ಸಂಚಾರಿ ಭಾವಕ್ಕೆ ಕ್ಷಮೆ ಇರಲಿ
-ನಾಗರಾಜ್ ಹರಪನಹಳ್ಳಿ.

ದಂಡೆಯಲಿ ಹುಟ್ಟಿದ ಹಸಿಬಿಸಿ
ವಿಚಾರ ಶಿಶುಗಳು ಹಾದರದ ಕನಸುಗಳು
ದಂಡೆಯಲಿ ಪುಟ್ಟ ಹೆಜ್ಜೆಗಳ ನಿಟ್ಟು ಆಟವಾಡಿ
ಸುಳಿವ ಗಾಳಿಯಲಿ ಬೆರೆತು
ಸಂಜೆರಂಗಿಗೂ ರಾಗ ರತಿಯ ಬೆರೆಸಿ
ಮೈಮನಗಳಿಗೆ ಅದೆಂತಹದೋ ಪುಳಕ
ನೀನಿಲ್ಲದ ಕ್ಷಣ ಹುಟ್ಟಿದ ಸಂಚಾರಿ ಭಾವವನ್ನ
ಕ್ಷಮಿಸಿ ಬಿಡು ನೀನು
ಸದಾ ಪುಟಿದೇಳುವ ಅಲೆಗಳು
ಎಂದೂ ಅಳಿಯದ ಯೌವ್ವನದ ಗತ್ತು
ದಡದಲ್ಲಿ ನಿಂತು ನಡೆದವರಿಗೆ
ನಿರಂತರ ಪಾದಗಳಿಗೆ ಮುತ್ತಿಡುವ
ವಿನಮ್ರ ಅಲೆಗಳು
ಕ್ಷಮಿಸಿ ಬಿಡು ನೀನು
ದಂಡೆಯಲಿ ನಡೆದ ಚಂದದ ಹುಡುಗಿ
ಹೆಜ್ಜೆಗೂ ನಾದ ಹಚ್ಚಿ ಹರಡಿ
ಗಂಧ ಚೆಲ್ಲಿ ನಡೆದಿರಲು
ಎದೆಯ ರಾಗ ಚೆಲ್ಲುವ ಅಲೆ
ಉತ್ಸಾಹವನುಂಡು ಪುಟಿದೇಳುವ
ದುಂಡನೆಯ ಮೊಲೆಗಳ
ಮೇಲೆ ಕಣ್ಣನೆಟ್ಟಿದ್ದಕ್ಕೆ
ಕ್ಷಮಿಸಿ ಬಿಡು ನೀನು
ಸಮುದ್ರಕ್ಕೆ ಸವಾಲು ಹಾಕುವ ಪುಟ್ಟ
ಮಗುವಿನ ಪಾದಗಳೊಡನೆ ಸರಸ
ಅಲೆಗೂ ಅದೆಂತಹದೋ ತುಂಟಾಟ
ಮರಳಲ್ಲಿ ಕುಳಿತ ಪ್ರೇಮಿಗಳ
ಕುಂಡೆ ಚಿತ್ರಗಳ ಕಂಡು
ದಂಡೆಯಲಿ ಪುಂಡಾಟದ ಹಡಬೆ
ಲಹರಿಗೆ ; ಕಣ್ಣುಗಳಲ್ಲಿ ಹುಟ್ಟಿ ಸತ್ತ ಹಾದರವ
ಕ್ಷಮಿಸಿ ಬಿಡು ನೀನು






ಕವಿತೆ ಚೆನ್ನಾಗಿದೆ.
Tumba istavaytu, matte matte odisi
manasika hadara kuda hadarave. addarind nimage kshamapane illa!