ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕದ್ದು ನೀ ಕಳಿಸುವ ಮುತ್ತುಗಳನ್ನು..

renuka nidagundi

ರೇಣುಕಾ ನಿಡಗುಂದಿ 

eyesನಿನ್ನ ಕಣ್ಣಿನ ಮಿಂಚನ್ನು
ಎಳೆಎಳೆಯಾಗಿ ಹಿಂಜಿ
ಹೊಳಪಿನ ಒಂದು ದುಪ್ಪಟಿಯನ್ನು ನೂತಿದ್ದರೆ ಇವತ್ತಿನ ರಾತ್ರಿ ಅದನ್ನೇ ಹೊದ್ದಿರುತ್ತಿದ್ದೆ….

ದುಂಡಗಿನ ಪುಟ್ಟ
ಕೊಳವೆಬಾವಿಯೊಳಗೆ ಇಳಿಯುವಂತೆ
ಸರಸರನೆ ಜಾರಿ
ಮಿರಮಿರನೇ ಹೊಳೆಯುವ ಪುಟ್ಟಪುಟ್ಟ ಮೀನುಗಳನ್ನೆಲ್ಲ ಬಾಚಿಕೊಳ್ಳುತ್ತಿದ್ದೆ….

ಆಗಾಗ ನನ್ನ ಕೆನ್ನೆ ಸವರುವ
ನಿನ್ನ ರೆಪ್ಪೆಗಳು ಸಮುದ್ರದ ಅಲೆಗಳಂತೆ
ಬರಸೆಳೆದುಕೊಂಡಾಗೆಲ್ಲ ನಾನೊಂದು
ನೀಲಿ ಮೀನಂತೆ ಆಕಾಶದ ತುಂಬೆಲ್ಲ
ಈಜಾಡುತ್ತಿರುತ್ತಿದ್ದೆ…

love4

ಒಳಗೆ ಸತ್ತು ಹೊರಗೆ
ಮಿರಿಮಿರಿ ಮಿಂಚುತ್ತಿದ್ದೇನೆ
ಸತ್ತ ವಾಸನೆ ಹರಡದಿರಲೆಂದು
woman on cardboardರಗರ ಸುತ್ತುತ್ತಿದ್ದೇನೆ
ಪುಪ್ಪುಸದಲ್ಲಿ ಕೊಳೆತಗಾಳಿ
ಕಣ್ಣಿನಲ್ಲಿ ಕೀಸರು .,

ಒಳಗೆ ಸತ್ತು ಹೊರಗೆ
ಹೆಬ್ಬಾವಿನಂತೆ ಮೈಚಾಚಿ
ನಗರದ ನಂಜನೆಲ್ಲ ಉಣ್ಣುತ್ತ
ಪಾಚಿಗಟ್ಟಿದ ಹುದಲಿನಲ್ಲಿ
ಹರಿವು ಮರೆತ ಯಮುನೆಯ
ಮೈತುಂಬ ಗಾಯ,,..

ಒಳಗೆ ಸತ್ತು ಹೊರಗೆ
ಕಾಯುತ್ತಿದ್ದೇನೆ ನನ್ನದೆ
ಗೋರಿಯ ಮೇಲೆ ಕುಳಿತು
ನಿತ್ಯ ಸಂಜೆಯ ಸೂರ್ಯನನ್ನು
ಮತ್ತು ಇರುಳಿನ ಏಕಾಂತದಲ್ಲಿ
ಕದ್ದು ನೀ ಕಳಿಸುವ
ಮುತ್ತುಗಳನ್ನು…

ಒಳಗೆ ಸತ್ತು ಹೊರಗೆ
ಅಹಲ್ಯೆಯಂತೆ ಕುಟೀರ ಕಟ್ಟಿ
ಯುಗದ ಎವೆಗಳನ್ನು ಮೀಟದೇ
ಹಾದಿ ನೋಡುತ್ತೇನೆ
ಮತ್ತೊಮ್ಮೆ ಜೀವ ತುಂಬಲು
ಬಂದೇ ಬರುತ್ತಿಯೆಂಬ ಕನಸಿಗೆ,..

‍ಲೇಖಕರು Admin

28 February, 2016

2 Comments

  1. sangeetha raviraj

    ತುಂಬಾ ಚೆನ್ನಾಗಿದೆ ಕವಿತೆ ಇಷ್ಟವಾಯಿತು

  2. D.Ravivarma

    heart touching…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading