ್ನು ತಪ್ಪದಂತೆ ಸರಿದೂಗಿಸಿರುವ ನಾಗಶೇಕರ್ ರ ನಿರ್ದೇಶನ.
ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿಲ್ಲ ಅನ್ನುವ ಹೊತ್ತಿನಲ್ಲಿ ಸಾಲು ಸಾಲು ನಮ್ಮದೇ ಆದಂತಹ, ನಮ್ಮವರೇ ಆದಂತಹವರ ಚಿತ್ರಗಳು ಸಾಲುಗಟ್ಟಿ ಬಂದಿವೆ. ಒಂದೆಡೆ ಚಾರ್ಮಿನಾರ್, ಗೊಂಬೆಗಳ ಲವ್ ಹಾಗು ಈಗ ಮೈನ. ಈಗಷ್ಟೇ ಡ್ರಾಮ, ಯಾರೇ ಕೂಗಾಡಲಿ ಚಿತ್ರಗಳು ಗೆದ್ದಿವೆ. ಕನ್ನಡಿಗರಾಗಿ ನಾವು ‘ಮೈನ’ ಹಾಡಿಗೆ ತಲೆದೂಗದಿದ್ದರೆ ಹೇಗೆ…?







Mr Vinay, its good that you use English sentences in between Kannada lines. It it good, but please keep your grammar correct.
Sir, pls. this is not Grammar page, have to see what he want to communicate , that is imp. cheers =balu
Balu sir, my argument is simple, do you accept me if I type/write Kannada wrongly? No, right? By the way I am typing this in English as I don’t know how to type in Kannada. I was polite when I said that the English sentences in the article have grammatical errors. For your information, most words don’t fit into the context. For example, what does he mean by “deliberateness”? This word is conjoined with “Kathege” and has no sentence to back the meaning. My simple request is this, why should we try something that we aren’t sure of. His Kannada seems to be better than English. I thought it wasn’t a great idea on his part to infuse unnecessary English words. I humbly request the editor to go through the article thoroughly before publishing them.
ನಿಮ್ಮ ಅನುಭವಗಳಲ್ಲಿ ಆಂಗ್ಲ ಪದಗಳು ಹೆಚ್ಚಾದವೇನೋ. ಕನ್ನಡ ಪದಗಳಲ್ಲಿ ವರ್ಣಿಸಿದ್ದರೆ “ಮೈನಾ” ಚಿತ್ರದಷ್ಟೇ “ಮನಸ್ನ” ಮುಟ್ತಿತ್ತು…
Houdu…Myna is a very nice movie. One can’t afford to miss it
ಯಾಕೆ ನಿಮ್ಗೆ ಕನ್ನಡದಲ್ಲಿ ವರ್ಣಿಸೊಕೆ ಪದಗಳೇ ಸಿಕ್ಕಿಲ್ಲವಾ ಮಾರಾಯರೇ….ಕನ್ನಡದ ಮದ್ಯೆ ಇಂಗ್ಲಿಷ್ ತುರುಕೋದು ಬಿಡಿ…ನಿಜಕ್ಕೂ ಮೈನಾ ಚೆನ್ನಾಗಿದೆ…ಆದ್ರೆ ನಿಮ್ಮ ಲೇಖನ ಚೆನ್ನಾಗಿಲ್ಲ……
Myna yla vishayadallu chenagidhe adre thumba kade cinimana yelldidare
ಕನ್ನಡಿಗರಾಗಿ ನಮ್ಮ ಭಾಷೆಯಲ್ಲಿ ಇಂಗ್ಲೀಷ್ squeezing ಇಲ್ಲದಿದ್ದರೆ ಹೇಗೆ…?!
prasad shenoy avra maatanne naanu heltidini modlu nimma kannada sari madkoli.neevyaake kanglishli bardira anta kelbedi nanna charavaniyalli kannada bareyoke baralla.tammalli mattondu vinanti kalege bhaasheya hangilla,kannadigaraagi anta balsbedi.
ವಿನಯ್, ಚಿತ್ರ ವಿಮರ್ಶೆ ನಿಜಕ್ಕೂ ಚೆನ್ನಾಗಿದೆ. ಅದು ಚಿತ್ರವನ್ನು ಪ್ರೀತಿಸಿದರೆ, ಒಪ್ಪಿಕೊಂಡರೆ, ಅಪ್ಪಿಕೊಂಡು ಅನುಭವಿಸಿದರೆ ಮಾತ್ರ. ಚೆನ್ನಾಗಿರುವುದು ಕುರಿತು ಏನನ್ನೇ ಮಾಡಿದರೂ ಚೆನ್ನಾಗಿರುತ್ತದೆ. ಅದಕ್ಕೆ ನಿಮಗೆ ನಾವು ಹೇಳುತ್ತಿರುವ ಮಾತು ಸಾಕ್ಷಿ. ಸಾಧ್ಯವಾದಷ್ಟು ಕನ್ನಡ ಬಳಸಿ, ನಮ್ಮ ಭಾಷೆಯಾದರೆ ಚಿತ್ರದಷ್ಟೆ, ಭಾವನೆ ಕೂಡ ಅರ್ಥವಾಗುತ್ತದೆ. ಅದು ನಿಮ್ಮ ಭಾವಗಳ ಮೂಲಕ…ನೀವೂ ಅನುಭವಿಸಿ,,,,,ಬಳಿಕ ವಿಮರ್ಶೆ ಬರೆಯಿರಿ
ಸ್ವಾಮಿ,
ವಿನಯ್ ರವರು ಬರೆದಿರುವ ಚಿತ್ರದ ಬಗ್ಗೆ ಮಾತನಾಡಿ.
ಅದನ್ನು ಬಿಟ್ಟು ಆಂಗ್ಲ ಭಾಷೆ ಯಾಕೆ ಉಪಯೋಗಿಸಿದ್ದಾರೆ ಅಂತ ಚರ್ಚೆ ಮಾಡುತ್ತಿದ್ದೀರಲ್ಲ.
ಒಬ್ಬರು ಬರೆದರಲ್ಲ? ಅಲ್ಲಿಗೆ ಆ ವಿಷಯ ನಿಲ್ಲಿಸಿ. ವಿನಯ್ ಆ ಪ್ರತಿಕ್ರಿಯೆ ನೋಡಿದ್ದರೆ ಖಂಡಿತ ಮುಂದಿನ ಲೇಖನಗಳಲ್ಲಿ ಕನ್ನಡವನ್ನೇ ಹೆಚ್ಚು ಉಪಯೋಗಿಸುತ್ತಾರೆ.
“ಕಂಗ್ಲೀಷಿನಲ್ಲಿ” ಅಂತ ಹೇಳುತ್ತಾ ನೀವುಗಳೇ ಯಾಕೆ ಆಂಗ್ಲ ಭಾಷೆಯಲ್ಲಿ ಪ್ರತಿಕ್ರಿಯೆಗಳನ್ನು ಟೈಪ್ ಮಾಡಿದ್ದೀರಾ?
ನಿಮ್ಮ ಬಳಿ “ಮೊಬೈಲ್” ಇದ್ದು ಅದರಲ್ಲಿ ಕನ್ನಡ ಟೈಪ್ ಮಾಡಲು ಆಗದಿದ್ದರೆ ಪ್ರತಿಕ್ರಿಯೆಯನ್ನೇ ಮಾಡಬೇಡಿ ಅಂತ ನಾವೂ ಹೇಳಬಹುದಲ್ಲ?
ಎಲ್ಲಕ್ಕೂ ಮಿತಿಯಿದೆ, ದಯವಿಟ್ಟು ಎಲ್ಲರೂ ಚುಚ್ಚಿ ಮಾತನಾಡಿ ಬರೆಯುವವರ ಹುಮ್ಮಸ್ಸನ್ನೇ ಕಿತ್ತುಕೊಳ್ಳದಿರಿ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತಾ….
ಸಂತೋಷ್
ಅರವಿಂದ್ ಸರ್,ರವಿ ಸರ್, ಪ್ರಸಾದ್ ಸರ್ ಹಾಗು ಸಂತೋಷ್ ಸರ್: ಪ್ರತಿಕ್ರಯಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ತಪ್ಪುಗಳು ಎಲ್ಲೆಲ್ಲಿ ನಡೆದಿವೆ ಎಂದು ತೋರಿಸಿದ್ದೀರಿ. ಆ ನಿಟ್ಟಿನಲ್ಲಿ ತಿದ್ದಿಕೊಳ್ಳುವೆ. ಈ ಒಂದು ಅಂಕಣದ wholesomeness ಗಮನಿಸಿ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು…