ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕಣ್ಣಂಚಿಗೆ ನಿಂತ ನೀರನ್ನು ನುಂಗಿಕೊಳ್ಳುವ ಅನಿವಾರ್ಯತೆ ನಮಗೀಗ..’ – ಎಂ ಎಂ ಶೇಕ್

ಗಜಲ್

ಎಂ ಎಂ ಶೇಕ್

 
ದಂಡೆಯುದ್ದಕ್ಕೂ ನಡೆವ ಅನಿವಾರ್ಯತೆ ನಮಗೀಗ
ಅಳೆದು ಸುರಿದು ಮಾತಾಡುವ ಅನಿವಾರ್ಯತೆ ನಮಗೀಗ .
 
ಕನಸುಗಳು ಹೊತ್ತಿ ಉರಿದು ಹೋದವು ಬಿಸಿಲಲ್ಲಿ ಆದರೂ
ನದಿಗಳಾಗಿ ಹರಿದಾಡುವ ಅನಿವಾರ್ಯತೆ ನಮಗೀಗ .

ಬೆಳದಿಂಗಳೀಗ ತುಟ್ಟಿಯಾಯ್ತು ನನ್ನ ಬಯಕೆಗಳಿಗೆ
ಹಗಲುಗಳಿಗೂ ಮಾರಿಕೊಳ್ಳುವ ಅನಿವಾರ್ಯತೆ ನಮಗೀಗ .
 
ಹೃದಯಕ್ಕೆ ಹತ್ತಿರ ಚಿತ್ರವಿಚಿತ್ರದ ಮೋಡಗಳು ಕೊನೆಗೆ
ಅವುಗಳನ್ನೇ ಹಾಡುಗಳಾಗಿ ಹಾಡಿಕೊಳ್ಳುವ ಅನಿವಾರ್ಯತೆ ನಮಗೀಗ .
 
ಕಂಡಕಂಡಲ್ಲೆಲ್ಲಾ ಪುಟಕ್ಕಿಡುತ್ತವೆ ನೆನಪುಗಳು ಬದುಕನ್ನು
ಕಣ್ಣಂಚಿಗೆ ನಿಂತ ನೀರನ್ನು ನುಂಗಿಕೊಳ್ಳುವ ಅನಿವಾರ್ಯತೆ ನಮಗೀಗ .
 

‍ಲೇಖಕರು G

24 March, 2014

9 Comments

  1. bharathi

    Chennagide

  2. pratibha kage

    nice

  3. smitha Amrithraj

    anivaryategala naduveye huttida kavite istavaythu-smitha

  4. Anantharamesh

    ಮನಸ್ಸಿನ ದುಮ್ಮಾನಗಳ ಚಿತ್ತಕ್ಕೆ ಮುಟ್ಟಿಸುವ ಗಜ಼ಲ್.

  5. hcB

    Waw…

  6. Anil Talikoti

    Chennaagide
    -Anil

  7. Vidyashankar Harapanahalli

    Very nice! Wow!

  8. sangeetha raviraj

    kannancige…… anivaryate namageega… adbutha saalugalu
    sangeetha raviraj

  9. mmshaik

    dhanyavaadagaLu..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading