ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಒಳಗೂ ಹೊರಗೂ ಬೆತ್ತಲಾಗುವುದು…’ – ವಾಣಿ ಸಂದೀಪ್ ಕವನ

ಅನಾಥ-ಹೆಣ್ಣು

ವಾಣಿ ಸಂದೀಪ್

ಜಾತಿ ಧರ್ಮದ ಹಂಗಿಲ್ಲದ
ನಾನು ಸೂರ್ಯ ಚಂದ್ರರ ಮಧ್ಯೆ
ಆಗು ಹೋಗುಗಳಿಗೆ ಅರ್ಥವಿಲ್ಲದೆ
ಅಲೆದಲೆದು ಬೆಂದು ಬಸವಳಿದೆ
 
ತುತ್ತು ಅನ್ನಕಾಗಿ ತುಂಡು ಬಟ್ಟೆಗಾಗಿ
ಈಡೇರದ ಆಸೆಗಳಿಗೆ
ಕನಸುಗಳ ಬಾಣ ನಾಟಿ
ಆಗಿಹುದದುವೇ ಜೀವಂತ ಸಮಾಧಿ
 
ಜಗದ ದನಿಗೆ ಕಿವುಡಳಾಗಿ
ಧ್ವನಿಯಿದ್ದರೂ ಮೂಕಳಾಗಿ
ಕಲ್ಲಾಗಿಹ ಹೃದಯ ಹೊತ್ತು
ಬಾಲ್ಯವೇ ಸ್ವರ್ಗವೆಂದು ಹುಡುಕುತ್ತಿರುವೆ

ಹೆಣ್ಣಾಗಿ ಹುಟ್ಟಿದೆನೆಂಬ ಕೊರಗಿಲ್ಲ
ಕಿತ್ತು ತಿನ್ನುವ ಕಾಮುಕರ
ಕಣ್ಣುಗಳಿಂದ, ತುಂಬು ಯೌವ್ವನ
ಮುಚ್ಚಿಕೊಳ್ಳಲು ಅಂಗೈಯಗಲದ ಭೂಮಿಯಿಲ್ಲ
 
ಬಾನಂಗಳದ ತೆಕ್ಕೆಯಲ್ಲಿ ತಾರೆಗಳ
ಚಾದರ ಹೊದ್ದು ನಿದ್ದೆಯಿಲ್ಲದ ರಾತ್ರಿಗಳು
ನಿದ್ರಾದೇವಿಗೆ ವಶವಾದಾಗ,ಲೆಕ್ಕಕ್ಕೆ
ಸಿಗದ ಸುಖಕ್ಕಾಗಿ ಹವಣಿಸಿದ ಕೈಗಳೆಷ್ಟೋ
 
ಭಿತ್ತಿ ಚಿತ್ರದ ಸುಂದರಿ ಅಣಕಿಸಿದಾಗ
ಒಳಗೂ ಹೊರಗೂ ಬೆತ್ತಲಾಗುವುದು
ನಿನ್ನ ಇಚ್ಛಾ ಪ್ರಾರಬ್ಧವಾದರೆ
ಅದು ನನಗಂಟಿದ ದಾರಿದ್ರ್ಯವೆಂದೆ
 
ಎಷ್ಟೋ ಸಿಹಿ ಕಹಿಗಳ
ಸಮ್ಮಿಶ್ರಣಗಳ ಜೀವನ
ಕಹಿ ಹನಿಗಳನ್ನು ನುಂಗಿದ್ದು
ಸಿಹಿಯ ಅರ್ಥವನರಿಯದಾದೆ
 
ನಗುವಿಲ್ಲದ ಎಷ್ಟೋ ಕ್ಷಣಗಳು
ಕೊಂಡಿ ಬೆಸೆದು ವರುಷಗಳಾಗಿ
ಮರುಭೂಮಿಯ ಓಯಸಿಸ್ನಂತೆ
ಆಶಾಕಿರಣದ ಎಳೆಗಾಗಿ ಕನವರಿಸುತ್ತಿದೆ
 
ಎಂದು ಬರುವವು ಆ ದಿನಗಳು…ಎಂದು ಬರುವವು ಆ ಕ್ಷಣಗಳು……..
 

‍ಲೇಖಕರು G

9 November, 2013

5 Comments

  1. Anonymous

    Beautiful, expressive poetry. Harsh reality is depicted.

  2. shadakshari.Tarabenahalli

    ತುಂಬಾ ಹಿಡಿಸಿದ್ದು…
    ಎಷ್ಟೋ ಸಿಹಿ ಕಹಿಗಳ
    ಸಮ್ಮಿಶ್ರಣಗಳ ಜೀವನ
    ಕಹಿ ಹನಿಗಳನ್ನು ನುಂಗಿದ್ದು
    ಸಿಹಿಯ ಅರ್ಥವನರಿಯದಾದೆ
    ಚೆನ್ನಾಗಿದೆ…

  3. nagraj.harapanahalli

    ಆರಂಭ ಚೆನ್ನಾಗಿದೆ. ಮಧ್ಯದ ಸಾಲುಗಳ ಬಗ್ಗೆ ಆಕ್ಷೇಪವೂ ಇದೆ.

    • Nagshetty Shetkar

      ಬಹುಶಃ ತಮಗೆ ಪದ್ಯ ಪೂರ್ತಿಯಾಗಿ ಅರ್ಥವಾಗಿಲ್ಲ.

  4. ಅಶೋಕ ಶೆಟ್ಟರ್

    “ಭಿತ್ತಿ ಚಿತ್ರದ ಸುಂದರಿ ಅಣಕಿಸಿದಾಗ
    ಒಳಗೂ ಹೊರಗೂ ಬೆತ್ತಲಾಗುವುದು
    ನಿನ್ನ ಇಚ್ಛಾ ಪ್ರಾರಬ್ಧವಾದರೆ
    ಅದು ನನಗಂಟಿದ ದಾರಿದ್ರ್ಯವೆಂದೆ”
    ಕವಿತೆ ಒಂದರ್ಥದಲ್ಲಿ ಅಸಹಾಯಕತೆಯನ್ನೇ ವ್ಯಕ್ತಗೊಳಿಸುತ್ತದಾದರೂ ಅದರ ಒಟ್ಟಾರೆ ಧ್ವನಿ ಪರಿಣಾಮಕಾರಿಯಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading