ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಣ್ಣು ಮುಚ್ಚಲು ಹೆದರುತ್ತಿವೆ..ನನ್ನ ಪ್ರತಿ ರಾತ್ರಿಗಳು

ಗಜಲ್

– ಎಂ .ಎಂ ಶೇಕ್ ಯಾದಗಿರಿ

ಆ ಕ್ಷಣಗಳಿಗೆ ಮಾತನಾಡಿಸಲಾಗಲಿಲ್ಲ, ಮುನಿದುಹೋದವು ಸಾಕಿ ಇಡೀ ಆಯುಷ್ಯದ ನಿರೀಕ್ಷೆಗಳೇ, ಮುನಿದುಹೋದವು ಸಾಕಿ. ಉರಿಯುವ ಇಡೀ ರಾತ್ರಿಯ ಗಳಿಗೆಗೆ ಒಂದೊಂದು ಮುತ್ತು ಕಟ್ಟುವ ಅಸೆ ಆದರೆ ಮಾರುಕಟ್ಟೆಯಲ್ಲಿ ಮುತ್ತುಗಳೇ ,ಮುಗಿದುಹೋದವು ಸಾಕಿ . ಕಣ್ಣು ಮುಚ್ಚಲು ಹೆದರುತ್ತಿವೆ, ನನ್ನ ಪ್ರತಿ ರಾತ್ರಿಗಳು ಹೀಗೆಯೇ ಪೂರ್ತಿಯಾಗದೆ ಕನಸುಗಳೇ ಉಳಿದುಹೋದವು ಸಾಕಿ. ಋತುಗಳು ಬಂದವು ಕಳೆದು ಹೋದವು ನಿಯಮದಂತೆ ವರ್ಷಗಳ ಬರಿಗೈಯಲ್ಲಿ ಬಯಕೆಗಳೇ ಸವೆದು ಹೋದವು ಸಾಕಿ ಯಾರನ್ನು ದೂರದ ಈ ಸ್ಥಿತಿಗೆ ಮರುಗದಿರು ಪ್ರಿಯ ಕೊಂಡು ಕೊಂಡ ಅವಸ್ಥೆಗೆ ಕಾರಣಗಳೇ ಮುರಿದು ಹೋದವು ಸಾಕಿ.  ]]>

‍ಲೇಖಕರು G

14 September, 2012

4 Comments

  1. vinaya

    nice one 🙂

  2. mmshaik

    thanks

    • AugustinJames

      ನಾನು ಸುರಪುರದ ಕನ್ನಡ ಸಾಹಿತ್ಯ ಸಂಘದ ಉಪಾಧ್ಯಕ್ಷ. ನಾನು ಅವಧಿಯ ಚಂದಾದಾರ ಆಗಿದ್ದೇನಿಯೆ? ಅವಧಿಯ ಚಂದಾ ಹಣ ಏಷ್ಟು. ನಮ್ಮ ಸಂಘಚಂದಾದಾರ ಆಗಬಹುದೆ.
      ನಮ್ಮ ಸಂಘದ ಕಡೆಯಿಂದ ನಾವು ಏನಾದರುಅವಧಿಗೆ ಕೂಡಬಹುದೆ.?
      ಜೇ ಅಗಸ್ಟಿನ್ ಎಡ್ವಕೇಟ

  3. shanthi k.a.

    nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading