ಪ್ರಕಾಶ್ ಕೊಡಗನೂರ್
**
ಗಿರಗಿರಗಿರ
ಗಿರಗಟ್ಟೆ ನಾನು
ಪ್ರೀತಿ ವಿರಹದಲ್ಲಿ !
ಗಿರಗಿರಗಿರ
ಗಿರಗಟ್ಟೆ ನಾನು
ಸಾವು ನೋವಿನಲ್ಲಿ!
ಗಿರಗಿರಗಿರ
ಗಿರಗಟ್ಟೆ ನಾನು
ರೋಗ ರುಜಿನದಲ್ಲಿ!
ಗಿರಗಿರಗಿರ
ಗಿರಗಟ್ಟೆ ನಾನು
ಬರಗರದಲ್ಲಿ!
ಗಿರಗಿರಗಿರ
ಗಿರಗಟ್ಟೆ ನಾನು
ಸಾಲ ಸೋಲದಲ್ಲಿ!
ಗಿರಗಿರಗಿರ
ಗಿರಗಟ್ಟೆ ನಾನು
ಅಶಾಂತಿ ಅತೃಪ್ತಿಯಲ್ಲಿ!
ಗಿರಗಿರಗಿರ
ಗಿರಗಟ್ಟೆ ನಾನು
ಕರ್ತವ್ಯ ಹೊಣೆಗಾರಿಕೆಯಲ್ಲಿ!
ಗಿರಗಿರಗಿರ
ಗಿರಗಟ್ಟೆ ನಾನು
ಅಸಹಾಯಕತೆ ತಬ್ಬಲಿತನದಲ್ಲಿ!
ಆದರೇನಂತೆ?
ಮಿಣಮಿಣಮಿಣ
ನಕ್ಷತ್ರ ನಾನು
ಕನಸು ಕನವರಿಕೆಯಲ್ಲಿ!
0 ಪ್ರತಿಕ್ರಿಯೆಗಳು