ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಂಗಳಲ್ಲಿನ ನಿದ್ದೆಯ ಪಸೆ ಮಾಸಿಲ್ಲ..

ರಾಜೇಶ್ವರಿ ಲಕ್ಕಣ್ಣವರ

ಅರೆ ಬರೆ ತೆರೆದ
ಕಣ್ಣುಗಳಿಂದಲೇ
ತಮ್ಮ ಪಾಳಿ ಯಾವಾಗ ಬರುವುದೆಂದೊ
ಕಾಯುತ್ತಾ
ಡಾಕ್ಟರಿನ ಛೆಂಬರಿನ ಎದುರಿಗೆ
ಮುಖ ಮಾಡಿ  ಕೂತಿದ್ದಾರೆ
ಕಂಗಳಲ್ಲಿನೂ ನಿದ್ದೆಯ ಪಸೆ ಮಾಸಿಲ್ಲ

ಡಾಕ್ಟರ್ ಯಾವಾಗ ಬರುವರೋ?

ಊರಿಗೆ ಹೋಗಲು ಹೊತ್ತಾಗುವುದೋ

ಮನೆಯವರನ್ನೆಲ್ಲ ಯಾವಾಗ ನೋಡುವುದೋ
ಸ್ವಗತದಲ್ಲಿಯೆ ಮಾತೊಂದು ಗುನುಗುತ್ತಿದೆ

ಆ ಕಡೆಯ ಮೂಲೆಯಿಂದ
ಈ ಕಡೆಯ ಮೂಲೆಯವರೆಗೆ
ಕಸವನ್ನೆಲ್ಲ ಒಂದೇ ಸಾಟಿಗೆ
ತೊಡೆದು ಹಾಕಬೇಕೆನ್ನುವ
ಹಠ ಕಸ ಹೊಡೆಯುವವಳಿಗೆ

ತೆರೆದ ಕಂಗಳುಗಳಲ್ಲಿ
ತೋಳುಗಳ ಬಂಧಿಯಲ್ಲಿ
ಸಿಲುಕಿರುವ ಮಗುವೊಂದು
ನಗುತ್ತಿದೆ ಬೊಚ್ಚುಬಾಯಿಯಲೇ
ಬಿಚ್ಚಿ ಬಿಚ್ಚಿ

ರೋಗಿಗಳ ಗುರುತಿಸಲು
ಟೋಕನ್ ನಂಬರೊಂದು ಜೋರಾಗಿ
ಮೊಳಗುತಿದೆ
ಸಾಲಾಗಿ ಒಬ್ಬರ ಹಿಂದೆ
ಮತ್ತೊಬ್ಬರು ನಡೆದು
ಹೋಗುತ್ತಿದ್ದಾರೆ
ಪರಿಚಿತರಂತೆ…

 

 

 

‍ಲೇಖಕರು Avadhi GK

17 February, 2018

1 Comment

  1. kalkesh goravar

    nice one

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading