ಎಚ್ ಕೆ ಶರತ್
ಎದೆ ತುಂಬ
ದಿಗಿಲು ತುಂಬಿಕೊಂಡ ರಾತ್ರಿ
ಬೆಳದಿಂಗಳೆದುರು ಬೆತ್ತಲಾಗಿ
ಹಗುರಾಗಿದೆ
—
ಕನಸಿನಂಗಡಿ ತುಂಬ
ಚಿತ್ತಾರದ ಕನಸುಗಳು…
ಅವಳದು ಖಾಲಿ ಜೇಬು
—

ಅಪರಿಚಿತ ಹಾದಿಯ
ನಡುವಲ್ಲಿ ಸಿಕ್ಕ
ಬದುಕು
ಅವಳು ನನಗಷ್ಟೇ ಪರಿಚಿತ
—
ಅವನ ಸಿಗರೇಟು ಸುಡುವ
ಚಟ ಬಿಡಿಸಲು
ಉಪವಾಸ ಕೂತ
ಇವಳ ಕನಸಿನಂಗಡಿ ತುಂಬ
ಖಾಲಿ ಪ್ಯಾಕುಗಳು
ಬಿಕರಿಯಾಗದ ಕನಸುಗಳ ಬಿಂಬಗಳು






ಚೆನ್ನಾಗಿವೆ …..