ರಶ್ಮಿ ಕಾಸರಗೋಡು

ಕನ್ನಗೀ…
ನಿನ್ನಂತೆ ನಾನಾಗಲ್ಲ ಬಿಡು
ನಿನ್ನ ಬಿಟ್ಟು ಪರ ಹೆಣ್ಣ ಜತೆ
ಮೈ ಮರೆತು ಆಡಿದ ಗಂಡನ
ಕ್ಷಮಿಸಲಾರೆ
ದೇಹವನೆ ಮಾರಿ ಬಂದವನಾತ
ಹೊಟ್ಟೆ ಹಸಿವೆಂದಾಗ
ತೊಟ್ಟ ಕಾಲಂದುಗೆಯನು ಕೊಟ್ಟು
ಮಾರಿ ರೊಕ್ಕ ತಾ ಎಂದೆ
ಹೊಟ್ಟೆ ಹಸಿವಾದಾಗಲಷ್ಟೇ
ನಾನು ನೆನಪಾದೆನೇ?
ಕೇಳಬಹುದಿತ್ತು ನೀನು

ನಿನ್ನ ಯೌವನದ ದೇಹ
ಹಸಿವ ನುಂಗಿ ಕುಳಿತಾಗ
ಸೆರಗ ಜಾರ ಬಿಡಲಿಲ್ಲ
ಗಂಡನಾದವನು ಆಗ ಎಲ್ಲಿದ್ದನೋ?
ಎಲ್ಲಿ ಮಾಧವಿ
ನಿನ್ನ ದಾಹ ನೀಗಿಸಿದಾಕೆ?
ಕೊರಳ ಪಟ್ಟಿ ಹಿಡಿದು
ಕೇಳಬಹುದಾಗಿತ್ತು
ಕನ್ನಗೀ…
ನೀನು ನನ್ನಂತೆ ಆಗಲ್ಲ ಬಿಡು
ನನ್ನ ಪತಿ ಕದ್ದಿಲ್ಲ
ಎಂದು ಪಾಂಡ್ಯ ರಾಜನ ಮುಂದೆ
ಕಣ್ಣೀರಿಟ್ಟು ಹೇಳುವಾಗ
ಕಾಲಂದುಗೆಯನ್ನೆಸೆದು ಸತ್ಯ ದರ್ಶನ ಮಾಡಿದೆ
ನಿನ್ನ ಅವಮಾನದ ಸಿಟ್ಟು
ಕಿಡಿಯಾಗಿ ಮಧುರೆಯನು ಸುಟ್ಟಾಗ
ಕನ್ನಗೀ..
ನೀನು ದೇವಿಯಾದೆ
ಸತ್ಯದಲಿ ಗೆದ್ದ ಸತಿಯಾದೆ
ಇತಿಹಾಸದ ಪುಟ ಸೇರಿ
ಪೂಜೆಯ ಕಲ್ಲಾಗಿ ಉಳಿದು ಹೋದೆ






ಪದ್ಯ, ಇಷ್ಟವಾಯ್ತು.
innuu kaviteyannu gattiyaagi iLisabahudittu..