ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓಡುವವರ ಹಿಡಿದು ಇಲ್ಲಿಯೇ ನಿಲ್ಲಿಸಿ ಬದುಕಲು ಕಲಿಸಬೇಕು..

ಎಚ್ ಜಿ ಮಳಗಿ

ನಾನೀಗ ಏಳಬೇಕು,
ನಿದ್ದೆಯಾಕೊಡಹೀ ಜಡ ಜಂಜಡವಾ ಕೆಡಹಿ
ನಾನೀಗ……
ಹಂಗಿಸಿದ್ದು ಹೀಯಾಳಿಸಿದ್ದು ಅತಿಯಾಯ್ತು
ನಮ್ಮವರ ತುಳಿದು ಹತ್ತಿದ್ದು ಮೇಲೆ
ನೋಡಿದರೆ
ನಮ್ಮವರವೇ ಶವಗಳು ಕೆಳಗೆ
ಕಾಲಿಡಬಾರದವರ ಮನೆ ಬಾಗಿಲು ಕಾಯುತಿರೆ
ಬಿದ್ದವರೇ ತುಳಿಯುತಿರೆ ಹೆದರಿಸುತಿರೆ
ಶೋಷಣೆಯ ಢಾಲು ಹಿಡಿದು ನನ್ನ ಎದುರಿಸುತಿರೆ
ಘೋಷಣೆಗಳು ಶೋಷಣೆಗೊಳಗಾದಾಗ
ಶೋಷಿತರೇ ಶೋಷಕರಾದಾಗ
ನಾನೀಗ……

ಬಿದ್ದವರಿಗೇ ಗುದ್ದು ಕದ್ದವರಿಗೆ ಶಾಲು (ರು)ಮಾಲು
ಎದ್ದು ನಿಲ್ಲಲು ಬೇಕಿಲ್ಲ ಕಾಲು
ಪೂರ್ವದ ಸೂರ್ಯ ಮುಳುಗುತಿರೆ
ಪಶ್ಚಿಮದಲಿ ನೈದಿಲೆ ಅರಳುತಿರೆ
ನಾನೀಗ…..
ನನ್ನ ಜನ ನನ್ನ ಜಲ ನನ್ನ ನೆಲ
ಪರರ ಪಾಲಾಗುತಿರೆ
ಪ್ರತಿಭೆ ಪಲಾಯನವಾಗುತಿರೆ ಒಳಿತು ತುಳಿತಕ್ಕೊಳಗಾಗಿರೆ
ಸಂಸ್ಕೃತಿ ಸೌಜನ್ಯತೆ ಕೈ ಬಿಟ್ಟು ಹೋಗುತಿರೆ
ನಾನೀಗ ಏಳಬೇಕು
ಹೊಸ ಕನಸು ಕಂಡಿದ್ದು ಹಿಂದೆ!
ನನಸು ಕಾದಿದೆ ಮುಂದೆ!
ತಳ್ಳಿದವರ ನಡುವೆ ಒಳ್ಳೆಯವನಾಗಿ
ಓಡುವವರ ಹಿಡಿದು ಇಲ್ಲಿಯೇ ನಿಲ್ಲಿಸಿ
ಬದುಕಲು ಕಲಿಸಬೇಕು.
ನಮ್ಮದೇ ನೆತ್ತರು ಮಾಂಸ ಖಂಡ
ಮೂಳೆಯಾ ಸೇರಿಸಿ
ಕಟ್ಟಬೇಕು ಮತ್ತೊಂದು ದ್ವಾರಕೆ! ಹಾಡಬೇಕೊಂದು ಹೊಸ ಗೀತೆ
ನಿದ್ದೆಯಾಕೊಡಹೀ ಜಡ ಜಂಜಡವಾ ಕೆಡಹಿ
ನಾನೀಗ ಏಳಬೇಕು.

‍ಲೇಖಕರು G

21 August, 2014

2 Comments

  1. ಲಕ್ಷ್ಮೀಕಾಂತ ಇಟ್ನಾಳ

    ‘ಕಟ್ಟಬೇಕು ಮತ್ತೊಂದು ದ್ವಾರಕೆ! ಹಾಡಬೇಕೊಂದು ಹೊಸ ಗೀತೆ’- ಅದ್ಭುತ ಕವಿತೆಯೊಂದರಲ್ಲಿ ಅಡ್ಡಸಾಲೆನಿಸಿತು.

  2. somashekar d n

    ಚೆನ್ನಾಗಿದೆ.
    ಹಠಾತ್ತನೆ ಎಚ್ಛರಾದ ಪರಿಯಿದು.
    ಇಕ್ಲಿರ್ಲಾ ಒದೀರ್ಲಾ ದಾರಿಗಿಂತ ಸ್ವಲ್ಪ ದೂರದಲ್ಲಿದೆ ಸದ್ಯ.
    ಯಾಕಿಷ್ಟು ಉಗ್ರ ಮತ್ತು ವ್ಯಗ್ರ
    ಅಭಿವ್ಯ? ಕ್ತಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading