ಬೊಗಸೆ ತುಂಬ ಬೆಳಕು
ಕನಸುಗಳನು
ಬೊಗಸೆಯೊಳಗೆ
ಹಿಡಿ ಹಿಡಿದು
ನೆಲಕ್ಕೆ ಹಣೆ ಹಚ್ಚಿ
ಬೇಡುತ್ತಿದ್ದೇನೆ
ಸಂಜೆ ತಂಬೂರಿಯ
ನಾದವು ಹುರಿಗೊಂಡು
ಹೆಜ್ಜೆ ಬಿಚ್ಚಿವೆ
ಅರುಣನ ಮುಂದೆ

ನಾಳೆಗಳ ಬೊಗಸೆ
ಹೂಗೊಂಚಲಿಡಿದು
ಕಾಯುತಿವೆ ನನ್ನವನಿಗಾಗಿ
ರೇಣುವಿನ ಕೂಗು
ಸಾವಿರ ಸಾವಿರವಾಗುತಿದೆ
ದೀಪದ ಬೆಳಕ
ಮುಂದೆ ಕತ್ತಲಿಲ್ಲದ
ಬದುಕ ಹುಡುಕಲು
ಶಬರಿಯಾಗಬೇಕು
ಬಟ್ಟಲು ತುಂಬಿದ ಯುಗಾದಿಗೆ
ಬೇವು ಇದೆ
ಬೆಲ್ಲವ ಸೇರಿಸಬೇಕು ಅಷ್ಟೆ
ನಂಬಿಕೆಯಿಂದಲೇ
ಹಾಕಿದ ಹೆಜ್ಜೆಗಳಲಿ
ಭರವಸೆಗಾಗಿ ಕಾಯುತ್ತಿದ್ದೇನೆ
ಬೊಗಸೆ ತುಂಬಿದ
ಬೆಳಕ ಬೀಜ
ಹೂವಾಗಿ ನಗಲಿ
ಎಂದೆಂದೂ ಬಾಡದಂತೆ






ನೈಸ್ …
Good
ಪದ್ಯ ಚೆನ್ನಾಗಿದೆ
nice poem…
kavite chennaagide..