ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಮ್ಮೆ ಕದಡಿದ ಕೊಳವು..

Ninna nenapu album

ಒಮ್ಮೆ ಕದಡಿದ ಕೊಳವು

ಎಸ್. ಬಾಗೇಶ್ರೀ

ಒಮ್ಮೆ ಕದಡಿದ ಕೊಳವು,
ಮತ್ತೆ ತಿಳಿಯಾಗಿರಲು,
ತಳದೀ ಮಲಗಿಹ ಕಲ್ಲು ನಿನ್ನ ನೆನಪು:

ಅಡಿ ಅಡಿಯನು ಎಣಿಸಿ,
ಇಡು ಮನದ ಮೂಲೆಯಲಿ,
ಹುಚ್ಚು ಓಟದ ಬಯಕೆ ನಿನ್ನ ನೆನಪು:

ಬೇಸರವು ಕವಿದಿರಲು,
ಎಲ್ಲ ಕಹಿಯಾಗಿರಲು,
ಸಿಹಿಕನಸ ನೇವರಿಕೆ ನಿನ್ನ ನೆನಪು:

ಬಹಳ ಬಹಳ ಬಳಸಿ ಹಳಸಿದ,
ಪದಪುಂಜಗಳ ನಡುವೆ,
ಹೊಸತ ಹೊಳೆಸುವ ಪ್ರತಿಮೆ ನಿನ್ನ ನೆನಪು:

ಜಗವೆಲ್ಲ ಹೊಗಳಿರಲು,
ನಾನೇ ನಾನೆಸಿರಲು,
ಎದೆಯಾಳದ ಅಳುಕು ನಿನ್ನ ನೆನಪು:

ಎಲ್ಲ ವಾದದ ಕೊನೆಗೆ,
ಆವರಿಸೋ ಮೌನದ,
ತರ್ಕ ಮೀರಿದ ಭಾವ ನಿನ್ನ ನೆನಪು

‍ಲೇಖಕರು admin

4 October, 2015

1 Comment

  1. Jayaramchari

    ಈ ಹಾಡನ್ನು ತುಂಬಾ ಕೇಳಿದ್ದೆ ಆ ಆಲ್ಬಂನ ಅಷ್ಟು ಹಾಡುಗಳು ತೀರಾ ಕಾಡುವುವು.ಇವರ ವಿಳಾಸ ಫೋನ್ ನಂಬ್ರ ಸಿಕ್ರೆ ಒಸಿ ಹೇಳಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading