ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನಸುಗಳು ಭಗ್ನ ಪ್ರೇಮಿಯ ಕವಿತೆಯಂತೆ…

– ವೀರಣ್ಣ ಮಂಠಾಳಕರ್

 
ಕಾಡಿಗೆಯ ನಿನ್ನ ಕಣ್ಣ ಪ್ರತಿಬಿಂಬ ಕನ್ನಡಿಯಾಗಿರಲಿ ಕನಸು ಕಲ್ಪನೆಗಳಿಗೆ ಕವಿತೆಯಂತೆ
ಹರೆಯದ ವಾಸನೆ ಹರಡಿದಂತೆ ನಿನ್ನಾ ತುಟಿಯಂಚು ಸವಿ ಮುತ್ತಾಗಲಿ ಕವಿತೆಯಂತೆ
 
ನಿನ್ನಾ ಯೌವ್ವನ ಬದುಕಿನ ಬಣ್ಣ ಬದಲಾದಂತೆ ಬಿಗಿದಪ್ಪಿಕೊಳ್ಳುವ ಭರವಸೆ ಬಿಡದಿರು
ಬರಸೆಳೆದು ಮುದ್ದಾಡಿ ಮೈಮನ ಹದಮಾಡಿ ಸ್ಖಲನಕ್ಕೆ ಬಯಕೆಯಾಗು ಕವಿತೆಯಂತೆ

ಮುತ್ತಾಗಬೇಕು ನಿನ್ನಾ ಪ್ರತಿಯೊಂದು ಮಾತುಗಳು ಮನದ ನೋವುಗಳಿಗೆ ಮುಲಾಮು ಹಚ್ಚು
ನಿನ್ನಧರದ ತೋಳ ತೆಕ್ಕೆಯಲ್ಲಿ ಬಂಧಿಯಾಗುವ ಆಶಯಗಳು ಬಸುರಿಯಾಗಲಿ ಕವಿತೆಯಂತೆ
 
ಮನದ ಕದವನ್ನು ತೆರೆಯದೇ ಬರಮಾಡಿಕೊಳ್ಳುವ ನಿನ್ನಾ ಬಯಕೆಯ ಬಾಗಿಲಲ್ಲಿ ಬಂದಿರುವೆ
ಒಳ ಕರೆದು ಬರಸೆಳೆದು ಮುದ್ದಾಡಿ ನೋಡು ನಿನ್ನ ಮೇಲಿನ ಪ್ರೀತಿ ಸುಂದರವಾದ ಕವಿತೆಯಂತೆ
 
ಪ್ರೀತಿಯೆಂದರೆ ಭೀತಿಯ ಲೆಕ್ಕ ಬಿಡು ನಮ್ಮಿಬ್ಬರ ನಡುವಿನ ಅಂತರವೇನಿದ್ದರೂ ಆಸರೆ ಕೊಡು
ಮರೆತು ಬದುಕು ಎಂದರೆ ಮಧು ಬಟ್ಟಲಲ್ಲಿನ ಮದಿರೆ ಕುಡಿದು ನಶೆ ಏರಿದ ಕವಿತೆಯಂತೆ
 
ನಿನ್ನ ಚೆಲುವು ಸವಿದಷ್ಟೂ ಮಾಸದ ನವ ತರುಣಿಯ ಕನಸುಗಳು ಚಿಗುರುತಿವೆ ಕೇಳು ಸಖಿ
ನೀನಿರದ ಹೊರತು ಬದುಕಿಗೆ ನೂರೆಂಟು ಬಣ್ಣದ ಕನಸುಗಳು ಭಗ್ನ ಪ್ರೇಮಿಯ ಕವಿತೆಯಂತೆ
 
ನೋಟದಲ್ಲೇ ಸೆಳೆಯುವ ಅವಳ ಸೌಂದರ್ಯದ ಸವಿಜೇನು, ಮೌನದಲ್ಲಿ ಮುತ್ತಡಗಿವೆ ‘ವೀರ’
ಚೆಲುವೆಯ ಧ್ಯಾನದಲ್ಲಿ ಶರಾಬಿನ ನಶೆಯೊಳಗೆ ಮತ್ತಿಳಿಯದ ಹಾಗೆ ಕುಡಿದುಬಿಡು ಕವಿತೆ ಬರೆದಂತೆ
 

‍ಲೇಖಕರು G

2 July, 2015

3 Comments

  1. Rohini Satya

    “Preetiendare bheetiya lekka bidu ” howdu indina paristiyalli preetige bheetiye hechhide. Bheetirahita Preeti ulideetu preetiyaagi.

  2. savitri hiremath

    kavite manognavagi vadamudide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading