ಭವ್ಯ ಎಲ್ ಎಚ್
ಮೊನ್ನೆಯಷ್ಟೇ ನಡೆದ ದೆಹಲಿ ಅತ್ಯಾಚಾರ ಪ್ರಕರಣ ಇನ್ನು ಮನಸ್ಸಿನಲ್ಲಿ ಮಾಸಿಯೇ ಇಲ್ಲಾ ಆಗಲೇ ಅಂತಹದೇ ಮಣಿಪಾಲ್ನಲ್ಲಿ ನಡೆದಿರುವುದನ್ನು ಕೇಳಿ ಒಮ್ಮೆ ಬೆಚ್ಚಿಬಿಳುವಂತಾಗಿದೆ. ಹೆಣ್ಣು ತನ್ನ ಬಾಲ್ಯವಸ್ಥೆಯನ್ನು ಕಳೆದುಕೊಂಡು ಯೌವ್ವನವಸ್ಥೆಗೆ ಕಾಲಿಡುತ್ತಿದ್ದಂತೆ ತನ್ನ ದೈಹಿಕ ರಚನೆಯಲ್ಲಿ ಆಗುವ ಬದಲಾವಣೆಗಳಿಂದ ಮುಜುಗರಕ್ಕೆ ಒಳಪಡುತ್ತಾಳೆ. ಇದು ನನ್ನೊಬ್ಬಳ ಮುಜುಗರವಲ್ಲ ನನ್ನಂಥಹ ಅನೇಕ ಹೆಣ್ಣು ಮಕ್ಕಳ ಕತೆಯೂ ಹೌದು ರಸ್ತೆಯಲ್ಲಿ ನಡೆಯುವಾಗ ಭಯದಿಂದ ಬೆನ್ನು ಬಾಗಿಸಿ ನಡೆಯುತ್ತಿರುತ್ತಾರೆ. ಇದಕ್ಕೆಲ್ಲಾ ಕಾರಣ ಮನೆಯ ಒಳಗೂ ಹೊರಗೂ ಹೆಣ್ಣು, ಮಕ್ಕಳನ್ನು ಛೇಡಿಸುವ,ರೇಗಿಸುವ ಆಸೆಬುರುಕ ಕಣ್ಣುಗಳಿಂದ ನೋಡುವ ಹುಡುಗರಿಂದ ಹಿಡಿದು ಮುದುಕರವರೆಗು ಬೇಕೆಂದೆ ಮೈ ತಗುಲಿಸಿಕೊಂಡು ಓಡಾಡುವವ ಪುರುಷರಿಂದಾಗಿಯೇ.
ನಾಗರೀಕತೆ ಬೆಳೆಯುತ್ತಿದೆ ಇದು 21 ನೇ ಶತಮಾನ ಜಾಗತೀಕರಣವನ್ನು ಅಳವಡಿಕೊಂಡಿದ್ದೇವೆ. ಇಷ್ಟರಲ್ಲೇ ಎಪ್.ಡಿ.ಐ ಸಹ ನಮ್ಮ ದೇಶಕ್ಕೆ ಕಾಲಿಡುತ್ತಿದೆ. ನಾವು ಅಭಿವೃದ್ದಿಯ ಕಡೆಗೆ ಮುಖ ಮಾಡಿದೆಂತೆಲ್ಲಾ ಈ ಭಯ ,ಆತಂಕಗಳೆಲ್ಲಾವೂ ನಿರಾಂತಕವಾಗುತ್ತವೆ. ನಾವು ಸಹ ಸ್ವತಂತ್ರ್ಯವಾದ ಬದುಕನ್ನು ಸಾಧಿಸುತ್ತೇವೆ ಎಂದು ಕೊಂಡ ನಮಗೆ ತೀರ ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿರುವ ಹೆಣ್ಣು ಮಕ್ಕಳ ಅತ್ಯಾಚಾರ ಹಾಗೂ ಅವರನ್ನು ನಿರ್ದಾಕ್ಷಿಣ್ಯವಾಗಿ ಸಾಯಿಸುತ್ತಿರುವುದು, ಮೃಗಗಳಂತೆ ವರ್ತಿಸುವುದನ್ನು ಗಮನಿಸಿದರೆ ಅವರಂತೆ ಎಲ್ಲದರಲ್ಲೂ ಸಹಜೀವಿಯಾದ ಹೆಣ್ಣು ಮಕ್ಕಳ ಮೇಲೆ ಯಾಕಿಷ್ಟು ಕೊಪವೆನಿಸುತ್ತದೆ. ಹಾಗಾದರೆ ಎಲ್ಲಿಯ ಜಾಗತೀಕರಣ, ನಾಗರೀಕತೆ,ಎಲ್ಲಿಯ ಅಭಿವೃದ್ದಿ.
ಡಿಸೆಂಬರ್ 16 ರ ಭಾನುವಾರ ರಾಷ್ಟ್ರದ ರಾಜಾಧಾನಿಯಲ್ಲಿ ರಾತ್ರಿ 9 ಗಂಟೆಗೆ ಮನೆಗೆ ಹಿಂದಿರುಗಲೂ ಬಸ್ಸೂಂದನ್ನು ಏರಿದ 23 ವರ್ಷದ ಯುವತಿಯೊಬ್ಬಳ ಮೇಲೆ ಬಸ್ಸಿನಲ್ಲಿದ್ದ ಆರು ಮಂದಿ ಪುರುಷರು ಸಾಮೂಹಿಕ ಅತ್ಯಾಚಾರದ ನಡೆಸಿ ಅರೆನಗ್ನಾವಸ್ಥೆಯಲ್ಲಿಯೇ ಆಕೆಯನ್ನು ರಸ್ತಗೆ ತಳ್ಳಿದ್ದು ತೀರಾ ಅವಮಾನವೀಯ.
ಈ ಘಟನೆಯಿಂದ ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆ ಸುಭದ್ರವಾಗಿದೆ? ಅಪರಾಧಿಗಳು ಅದನ್ನು ಎಷ್ಟು ಹಗುರವಾಗಿ ಪರಿಗಣಿಸುತ್ತಿದ್ದಾರೆ? ನಮ್ಮ ದೇಶದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತವಾಗಿ ಬದುಕುತ್ತಿದ್ದಾರೆ ? ಎನ್ನುವ ಪ್ರಶ್ನೆ ಏಳುತ್ತದೆ.
2012 ರಲ್ಲಿ ದೆಹಲಿ ಒಂದರಲ್ಲಿಯೇ ದಾಖಲಾದ ಅತ್ಯಾಚಾರದ ಸಂಖ್ಯೆ 637 ಇಷ್ಟು ಪ್ರಕರಣಗಳಲ್ಲಿ ಎಷ್ಟು ಜನರಿಗೆ ಶಿಕ್ಷೆಯಾಗಿದೆ ಎಂಬುದನ್ನು ತಿಳಿಸುವರು ಯಾರು. ಇಂತಹ ಅಪರಾಧಿಗಳಿಗೆ ಸರಿಯಾದ ಶಿಕ್ಷೆಯಾಗಬೇಕು ಎಂಬ ಕೂಗು ಇಡೀ ದೇಶದಲ್ಲಿ ಕೇಳತ್ತಿರುವಾಗಲೇ ಅದೇ ದೆಹಲಿಯಲ್ಲಿ ಬಾಲ ವಿಹಾರವೊಂದರಲ್ಲಿ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆದ ಪ್ರಕರಣ ಮತ್ತು 40 ವರ್ಷದ ಮಹಿಳೆಯ ಮೇಲೆ ಮೂರು ಜನ ಪುರುಷರು ಸಾಮೂಹಿಕಲ ಅತ್ಯಾಚಾರವೆಸಗಿದ್ದು ಬಯಲಾಯಿತು.
ದೆಹಲಿಯಲ್ಲಿ ಪ್ರತಿಭಟನೆಗಳು ಗಟ್ಟಿಯಾಗುತ್ತಾ ಹೋದಂತೆ ದೇಶದ ಎಲ್ಲ ಕಡೆಗಳಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಂದ ಹೊಸ _ಹೊಸ ಅಂಕಿ-ಅಂಶಗಳು ಹೊರ ಬೀಳುತ್ತಲೇ ಜಗತ್ತಿನಲ್ಲಿ ಅಮೇರಿಕಾ ಮತ್ತು ದಕ್ಷಿಣ ಅಫ್ರಿಕಾವನ್ನು ಬಿಟ್ಟರೆ ಭಾರತ ಅತ್ಯಾಚಾರ ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿ ಇದೆ ಹೇಳಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇದೆ. ಅಂತಾರಾಷ್ಟ್ರಿಯ ನಿಯತಾಕಾಲಿಕೆಯೊಂದರಲ್ಲಿ ಸ್ತ್ರೀ ವಾದಿ ಲೇಖಕಿಯೊಬ್ಬರು ‘ಒಬ್ಬ ಮಹಿಳೆ ಮಗುವನ್ನು ಹೆರಬೇಕೆಂದು ಬಯಸಿದರೆ ಯಾವ ಗಂಡಸಿನ ದೇಹ ಸಂಪರ್ಕ ಇಲ್ಲದೆಯೂ ಬದುಕಿರುವ ಅಥವಾ ಸತ್ತವನೊಬ್ಬನ ವೀರ್ಯ ಪಡೆದು ಜೀವ ಮರುಸೃಷ್ಠಿಸಬಲ್ಲಳು. ವಿಶ್ವದ ಎಲ್ಲಾ ಗಂಡಸರು ಇವತ್ತೆ ಸತ್ತರು ಕೊಳ್ಳೆ ಹೊಗೊದು ಏನೂ ಇಲ್ಲಾ. ಶಿಥಿಲಗೊಂಡ ಒಂದು ವೀರ್ಯದಿಂದ ಮನುಷ್ಯ ಪ್ರಬೇಧವನ್ನು ಹೆಣ್ಣು ಮುಂದುವರೆಸುತ್ತಾಳೆ.ಆದರೆ ಎಲ್ಲಾ ಹೆಣ್ಣು ಸತ್ತು ಹೋದರಾದರೆ ಅದು ಮನುಷ್ಯ ಪ್ರಬೇಧದ ಅಂತ್ಯ ಎಂದು ನಿಜ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಸಿಮೊನ್ ದಿ ಬೋವಾ ”ಒಬ್ಬ ಗಂಡಸನ್ನು ಮನುಷ್ಯ ಎಂದು ಕರೆಯಲಾಗುತ್ತದೆ ಆದರೆ ಹೆಣ್ಣನ್ನು ಹೆಣ್ಣು ಅಥವಾ ಸ್ತ್ರೀ ಎಂದು ಕರೆಯಾಲಾಗುತ್ತದೆ. ಯಾವಾಗೆಲ್ಲಾ ಇಬ್ಬ ಹೆಣ್ಣು ಮನುಷ್ಯಳಾಗಿ
ವರ್ತಿಸುತ್ತಾಳೋ ಆಗ ಅವಳು ಗಂಡಸನ್ನು ಅನುಕರಿಸುತ್ತಾಳೆ.” ಎಂದು ವ್ಯಾಖ್ಯಾನಿಸಲಾಗಿತ್ತದೆ.ಎನ್ನುತ್ತಾರೆ. ಇಂತಹ ಪ್ರಚಲಿತ ವ್ಯಾಖ್ಯಾನದ ಪರಿಣಾಮವಾಗಿಯೇ ಸ್ತ್ರೀ ವಿಮೋಚನೆಯನ್ನು ತನಗೆ ಸವಾಲು ಎಂದು ಪರಿಗಣಿಸುತ್ತಿರುವ ಪುರುಷನಿಗೆ ಮಹಿಳೆಯನ್ನು ಸಹಜೀವಿಯೆಂದು ಪರಿಗಣಿಸಲು ಸಾದ್ಯವಾಗಿತ್ತಿಲ್ಲವೆನಿಸುತ್ತಿದೆ.ಅದಕ್ಕೆ ಈ ಎಲ್ಲಾ ಪೌರುಷದ ಗುರುತುಗಳನ್ನು ಉಳಿಸುತ್ತಿರುವುದು.
ಪ್ರಮುಖವಾಗಿ ಅತ್ಯಾಚಾರವನ್ನು ಕಾನೂನು ಮತ್ತು ಸಮಾಜ ನೋಡುವ ರೀತಿ ಬದಲಾಗಬೇಕು. ಅತ್ಯಾಚಾರಕ್ಕೆ ಒಳಗಾದ ಮಹಿಳೆ ನಿರ್ಭಯವಾಗಿ ದೂರನ್ನು ನೀಡುವಂತಾಗಬೇಕು. ಆ ದೂರನ್ನು ಸ್ವೀಕರಿಸಿ ತಕ್ಷಣವೇ ತನಿಖೆಯನ್ನು ಆರಂಭಿಸಬೇಕು. ಸಮಾಜದಲ್ಲಿ ಅವಳು ತನ್ನ ವ್ಯಕ್ತಿತ್ವವನ್ನು ಮತ್ತೆ ಕಟ್ಟಿಕೊಳ್ಳಲು ಸೂಕ್ತ ವಾತಾವರಣ ನಿರ್ಮಿಸಿಕೊಡಬೇಕು.
ವಿದ್ಯಾವಂತರು ವಿವೇಕ ಇಲ್ಲದೆ ವರ್ತಿಸುವುದು, ಸರಿಯಾದ ಲೈಂಗಿಕ ಶಿಕ್ಷಣ ಇಲ್ಲದಿರುವುದು, ಈಗ ಅಂತರ್ಜಾಲದಲ್ಲಿ ಬೆರಳ ತುದಿಯಲ್ಲೇ ಸಿಗುವ ಅಸಹ್ಯಕರವಾದ ದೃಶ್ಯಾವಳಿಗಳು ಮತ್ತು ಅಸಭ್ಯ, ವಿಕೃತ ವಿವರಗಳು ಯುವಜನಾಂಗವನ್ನು ಹಾದಿ ತಪ್ಪಿಸುತ್ತಿವೆ ಎನ್ನಬಹುದು. ಈ ಸಾಮೂಹಿಕ ಅತ್ಯಾಚಾರಗಳು ಯಾವುದೇ ವರ್ಗ, ಜಾತಿ, ವಯಸ್ಸಿಗೆ ಸೀಮಿತವಾಗಿಲ್ಲ. ಅವೆಲ್ಲವನ್ನು ಮೀರಿ ನಿಂತಿವೆ. ಅಷ್ಟರ ಮಟ್ಟಿಗೆ ಹೇಯವಾದ ಕೃತ್ಯಗಳು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿದೆ. ಹಾಗಾಗಿ ಪ್ರತಿ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯ ಪಾಠ ಹೇಳಿಕೊಡಬೇಕು ಎನ್ನು ವಾದ ಒಪ್ಪುವುದಾದರೂ ಹೆಣ್ಣನ್ನು ಗೌರವಿಸಬೇಕು, ಸಮಾನಾಗಿ ಕಾಣಬೇಕು ಎನ್ನುವ ಮಾನಸಿಕ ಬದಲಾವಣೆಯ ಪಾಠವನ್ನು ಗಂಡುಮಕ್ಕಳು ಕೂಡಾ ಕಲಿಯಬೇಕಿದೆ. ಹೆಣ್ಣಿನ ರಕ್ಷಣೆ ಅರ್ಧ ಅವಳ ಹೊರೆಯಾದರೆ ಉಳಿದ ಅರ್ಧ ಕುಟುಂಬ ಮತ್ತು ಸಮಾಜದ್ದು. ಜತೆಗೆ ನಮ್ಮ ನೆಲದ ಕಾನೂನುಗಳನ್ನು ಇನ್ನಷ್ಟು ಬಲಗೊಳಿಸುವ ಕಾರ್ಯ ಕೂಡಾ ಜರೂರಾಗಿ ಆಗಬೇಕಿದೆ.
ಹೆಣ್ಣಿನ ಪಾವಿತೆಯದ ಬಗ್ಗೆ, ಚಾರಿತ್ರ್ಯದ ಬಗ್ಗೆ, ಪರಿಶುದ್ಧತೆ, ಉಡುಪು, ವೇಷಭೂಷಣಗಳ ಬಗ್ಗೆ ಯಾವಾಗಲೂ ಕಟ್ಟುಪಾಡುಗಳನ್ನು ವಿಧಿಸಿ ನಿಬಂಧನೆಗಳನ್ನು ಹೇರಿ ವಸ್ತ್ರಸಂಹಿತೆಯನ್ನು ರೂಪಿಸಿ ಲಕ್ಷ್ಮಣ ರೇಖೆಗಳನ್ನು ರಚಿಸಿ ಆಕೆಯನ್ನು ಅಂಕೆಯಲ್ಲಿರಿಸಿಕೊಳ್ಳುವ ಈ ಪ್ರಯತ್ನಗಳು ಪುರುಷ ಪ್ರಧಾನ ವ್ಯವಸ್ಥೆಯ ವಿಕೃತ ಮನಸ್ಥಿತಿಯ ಕುರುಹಾಗಿದೆ. ಇದರಲ್ಲಿರುವ ಬೂಟಾಟಿಕೆಯನ್ನು ನಾವು ಗಮನಿಸಬೇಕು. ಹೆಣ್ಣಿನ ಮೇಲೆ ನಿರ್ಬಂಧ ಹೇರುವುದು ಪುರುಷ ಸಮಾಜದ ಒಂದು ಮುಖವಾದರೆ ಹೆಣ್ಣನ್ನು ನಗ್ನವಾಗಿಸುವ ಅಶ್ಲೀಲ ಚಿತ್ರಗಳನ್ನು ಅಂತರ್ಜಾಲ. ಚಲನಚಿತ್ರ, ಜಾಹಿರಾತು, ನೀಲಿಚಿತ್ರಗಳು ಮುತಾಂದ ಮಾಧ್ಯಮಗಳಲ್ಲಿ ಆಕೆಯನ್ನು ಲೈಂಗಿಕ ಉಪಭೋಗದ ವಸ್ತುವಾಗಿ ಬಿಂಬಿಸುವುದು ಪುರುಷ ದೃಷ್ಟಿ ಹಾಗೂ ಇನ್ನೊಂದು ಮುಖವಾಗಿದೆ.
ಮಹಿಳೆಯರೆಂದರೆ ಲೈಂಗಿಕ ವಸ್ತುಗಳೆಂದು ತಿಳಿಯುವ, ಬಲತ್ಕಾರವಾಗಿಯಾದರೂ ಲೈಂಗಿಕ ಸುಖ ಪಡೆಯಬೇಕೆನ್ನುವ ವಿಕೃತ ಪುರುಷ ಮನಸ್ಸುಗಳು ಬದಲಾಗಬೇಕು. ಅತ್ಯಾಚಾರವಾದ ಮೇಲೆ ಅವರಿಗೆ ಯಾವ ರೀತಿಯ ಶಿಕ್ಷೆ ಕೊಡಬೇಕು ಯಾವ ಯಾವ ಕಾನೂನುಗಳಿವೆ ಅಥವಾ ಇರಬೇಕು ಎಂಬುವುದನ್ನೂ ಯೋಚಿಸುವ ಜತೆಗೆ ಪ್ರತಿಯೊಬ್ಬರೂ ತಮಗೆ ತಾವೇ ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕು. ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕುವ ಮೂಲಕ ನೈತಿಕತೆ ಬೆಳೆಸಿಕೊಳ್ಳಬೇಕು. ಒಬ್ಬರನ್ನು ಇನ್ನೂಬ್ಬರು ಪ್ರೀತಿ ವಿಶ್ವಾಸದಿಂ ನಡೆದುಕೊಳ್ಳಬೇಕು. ಇಲ್ಲದೆ ಹೋದರೆ ಮುಂದೊಂದು ದಿನ ಯಾರ ಮೇಲೂ ಯಾರಿಗೂ ನಂಬಿಕೆ ಉಳಿಯುವುದಿಲ್ಲ. ಎಲ್ಲರ ಮನದಲ್ಲಿಯೂ ಅನುಮಾನದ ರುದ್ರ ನರ್ತನ ಶುರುವಾಗುತ್ತದೆ.
ಒಬ್ಬ ಹೆಣ್ಣು ಮಗಳು ಮುಕ್ತವಾಗಿ ಬಾಯಿಬಿಟ್ಟರೆ ಅವಳ ಸುತ್ತಲಿನ ಹತ್ತಾರ ಗಂಡಸರ, ತಂದೆ, ಸೋದರ, ಸ್ನೇಹಿತ, ಗಂಡ, ಮಾವ, ದೊಡ್ಡಪ್ಪ, ಚಿಕ್ಕಪ್ಪ ಹೀಗೆ ಅನೇಕರ ಮುಖವಾಡಗಳು ಕಳಚಿ ಬೀಳುತ್ತವೆ. ಎಲ್ಲಾ ಸಿದ್ದಾಂತಗಳಂತೆ ಮಹಿಳಾವಾದ, ಮಹಿಳಾ ವಿಮೋಚನೆ ಎಂಬುದು ಒಬ್ಬ ವ್ಯಕ್ತಿಯಿಂದ ಉದ್ಭವಿಸಿದ ಸಿದ್ದಾಂತಗಳಲ್ಲ, ಸಾವಿರಾರು ಹೆಣ್ಣು ಮಕ್ಕಳ ಸ್ವಂತ ಅನುಭವದ ಸಂಕಲನಗಳ ಸರಮಾಲೆ. ಇದೇ ಹಾದಿಯಲ್ಲಿ ಹೆಣ್ಣು ಮಕ್ಕಳು ಹೆಚ್ಚೆಚ್ಚು ಹೆಜ್ಜೆ ಇಟ್ಟರೆ ಸ್ತ್ರೀ ವಿಮೋಚನೆಯನ್ನು ತನಗೆ ಸವಾಲೆಂದು ಪರಿಗಣಿಸಿ ಇಡೀ ಪುರುಷ ಸಮಾಜದ ದಬ್ಬಾಳಿಕೆಯ ಅನ್ಯಾಯದ ವಿರುದ್ಧ ಇಡೀ ಮಹಿಳೆಯರು ಯುದ್ಧ ಸಾರಿ ನಿಂತರೆ ಹೇಗಿರುತ್ತದೆ… ಒಮ್ಮೆ ಯೋಚಿಸಿ ನೋಡಿ!





Oppide
ಸೂಪರ್, ಒಳ್ಳೆಯ ಆಲೋಚನೆ, ಒಳ್ಳೆಯ ಲೇಖನ ಭವ್ಯ. ನಿಮ್ಮ ಓದು ಮತ್ತು ಆಲೋಚನಾ ಲಹರಿ ಹೀಗೇ ಸಾಗಲಿ. ಈ ಲೇಖನದ ವಿಸ್ತಾರ ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇತ್ತು. ಇರಲಿ. ಮುಂದೆ ಅದನ್ನು ಸರಿಪಡಿಸಿಕೊಂಡು ಮತ್ತಷ್ಟು ಇಂಥ ಹೊಸ ಬಗೆಯ ಲೇಖನ ನಿಮ್ಮಿಂದ ಹೊರ ಬರಲಿ…
thank you kanditha baruthe
ಒಳ್ಳೆಯ ಲೇಖನೆ ಬರೇದ್ದಿರಾ ಭವ್ಯ ಅಕ್ಕಾ ಇದೆ ರೀತಿ ಮುಂದುವರಿಸಿ good luck…