ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕತ್ತಲೊಳಗೆ ಕಣ್ಣೀರ ಹನಿಗಳು ಕಾಣೆಯಾಗುತಿವೆ..' – ರೇಣುಕಾ

ನಿರಾಳ ಮೌನ

ರೇಣುಕಾ ಎ  ಕಠಾರಿ


ಕನ್ನಡಿ ಬೇಕಿಲ್ಲ
ನಿನ್ನ ಕಣ್ಣೊಳಗೆ ನಾನಿದ್ದೇನೆ
ನೋವ ಮರೆತು
ನಿನ್ನ ನಗುವಿನಿಂದಲೇ
ಬದುಕಿದ್ದೇನೆ ಸಖ
ಬಿಟ್ಟು ಬಿಡದೆ ನುಡಿಯುತಿದೆ
ವೀಣೆ ಒಂದೇ ಸಮನೆ
ನನ್ನ ಬಿಸಿ ಉಸಿರಲೂ
ನಿನ್ನ್ಹೆಸರ ಹಿಡಿದಿದ್ದೇನೆ ಸಖ
ಕತ್ತಲೊಳಗೆ ಕಣ್ಣೀರ
ಹನಿಗಳು ಕಾಣೆಯಾಗುತಿವೆ
ನಿನ್ನ ಮಾತು
ನಗುವಿನಿಂದಲೇ ಬದುಕಿದ್ದೆನೆ
ಸಂಸಾರದ ಸಂತೆಯೊಳಗೂ
ಧ್ಯಾನಕೆ ಕೂತಿದ್ದೇನೆ
ನದಿಯಾಗಿ ನೋವುಗಳನ್ನೆಲ್ಲ
ಮರೆತಿದ್ದೇನೆ
ನಿರಾಳ ಮೌನದಲ್ಲೂ
ಮಾತಿನ ಕನಸ ಕಾಣುತ್ತಿದ್ದೇನೆ
ಎಲ್ಲ ಇಲ್ಲಗಳ ಮರೆಯಲ್ಲಿ
ಮೊಹಬತ್ ಬೇಡುತ್ತಿದ್ದೇನೆ
ನನ್ನವನ ಕರಿ ಕೋಟಿನೊಳಗೆ
ಚುಕ್ಕೆಇಟ್ಟು ಚೆಂದದ ಚಿತ್ತಾರಕೆ
ಕಾದು ಕೂತಿದ್ದೇನೆ

‍ಲೇಖಕರು G

19 April, 2015

4 Comments

  1. smitha Amrithraj

    Nice..

  2. mmshaik

    uttama kavana reNuka….

  3. bidaloti Ranganath

    ಕವಿತೆ ಭಾವನೆಗಳ ಒಡಲೊಳಗೆ ಲಗ್ಗೆ ಇಟ್ಟಿದೆ ಮೆಲ್ಲನೆ

  4. mallikarjun talwar

    smsarada snteyolagu… dyana kootioddene wah! chendada salu aste yaataneya saalu houdu. nice madam ji.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading