ಗೋವಿಂದ ಹೆಗಡೆ
ಈ ಕಡಲು
ಬಡಬಾಗ್ನಿಯ
ಒಡಲಲ್ಲಿಟ್ಟೂ ಹೇಗೆ
ನಗುತ್ತದೆ!
ಅಲೆದೋಳು ಬೀಸಿ
ಅಪ್ಪಿ
ಸಂತೈಸುತ್ತದೆ!
ಕಡಲು ಮಲಗುವುದಿಲ್ಲ.
ಒಮ್ಮೆ ಕೆಳದನಿಯಲ್ಲಿ
ಮರ್ಮರಿಸುವ
ಒಮ್ಮೆ ಅಲೆಗೈ ಬಡಿದು
ಬೊಬ್ಬಿರಿಯುವ…
ಈ ಹಠಮಾರಿ ಮಗುವನ್ನು
ಎದೆಗಪ್ಪಿ
ಸಂತೈಸಲಿ ಹೇಗೆ?

ನಾನು ನೋಡುವಾಗ
ಕಣ್ಣು ಮುಚ್ಚಾಲೆ
ಆಡುತ್ತಲೇ ಇರುವ
ಈ ಕರೆ- ಈ ಕಡಲು
ನೋಡದಿದ್ದಾಗ
ಏನು ಮಾಡುತ್ತವೆ?
ಪರಸ್ಪರರ ಎದೆಯಲ್ಲಿ
ಬೆರಳಾಡಿಸುತ್ತ,
ಸಂತೈಸುತ್ತ..?






ಎಷ್ಟೊಂದು ಸುಂದರ ಕಲ್ಪನೆ ಗೋ