ಕುಸುಮಾ ಪಟೇಲ್
ಕ-ನ-ಸು ಬಿತ್ತಿದೆ
ಆತ –
ಕಪ್ಪು ಬಿಳುಪೆಂದ
ಹೂಂ ಎಂದೆ
ಬಾನ ಭುವಿಯೆಂದ
ಹೂಂ ಎಂದೆ
ಮೊಸಳೆ ಮೀನೆಂದ
ನೀರ ಹಾಲೆಂದ
ಸೂರ್ಯ, ಚಂದ್ರ ,ತಾರಾ ನಕ್ಷತ್ರಗಳು
ತನವೆಂದ
ಹೂಂ ಎಂದೆ
ಕಣ್ಣಲ್ಲಿ ಕಣ್ಣಿಟ್ಟು
ಕಾಮನಬಿಲ್ಲೇರಿ
ತಾರೆ ಹೆಕ್ಕುವ
ಕನಸು ಬಿತ್ತಿದ.
ತಾರೆ ಹೆಕ್ಕುವ
ಮೋಡ ನುಸುಳುವ
ದಿನ ಕಳೆದು
ಈಗ ನಿಂತಿದ್ದೇನೆ- ವಾಸ್ತವದಲ್ಲಿ
ಈಗ-
ಯಾರನ್ನು
ಬೈಯ್ಯಲಿ?
ನನ್ನನ್ನೇ
ಅವನನ್ನೇ
ಪ್ರೀತಿಯನ್ನೆ
ಅಥವಾ-
ಪ್ರೀತಿಯ ಮೋಡಿಗೆ ಮರುಳಾಗಿ
ತರ್ಕ
ಮರೆತ
ಮೆದುಳನ್ನೆ?????
ಮನದ ಕಣಿವೆಯ ಹಾದಿ
ಮನದ ಕಣಿವೆಯ ಹಾದಿ
ಕಡಿದೋ ಕಡಿದೋ
ಕುವರ
ಬಿಸಿಲುಗುದುರೆಯನೇರಿ
ಹೊರಟ ವೀರ
ಕುಮಾರ
ಇಲ್ಲ, ಕತ್ತಿ ಗುರಾಣಿ
ಬಿಲ್ಲು, ಬಾಣ ಅಕ್ಷೊಣಿ
ಕಡಿದೋ ಕಡಿದೋ ಹಾದಿ
ಯಾಕೆ ಮಾಡಿತೊ ಮೋಡಿ
ಕುದುರೆ ಓಟದ ಸದ್ದು
ಸೋತು ಕೇಳಿತೊ ಕದ್ದು
ಹುಚ್ಚು ಓಟದ ಕುದುರೆ
ಬೆಚ್ಚದಿರೋ ನೀ ಕುವರ
ಏರಲಾರದ ಕನಸು
ಹೀರಲಾರದ ಮನಸು
ಮನದ ತೀರದ ಮಾತು
ಕೇಳದೇಕೋ ಒಡಲು
ದಿನವೆಂಬ ಹಟಮಾರಿ
ಹಸುಗೂಸು
ಸವೆಸುತಿದೆ ದಿನದಿನಕು
ಬದುಕ
ಕುದುರೆಯ ಗೊರಸು.





Thank you Avadhi.