ಕಾಯುವುದು ಮುಗಿವುದೆ?
ಮನದಿ ಮಾತು ನಡೆದಿದೆ
ಹೊರಗೆ ಮೌನ ಕವಿದಿದೆ
ಮಳೆಯು ನಿ0ತ ಮೇಲೆ ಕೂಡ
ಮರದ ಕೆಳಗೆ ಹನಿಯು ಜಿನುಗಿದ0ತಿದೆ
ನಗೆಯು ಎ0ದೋ ಮರೆತಿದೆ
ಅಣಬೆಯ0ತೆ ಬಿಳಿಚಿಹೋದ
ನಗುವಿನಾ ಪರಿಛಾಯೆಯುಳಿದಿದೆ
ಎದುರುಕ0ಡ ಮುಖದ ಗುರುತು
ಸ0ಜೆಗತ್ತಲು ನು0ಗಿದೆ
ಮೆಲುಕು ಹಾಕಿದ0ತೆ
ಮೇಲೆದ್ದು ಬರುವ
ಆ ಪರಿಚಿತ ಕಣ್ಣಲೆ0ತು ಹೊಳಪಿದೆ
ಕೆಲವೇ ಹೊತ್ತಲಿ
ಆಪ್ತರಾಗಿ ಮತ್ತೆಮರಳಿ
ಸಿಗದೆ ಹೋಗಿ
ನೆನಪಿನಾ ತೋಪಿನಲ್ಲಿ
ಮರೀಚಿಕೆಯ0ತಾಗಿ ಹೋದವರ
ಹೆಜ್ಜೆ ಗುರುತು ಉಳಿದಿದೆ
ಕನ್ನಡದಲಿ, ಕನ್ನಡಿಯಲಿ
ಕಳೆದ ಕಾಲದ ಗುರುತಿದೆ
ಹೊರಳಿ ನೋಡಲು ಮೇಲಿನಿ0ದ
ಇಳಿಯ ಬಹುದೇನಿನ್ನು
ಆ ಕೊಳ್ಳವ ದಾರಿ ತು0ಬಾ ಮುಳ್ಳಿದೆ
ಭಾಷೆ ಬ0ಧನ ಮಾಯಾಪಾಶ
ಮಾತೆಯಾಲಿ0ಗನ
ಕ್ಷೀಣವಾಗಿ ಕರೆದಿದೆ
ಶಬರಿಯ0ತೆ ನೀನು ಕಾಯಲು
ಬರದಿರುವನೆ ರಾಮನು
ಕಾಲ ಮುಗಿಯುವುದರೊಳಗೆ
ಕಾಯುವುದು ಮುಗಿವುದೆ?







tumba chennaagide..
kavite chennagide
ಕವನ ತುಂಬಾ ಚನ್ನಾಗಿದೆ
superb! nice kavana