ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡಲು ಸೀಳುವ ಕರಿ ಬುರ್ಕಾ, ಕೇಸರಿ ಶಾಲುಗಳು..!!

ಬೊಳುವಾರು ಮಹಮ್ಮದ್ ಕುಂಞಿ

ಬಹಳ ವರ್ಷಗಳ ಹಿಂದೆಯೆಲ್ಲ, ರಾತ್ರಿಯ ಕೊನೆಯ ಜಾವದಲ್ಲೇಳುವ
ಬೆಂಗರೆಯ ( ಕಡಲಬದಿಯ) ಹಿಂದೂ-ಮುಸ್ಲಿಮ್ ಪುರುಷರು,
ಪುಟ್ಟಪುಟ್ಟ ನಾಡದೋಣಿಗಳನ್ನೇರಿ ಕಡಲು ಸೀಳಲು ಹೋದರೆ,
ಅವರನ್ನು ನಿರೀಕ್ಷಿಸುತ್ತಾ ಕಡಲಕರೆಯಲ್ಲಿ ಮನೆಮಂದಿಯೆಲ್ಲ
ಆತಂಕದಿಂದ ಕುಳಿತಿರುತ್ತಿದ್ದರು.

ನಿತ್ಯವೂ ಸಾವಿನ ಮನೆಯ ಕದತಟ್ಟಿ ಬರುವ ಆ ಮೀನುಗಾರರಿಗೆ
ಬದುಕಿನ ಮೇಲೆ ಅಗಾಧವಾದ ಪ್ರೀತಿಯಿತ್ತು ಎಂಬುದಕ್ಕೆ
ಉದಾಹರಣೆಯೆಂದರೆ;
-ಬಹಳ ಹಿಂದೊಮ್ಮೆ ಮುತ್ತುಪ್ಪಾಡಿಯಲ್ಲಿ ಕೋಮುಗಲಭೆಯಾಗಿದ್ದಾಗ,
ಎರಡೂ ಕೋಮಿನವರು ಓಡಿಹೋಗಿ ರಕ್ಷಣೆ ಪಡೆದದ್ದು
ಬೆಂಗರೆಯ ಅಪರಿಚಿತರ ಮನೆಗಳಲ್ಲಿ.

 

ಆದರೀಗ ಎಲ್ಲ ತಿರುವುಮುರುವಾಗಿದೆ. ಕೂಡುರಸ್ತೆಗಳ
‘ಮಾರಾಟದ ವಸ್ತು’ಗಳಾಗಿರುವ ಕರಿ ಬುರ್ಕಾ, ಕೇಸರಿ ಶಾಲುಗಳು,
ಮನೆಯಿಂದ ಹೊರಗೆ ಹೋಗಿರುವ ಮಕ್ಕಳು,
ಜೀವಸಹಿತ ಮನೆಗೆ ಮರಳುವುದನ್ನು,
ಅದೇ ಹಳೆಯ ಆತಂಕದಿಂದ ಕಾಯುವಂತೆ ಮಾಡಿದೆ.

‍ಲೇಖಕರು Avadhi GK

25 February, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading