ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಣ್ಣ ನೀರಿಗೂ ಕೆಂಡದ ಹನಿಯ ಪ್ರಸವ…

ಕೆಂಡ ಹಾಸಿದ ಹಾದಿ

ಬಿದಲೋಟಿ ರಂಗನಾಥ್

ಕೆಂಡ ಹಾಸಿದ ಹಾದಿಯಲಿ ನಡೆದು
ಅಂಗಾಲುಗಳಿಗೂ ಅಳುತಿವೆ
ಕಣ್ಣ ನೀರಿಗೂ ಕೆಂಡದ ಹನಿಯ ಪ್ರಸವ

ಸಾಂತ್ವಾನಕೆ ನಿಲ್ದಾಣವಿಲ್ದದ
ಬೆದರಿಕೆಯ ಬೆಂಕಿ ಮಳೆ
ಹಾದಿ ಬದಿಯಲಿ ಕಿಡಿ ದೆವ್ವಗಳ ಪ್ರಲಾಪ
 
ಒಂಟಿ ಕಾಡುವ
ನನ್ನದಲ್ಲದ ಜೋಕರಿಕೆಯ
ತಪೋ ವೇದನೆಗೆ
ನಾನೇಕೆ ಪಾಲುದಾರರು?
ಇದು ರಕ್ತ ಹಂಚಿಕೆಯ ಸಂಚ?
 
ಒಳ ಸುಳಿ ಮನೆಯಲಿ
ತಣ್ಣನೆಯ ಮಳೆಗೆ ಆಹ್ವಾನ
ನಡುವೆ ಚಿಟಕಿ ಮುಳ್ಳಾಡಿಸುವ
ಕಣ್ಣ ಭಾವನೆಯ ಹಕ್ಕಿ
 

‍ಲೇಖಕರು G

7 April, 2015

2 Comments

  1. vasudeva nadig

    padyada sheershikeye novige shakkta ruupakavaagidhe..kone saalu padyada bhaavavannu anaavarana goliside.

  2. mmshaik

    uttama kavite..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading