ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಒಮ್ಮೆ ಮೌನ ಮುರಿದು ಮಾತಿಗಿಳಿಯೋಣ…’ – ರೇಣುಕಾ ಹೆಳವರ

ಮೌನ ಮಾತಾದಾಗ

ರೇಣುಕಾ ಹೆಳವರ


ಕರಾಳ ರಾತ್ರಿಯ ಭೀಕರ ಮೌನ
ಎಷ್ಟೋ ವರ್ಷಗಳು ಸಂದಿವೆ
ನಿನ್ನ ಜೊತೆ ಮಾತಾಡಿ…
 
ಒಂದೇ ಸೂರಿನಡಿ
ಅಪರಿಚಿತರಂತೆ ಬದುಕಿದೆವು
ಎದುರುಬದಿರಾದಾಗ
ಬರೀ ಮುಖ ನೋಡಿಕೊಳ್ಳುತ್ತಿದ್ದೆವು
ಕಣ್ಗಳ ಮಿಲನವಾಗುತ್ತಿತ್ತು
ಹೃದಯದ ಬಡಿತ ಕೇಳುತ್ತಿತ್ತು.
 
ನನಗೆ ಈಗಲೂ ನೆನಪಿದೆ
ಮುಖ ಮನಸ್ಸಿನ ಕನ್ನಡಿಯಂತೆ
ಆದರೆ ಅದರಲ್ಲಿ ನೀ ನನ್ನ ಕಾಣಲಿಲ್ಲ
ನಾನೊಂದು ಹೆಣ್ಣೆಂಬ ತಾತ್ಸಾರ ಕಂಡೆ
 
ಸುಮ್ಮನೆ ಯಾಂತ್ರಿಕವಾಗಿ
ಸಾಗಿದ ಬದುಕು ನಮ್ಮದು
ಪ್ರೀತಿಯಿಲ್ಲ, ಒಲವಿಲ್ಲ, ಗೆಲುವಿಲ್ಲ
 
ಅದು ಹೇಗಿರುತ್ತದೆಂದು
ತೋರಿಸಲಿಕ್ಕಾದರೂ ಒಮ್ಮೆ
ಮೌನ ಮುರಿದು ಮಾತಿಗಿಳಿಯೋಣ
ನಿನ್ನೊಲವ ಕನ್ನಡಿಯಲ್ಲಿ
ನನ್ನ ಬಿಂಬವಿರಲೆಂಬ ಬಯಕೆಯಿದೆ…
 

‍ಲೇಖಕರು avadhi

31 May, 2013

10 Comments

  1. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ

    ಆಪ್ತ ಭಾವದ ಅಂತರಾಳದ ತಳಮಳದಿಂದ ಬಿಡುಗಡೆ ಕೋರುವ ಹೃದಯಂಗಮ ಸಾಲುಗಳು..ಕವಿತೆ ಚೆನ್ನಾಗಿದೆ ಅಭಿನಂದನೆಗಳು.

  2. ರಮೇಶ್ ಹಿರೇಜಂಬೂರು

    ಸುಮ್ಮನೆ ಯಾಂತ್ರಿಕವಾಗಿ
    ಸಾಗಿದ ಬದುಕು ನಮ್ಮದು
    ಪ್ರೀತಿಯಿಲ್ಲ, ಒಲವಿಲ್ಲ, ಗೆಲುವಿಲ್ಲ
    ವಾಹ್… ಒಳ್ಳೆಯ ಕವಿತೆ. ಯಾಂತ್ರಿಕತೆ ಈ ಯುಗದಲ್ಲಿ ಎಲ್ಲರ ಬದುಕೂ ಹೀಗೇ ಒಟ್ಟಿಗೆ ಬದುಕಿದರೂ ಭಾವನೆಗಗಳು ಬತ್ತಿ ಹೋಗಿರುತ್ತವೆ. ಹೆಸರಿಗೆ ಮಾತ್ರ ದಂಪತಿ, ಹೆಸರಿಗೆ ಮಾತ್ರ ಸ್ನೇಹ ಇತ್ಯಾದಿ ಸಂಬಂಧಗಳು… ಈ ಕಾಲ ಮಾನಕ್ಕೆ ಹೇಳಿಮಾಡಿಸಿದಂತಿದೆ ಕವಿತೆ… ನಿಮ್ಮ ಬರಹ ಹೀಗೇ ಸಾಗಲಿ ರೇಣುಕಾ… ಅಭಿನಂದನೆಗಳು…
    -ರಮೇಶ್ ಹಿರೇಜಂಬೂರು

  3. nagraj harapanahalli

    ಇವತ್ತು ತುಂಬಾ ಸಂಬಂಧಗಳು …ನೀವು ಕವಿತೆಯಲ್ಲಿ ಹುಡುಕಿದ ಹಾಗೆ ಇವೆ..ಕವಿತೆ ಸೊಗಸಾಗಿ ಬಂದಿದೆ .

  4. ಕೆ.ಎಂ.ವಿಶ್ವನಾಥ

    ಮಾನ್ಯರೆ ,
    ಈ ಕವನ ಬಹಳ ಸೊಗಸಾಗಿದೆ ಉತ್ತಮ ಬಾವನೆಗಳನ್ನು ಹೊಂದಿವೆ ನಾನು ಓದಿ ಭಾವುಕನಾದೆ

  5. mmshaik

    chennaagide..!

  6. chalam

    ಮಾತನಾಡುವ ಹಂಬಲದ ಭಾವ ತುಂಬಾ ಚನ್ನಾಗಿದೆ.

  7. Gururaja kathriguppe

    Renukaji , very good poem. this poem made us to look at you for more such poems with lot of ‘expectations’. please don’t disappoint. write more and more quality poems.

  8. ಪ್ರಕಾಶ ಬಿ. ಜಾಲಹಳ್ಳಿ

    kvite chennagide…

  9. Renuka helavar

    Tumba thanyavadaglu ellrigu

  10. Shrikanth H.M

    ನಿಮ್ಮ ಕವಿತೆ ತುಂಬಾ ಚನ್ನಾಗಿದೆ .
    ಅಭಿವಂದನೆಗಳು ರೇಣುಕಾ ಹೆಳವರ ಻ಅವರಿಗೆ…….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading