ಅಭಿವ್ಯಕ್ತಿ
ಎಂ ಎಂ ಶೇಕ್ ಕೊತ್ತನೂರು
ಕನಸುಗಳಿಗೆ ಚಿಟ್ಟೆಗಳಿವೆ,
ಬಯಕೆಗಳಿಗೆ ದುಂಬಿಗಳಿವೆ,
ಎಷ್ಟೆಲ್ಲಾ ಮೊಗ್ಗುಗಳಿಗೆ ನಿರೀಕ್ಷೆಗಳಿವೆ!
ಆಕಾಶದ ಕೆಳಗೆ ಸಾಕಷ್ಟು ಸುಂದರ ತೊಟ್ಟುಗಳಿವೆ
ಆದರೂನಿಲ್ಲಲಾರದ ಅಸಾಯಕತೆ!
ಮುಖ ಊದಿಸಿಕೊಂಡ ಘಳಿಗೆಗಳಿಗೆ
ಸಮಜಾಯಿಸಲಾಗದೆ ಹೊರಡಲೇಬೇಕಾಗಿದೆ!
ಜವಾಬ್ದಾರಿ ಹೊತ್ತ ಹೆಗಲುಗಳಿವೆ,
ತಿರುಗಿನೋಡದೆ ನಡೆಯಬೇಕಾಗಿದೆ.
ಅತ್ತ ರಾತ್ರಿಗಳಿವೆ..
ನಕ್ಕಹಗಲುಗಳಿವೆ ಜೇಬಲ್ಲಿ..
ಇದೆಯೆನ್ನುವ ವಿಶ್ವಾಸದಲ್ಲಿಯೇ
ದಾಟಬೇಕಾಗಿದೆ ಮೈಲುಗಳನ್ನು
ಸೀತೆಯಾಗಲೊಲ್ಲೆ, ಹಾಗೆಯೇ ರಾಮನಾಗಲೊಲ್ಲೆ
ಆದರ್ಶದ ಮೊನಚಲ್ಲಿ ನನ್ನೆಲ್ಲಾ ಯೌವನ ತೂತಾಗಿ
ಸೋರಿಹೋಗಿ ಭೂಆಳ ಇಳಿದು
ಒರತೆಯಾಗಿ ಅಡಗಿದ್ದಿದೆ ಹೆಸರಿಲ್ಲದೆ!!!






0 Comments