ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಣ್ಣ ಸನ್ನೆಯಲಿ ಕರೆದದ್ದು ಹೇಗೆ ಹೇಳಲಿ..

ಮಹಾದೇವ ಎಸ್ ಪಾಟೀಲ

ಕಣ್ಣ ಸನ್ನೆಯಲಿ ಕರೆದದ್ದು ಹೇಗೆ ಹೇಳಲಿ
ಬಾಗಿಲು ತೆರೆದು ಕಾದದ್ದು ಹೇಗೆ ಹೇಳಲಿ

ಅನುರಾಗವು ಅರಳಿ ಮನಸು ಕರಗಿದೆ
ಭಾವದೊಲುಮೆ ಮೂಡಿದ್ದು ಹೇಗೆ ಹೇಳಲಿ

ಮುಂಗುರುಳು ತೀಡಿ ಬೀರಿದ ನೋಟವು
ಮಧುರ ದನಿಯಲಿ ಕೂಗಿದ್ದು ಹೇಗೆ ಹೇಳಲಿ

ಅವಿತ ಪ್ರೇಮದಲಿ ಹಗಲು ಕನಸು ಕಾಣುತ
ಸೆರಗು ಮರೆಮಾಡಿ ಮುದ್ದಿಸಿದ್ದು ಹೇಗೆ ಹೇಳಲಿ

ಹೃದಯದಲಿ ನೆನಪಿನ ಹಣತೆಯ ಹಚ್ಚಿಟ್ಟು
ಚಂದನವನದಲಿ ಸಾಗಿದ್ದು ಹೇಗೆ ಹೇಳಲಿ

ಮುದದಿ ಮೌನರಾಗವನು ಉಲಿಯುತ
ಭಾವತರಂಗವನು ಮೀಟಿದ್ದು ಹೇಗೆ ಹೇಳಲಿ

ಮಹಾದೇವನಿಗೆ ಸರಿಗಮದ ಆಲಾಪವ ಕಲಿಸಿ
ಮುಗುಳು ನಕ್ಕು ಮರೆಯಾಗಿದ್ದು ಹೇಗೆ ಹೇಳಲಿ.

‍ಲೇಖಕರು Admin

22 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading