ಹೀಬ್ರೂ ಮೂಲ: ಅಗಿ ಮಿಶೊಲ್

ಕನ್ನಡಕ್ಕೆ: ಬಿ.ಎಂ.ಹನೀಫ್
—-
ಈಗ ಸೂರ್ಯಕಾಂತಿ ಆಗುವುದು ಒಳ್ಳೆಯದು
ನನ್ನ ಕತ್ತನ್ನು ಹೊರಳಿಸಲು
ಸೂರ್ಯನ ಕಡೆಗೆ
ಹಾಗೂ
ಅರಳಿದ ಬಳಿಕ
ಸೂರ್ಯಾಸ್ತದ ಕಡೆಗೆ
ನೋಡದಂತಾಗಲು

ಹಳದಿಯನ್ನು ಹೆಚ್ಚಿಸುವುದು ಒಳ್ಳೆಯದು
ಸ್ವರ್ಗದ ದಟ್ಟ ನೀಲಿಯನ್ನು
ಅದು ಗಾಢವಾಗಿಸುತ್ತದೆ
ಮತ್ತು
ಮರದೊಂದಿಗೆ ವಾದ ಮಾಡುವ ಬದಲು
ಅದರಂತೆಯೇ ಆಗಿಬಿಡೋಣ
ಬೇರುಗಳನ್ನು ಆಳಕ್ಕೆ ಇಳಿಸಲು
ಏಕೆಂದರೆ
ತಲೆ ಸುತ್ತು ಬಂದರೂ
ನನಗೆ ಭೂಮಿಯೇ ಆಕಾಶ
(* ಅಗಿ ಮಿಶೊಲ್ ಇಸ್ರೇಲಿನ ಹೀಬ್ರೂ ಭಾಷೆಯ ಕವಯತ್ರಿ. ರೊಮಾನಿಯಾದಲ್ಲಿ ಹುಟ್ಟಿ ನಾಲ್ಕನೇ ವಯಸ್ಸಲ್ಲಿ ಹೆತ್ತವರ ಜೊತೆ ಇಸ್ರೇಲಿನ ಟೆಲ್ ಅವಿವ್ ಗೆ ಬಂದು ನೆಲೆಸಿದವರು. ಇವರ ಮನೆ ಮಾತು ಹಂಗೆರಿ. ಆದರೆ ಹೀಬ್ರೂವಿನ ಜನಪ್ರಿಯ ಕವಯತ್ರಿ. ಈ ಕವಿತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದವರು ಜೊಅನ್ನಾ ಚೆನ್.)






0 Comments