ವಿಜಯಕುಮಾರ್ ಹೂಗಾರ್
ಬದುಕಿನ ಓಟ,
ಗುರಿಯೆಡೆಗೋ
ಅಥವಾ
ಮೂಲದೆಡೆಗೋ.
ಕಡಲು,
ಆಳದ ಸಂಕೇತವೋ
ಅಥವಾ
ಅಲೆಗಳ ಆತುರತೆಯೋ.

ನದಿಯ ಒಲವು,
ತೆಪ್ಪದ ಪ್ರಾರ್ಥನೆಯಡೆಗೋ
ಅಥವಾ
ಸುಳಿಯ ಸೆಳೆತಕ್ಕೋ.
ಹುಡುಕಾಟ,
ನಮ್ಮೊಳಗಿನ ನಾವೋ
ಅಥವಾ
ನಿಮ್ಮೊಳಗಿನ ನೋವೋ.
ಒಲವು,
ಆತ್ಮ ಶುದ್ಧಿಯ ನದಿಯೋ
ಅಥವಾ
ಲೂಟಿಯಾಗ ಬೇಕಾದ ನಿಧಿಯೋ.
ಮಳೆ,
ಕುರುಡು ಮುಗಿಲ ಕಂಬನಿಯೋ
ಅಥವಾ
ಧರೆಗಿಡುವ ಚುಂಬನವೋ.
ಮನುಜ,
ದೀನರ ಕೊರಳೋ
ಅಥವಾ
ಸ್ವಾರ್ಥದ ನೆರಳೋ.
ಹೆದ್ದಾರಿ,
ಗುಡಿಸಲ ಸಮಾಧಿಯೋ
ಅಥವಾ
ಆಂಬುಲೆನ್ಸ್ನ ಸರಳ ಹಾದಿಯೋ.






nice poem..deepavaLiya shubhashyagaLu..
chennagide
Good one
-Anil