ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕಥೆ ಹೇಳಿ ಮಲಗಿಸುವ ನಕ್ಷತ್ರಗಳು' – ಸಂಗೀತ ರವಿರಾಜ್ ಕವನ

ನಿರ್ಗತಿಕರು

ಸಂಗೀತ ರವಿರಾಜ್

ಅದೇ ಪಾಳು ಕಟ್ಟಡಗಳ
ಬೆನ್ನಿಗಂಟಿ ಮಲಗಿ
ನಮ್ಮ ಕೈಕಾಲು ಮನಸುಗಳು
ಹರಕು ಗೋಡೆಗಳಾಗಿವೆ…..
ಕಲ್ಲುಗಳನ್ನೆ ಮೆತ್ತನೆ
ದಿಂಬುಗಳೆಂದು ಭಾವಿಸಿ
ಕನಸು ಕಾಣುವ ನಮಗೆ
ಕಥೆ ಹೇಳಿ ಮಲಗಿಸುವ
ನಕ್ಷತ್ರಗಳು
ಮಗ್ಗಲು ಬದಲಾಯಿಸಲು ಒಪ್ಪುತ್ತಿಲ್ಲ!

ಬೆಳಗ್ಗೆ ಮತ್ತದೇ ಮೂರು ಕಲ್ಲೇರಿಸಿ
ರಾತ್ರಿ ಸಾಥ್ ನೀಡಿದ
ತರಗೆಲೆಗಳ ಬೆಂಕಿಗೆ
ನಜ್ಜುಗುಜ್ಜಾದ ಅಲ್ಯುಮಿನಿಯಂ
ಪಾತ್ರೆಯಿಟ್ಟು
ಅಕ್ಕಿ ಅನ್ನವಾಗುವ
ಅಮೃತ ಘಳಿಗೆಗೆ
ಕಾಯುತ್ತಿದೆ ಈ ಜೀವನ…..
 
ಅಲ್ಲೇ ದಾರಿಗುಂಟ
ರಸ್ತೆ ಕೆಲಸ ಮುಗಿಸಿ
ಬಂದ ಯಜಮಾನ
ಹುಣ್ಣಿಮೆ ರಾತ್ರಿಯ ಮಹೋತ್ಸವಕ್ಕೆ
ಆಸ್ಥೆ ತೋರಿದರೆ
ನಾಚಿಕೆ ಬಿಟ್ಟು ಊಳಿಡುತ್ತಾ
ಸನಿಹಕ್ಕೆ ಬರುವ
ಬೀದಿನಾಯಿಗಳು
ನಮಗೆ ಸರಹದ್ದುಗಳೇ ಇಲ್ಲ!
ಲೋಕ ಮಾತು ಮರೆತಂತೆ
ತಲೆ ಮೇಲೆ ಕೈ ಹೊತ್ತ
ಮೌನಪ್ರಿಯರು
ಮತ್ತೆ ಮತ್ತೆ ಕಾಣಸಿಗುತ್ತಾರೆ
ನಾವೋ ಅವರ ಪಕ್ಕದಲ್ಲಿ
ಅತ್ಯಂತ ಬಿರುಸಾಗಿ ನಡೆಯುತ್ತೇವೆ!
 

‍ಲೇಖಕರು avadhi

28 March, 2014

14 Comments

  1. Anonymous

    kavana chennaagide sangeetha.

  2. mmshaik

    tumba tumbaane chennagide..keep it up..!!!!

  3. P Bilimale

    Very touching

  4. Anonymous

    fine

  5. ashwini rao.k.n.

    Kavitheya mruduthva istavaayithu..

  6. smitha Amrithraj

    chennagide sangeetha-smitha

  7. Naveen

    ನಿರ್ಗತಿಕರು ಅವರಲ್ಲ, ಅವರನ್ನು ನಿರ್ಗತಿಕರೆಂದು ಭಾವಿಸಿರುವ ನಾವು, ಅನ್ನೋದನ್ನ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೀರ ಸಂಗೀತ ರವರೇ 🙂 Hatsoff

  8. hcB

    Aatmeeya Nirupane… Olle padya

  9. pratibha kage

    very nice

  10. prakash

    nima kavite tumba channagide mam

  11. rupa hasana

    Nimma maamulina kavitegaliginta bhinnavaagide sangeeta. Manasu muttitu.

  12. AMU APPAJI

    ವಾಸ್ತವ ಬದುಕಿನ ಚಿತ್ರಣವನ್ನ ಅದ್ಬುತವಾಗಿ ಕಟ್ಟಿಕೊಟ್ಟಿದ್ದೀರಾ

  13. prakash dore

    kavana chennaagide

  14. sahyadri nagaraj

    padhya kattuvike chendhidhe sangeetha

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading