ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಒಮ್ಮೆ ನಲುಗಬಹುದೇ ಉಸಿರು…' – ದಿವ್ಯಾ ಆಂಜನಪ್ಪ ಕವನ

ಕಾವ್ಯ

ದಿವ್ಯ ಆಂಜನಪ್ಪ

ಬಸಿದುಕೊಂಡ ಕಣ್ಣೀರೆಲ್ಲಾ
ಮತ್ತೆ ಹೊರಳಬಹುದೆ
ಪ್ರೀತಿ ಪನ್ನೀರಿನೆಡೆಗೆ!
 
ಅಳಿದು ಹೋದ ಭರವಸೆಗಳೆಲ್ಲಾ
ಮತ್ತೆ ಅರಳಬಹುದೆ
ಬಯಕೆ ಬೆಸುಗೆಯೆಡೆಗೆ
 
ಬಿಸುಟುಕೊಂಡ ಬಂಧವೆಲ್ಲಾ
ಮತ್ತೆ ಅರ್ಥ ಪಡೆಯಬಹುದೆ
ತಿಳಿಗೊಂಡ ಭಾವಗಳೆಡೆಗೆ
 
ಕಮರಿದ ಕನಸೆಲ್ಲಾ
ಮತ್ತೆ ಕೊನರಬಹುದೆ
ಕಣ್ಣು ಬಿಂದುವಿನ ಹೊಳಪಿನೆಡೆಗೆ
 
ಲಯವಿಲ್ಲದ ಹೃದಯ ಮಿಡಿತ
ಮತ್ತೆ ಲಂಗಿಸುವುದೇ
ಪ್ರೇಮ ಕವಿತೆಯ ಸಾಕ್ಷಿಯೆಡೆಗೆ
 
ಮೌನವಹಿಸಿದ ಮಾತುಗಳೆಲ್ಲಾ
ಮತ್ತೆ ಮೊಳಗಬಹುದೇ
ಮುತ್ತು ಪೋಣಿಸುವುದರೆಡೆಗೆ
 
ಕೊಂದ ನಿರೀಕ್ಷೆಗಳೆಲ್ಲಾ
ಮತ್ತೆ ಹಸಿರಾಗಬಹುದೇ
ನೆಮ್ಮದಿಯ ಸುಖದೆಡೆಗೆ
 
ಒಂಟಿತನದ ಜೀವ
ಮತ್ತೆ ಹುರುಪುಗೊಳ್ಳಬಹುದೇ
ತಿರಸ್ಕಾರಗಳ ಮೀರುತ ಗುಂಪಿನೆಡೆಗೆ
 
ಕಳೆದು ನಿಂತ ಕೈಗಳೆಲ್ಲಾ
ಮತ್ತೆ ಚಪ್ಪಾಳೆ ಚಿಟಿಕೆಗಳಾಗಬಹುದೇ
ಹೊಸತು ಉತ್ಸಾಹದೆಡೆಗೆ
 
ಕಣ್ ಕಿವಿ ಬಾಯ್ ಮುಚ್ಚಿದ ಜನರೆಲ್ಲಾ
ಮತ್ತೆ ನಕ್ಕು ಕುಣಿಯಬಹುದೇ
ಹಳದಿ ಪೊರೆ ಹರಿದ ಕಣ್ಗಳೆಡೆಗೆ
 
ನಿರಾಶ್ರಿತ ಮನವೆಲ್ಲಾ
ಮತ್ತೆ ಮನದೇಗುಲಗಳಾಗಬಹುದೇ
ಇಂಚಿಂಚು ಅಗೆದು ಬದುಕಿನೆಡೆಗೆ
 
ಮರುಗಟ್ಟಿದ ತನುವಿನೊಳಗೆ
ಒಮ್ಮೆ ನಲುಗಬಹುದೇ ಉಸಿರು
ಮಡಿಲ ತುಂಬುವ ಹೊಸ ಕಾವ್ಯದೆಡೆಗೆ!
 

‍ಲೇಖಕರು G

1 June, 2015

18 Comments

  1. Hema Sadanand Amin /mumbai

    excellent,novina bhavavannu kavyamayavagi mudisida riti kavayatriya kushalathege sakshi.

    • ದಿವ್ಯ ಆಂಜನಪ್ಪ

      ಧನ್ಯವಾದಗಳು 🙂

    • ದಿವ್ಯ ಆಂಜನಪ್ಪ

      ಧನ್ಯವಾದಗಳು 🙂 ..

  2. Noorulla

    ಖಂಡಿತ,ಅವಿತುಕೊಂಡ ಭಾವನೆ ಕಾವ್ಯದೆಡೆಗೆ ಹರಿದಿದೆ. ಚೆನ್ನಾಗಿದೆ.

    • ದಿವ್ಯ ಆಂಜನಪ್ಪ

      ಧನ್ಯವಾದಗಳು 🙂

  3. Tirupati Bhangi

    kavite channagide.

  4. ಆರತಿ ಘಟಿಕಾರ್

    ಭರವಸೆ ನಿರೀಕ್ಷೆಗಳ ಕವನ !ಚೆನ್ನಗಿದೆ ದಿವ್ಯ

    • ದಿವ್ಯ ಆಂಜನಪ್ಪ

      ಥ್ಯಾಂಕ್ಯೂ ಆರತಿ ಮೇಡಂ 🙂

  5. bidaloti Ranganath

    ಕವಿತೆಯಲ್ಲಿನ ಆಶಾಭಾವನೆ ಹೃದಯ ತುಂಬುತ್ತದೆ

    • ದಿವ್ಯ ಆಂಜನಪ್ಪ

      ಥ್ಯಾಂಕ್ಯೂ ಸರ್ 🙂

    • ದಿವ್ಯ ಆಂಜನಪ್ಪ

      ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು 🙂

  6. mmshaik

    jeevanta kavana…..

    • ದಿವ್ಯ ಆಂಜನಪ್ಪ

      ಥ್ಯಾಂಕ್ಯೂ 🙂

  7. ಅಕ್ಕಿಮಂಗಲ ಮಂಜುನಾಥ

    ಕವಿತೆ ತುಂಬಾ ಚೆನ್ನಾಗಿದೆ;
    ವಚನಕಾರರ ಸಾಲುಗಳಂತೆ ಸ್ಪಷ್ಟವಾಗಿ , ನೇರವಾಗಿ ಹೃದಯ ತಟ್ಟುವಂತ ಸಾಲುಗಳು. ಅಭಿನಂದನೆಗಳು.

    • ದಿವ್ಯ ಆಂಜನಪ್ಪ

      🙂 ಥ್ಯಾಂಕ್ಯೂ ಸರ್ 🙂

  8. Vijaya

    ಅಮಿತ ಗೌರವಾನ್ವಿತ ಶ್ರೀಮತಿ ದಿವ್ಯ ಅಂಜನ’,
    “ಉಸಿರು ನಲುಗಬಹುದೆ?” ಕಾವ್ಯ ವಿಧುಷಿಗೆ ನಮನ!
    ಶ್ರೀಮಂತ ಮನೋಭಾವನೆಗಳ ಪುಷ್ಪಮಾಲೆಯಂತೆ
    ಅನಂತ ಜೀವಂತ ಅನುಭವಗಳ ಹಾಡಿರುವ ಚರಿತೆ!
    ಕವನ ಕೈದೀವಿಗೆಯಂತೆ ರಸಭಾವಗಳ ಉದ್ಗಮಬುಗ್ಗೆ,
    ಭಾವಾತಿರೇಕವಿಪ್ಲವ ಉಕ್ಕಿಸಿದ ಉದ್ದೀಪ್ತ ಬಂಧುರಗೀತೆ!
    – ವಿಜಯಶೀಲ, ೦೧.೦೬.೧೫

    • ದಿವ್ಯ ಆಂಜನಪ್ಪ

      🙂 ಥ್ಯಾಂಕ್ಯೂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading