ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡು ದುಃಖದ ಸುದ್ದಿ…

ಹಿರಿಯ ರಂಗಕರ್ಮಿ ಜಿ ಕೆ ಗೋವಿಂದರಾವ ಅವರ ಅಗಲಿಕೆಗೆ ಅಶ್ರುತರ್ಪಣ.

ಡಿ ಎಸ್ ಚೌಗಲೆ

ಕಡು ದುಃಖದ ಸುದ್ದಿ ಬರಸಿಡಿಲಿನಂತೆ ಎರಗಿತು. ಜಿ.ಕೆ ಗೋವಿಂದರಾವ ಇನ್ನಿಲ್ಲವೆಂಬುದು ಒಂದರೆಕ್ಷಣ ನಂಬಲು ಅಸಾಧ್ಯ ಅನಿಸಿತು.ಯಾವ ಮುಲಾಜು ಇಲ್ಲದೆ ನೇರ ನಿಷ್ಠುರ ಚಿಂತನೆಗಳಿಂದ ಸಮಾಜವನ್ನು ಜಾಗರಗೊಳಿಸಿದವರು ಜಿಕೆಜಿ.

ರಂಗಭೂಮಿ, ಚಲನಚಿತ್ರ, ಅಧ್ಯಾಪನಗಳಲ್ಲಿ ತನ್ನದೇ ಛಾಪು ಒತ್ತಿದವರು. ಶೇಕ್ಸ್‌ಪಿಯರ್ ನ ನಾಟಕವೊಂದನ್ನು ಈಚೆಗೆ ರಂಗಾಯಣಕ್ಕೆ ನಿರ್ದೇಶಿಸಿದ್ದರು. ಅದೊಂದು ಬೃಹತ್ ಪ್ರೊಡಕ್ಷನ್. ಅವರ ಸಂಗಡ ನಾಲ್ಕು ವರ್ಷ ರಂಗಸಮಾಜದ‌ ಸದಸ್ಯನಾಗಿ ಕಳೆದ ಕ್ಷಣಗಳು ಬಹು ಅಮೂಲ್ಯವಾದವು. ನಮ್ಮೆಲ್ಲರ ಒಟ್ಟಿಗೆ ರಂಗಾಯಣ ಮತ್ತು ರಂಗಭೂಮಿಯ ಒಳಿತಿಗೆ ಅತ್ಯಂತ ಕಠೋರ‌ ನಿರ್ಣಯಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಚಿಂತಿಸುತ್ತಿದ್ದರು. ಹಾಗೆಯೇ ಶ್ರಮಿಸಿದವರು ಅವರು. ರಂಗಸಮಾಜದ ಸಭೆಗಳಲ್ಲಿ ಕಡಕ್ ಧ್ವನಿಯಲ್ಲಿ ವಿಚಾರ ಮಂಡಿಸುವ ಪರಿ ಅಬ್ಬಾ!!! ಅನುಕರಣೀಯವಾದುದು. ಅವರ ಜೊತೆಗೆ ಕಳೆದ ಪ್ರಸಂಗಗಳು ಒಂದೊಂದೆ ಸುರುಳಿಯಾಗಿ ಬಿಚ್ಚಿ ಎದುರು ನಿಲ್ಲುತ್ತಿವೆ. ಅಂಥ ಧೀಮಂತ ವ್ಯಕ್ತಿತ್ವ.

ಒಮ್ಮೆ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಹಮ್ಮಿದ ಶೆಕ್ಸಪಿಯರ್ ಕುರಿತ ಅವರ ಇಂಗ್ಲಿಷ್‌ ಉಪನ್ಯಾಸ ಅಮೋಘ, ಅದ್ಭುತ! ದಂಗುಗೊಳಿಸಿ ಶೆಕ್ಸಪಿಯರ್ ನ ಗುಂಗು ಹಿಡಿಸಿದ್ದರು.

2017 ರಲ್ಲಿ ನನ್ನ ಉದ್ವಸ್ಥ ನಾಟಕ ಬಿಡುಗೊಳಿಸಿ ತುಂಬಾ ಒಳ್ಳೆಯ ಮಾತಾಡಿದ್ದರು.

ನಾವು ಪರಸ್ಪರ ಬಹಳಷ್ಟು ಚರ್ಚೆಗಳನ್ನು ದೂರವಾಣಿಯಲ್ಲಿ ಮಾಡುತ್ತಿದ್ದೆವು. ಈಗ ಅವೆಲ್ಲ ಎಷ್ಟು ಮಹತ್ವದ ಆಲೋಚನೆಗಳು.ಅವು ಇನ್ನೆಲ್ಲಿ!!!
ಅವರನ್ನು ಕಳೆದುಕೊಂಡ ನಾವು ತೀರ ಬಡವರಾಗಿದ್ದೇ‌ವೆ.ಮನೆಯ ಹಿರಿಯನನ್ನು ಕಳಕೊಂಡ ದುಃಖ.ಇನ್ನು ಅವರ ಜನಪರ ಹೋರಾಟ, ಕಾರ್ಯ ಮತ್ತು ಸಾಧನೆಗಳು ನಮಗೆಲ್ಲ ದಾರಿಯ ಬೆಳಕು.

ಅವರಿಗೆ ಮನಃಪೂರ್ವಕ ನಮನಗಳು…

‍ಲೇಖಕರು Admin

15 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading