ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒತ್ತಿ ಹಿಡಿದ ತುಟಿಗಳು ಕಣ್ಣ ಹನಿಗಳ ತುಂಬಿಕೊಳ್ಳುತ್ತಿವೆ ಅನುಕ್ಷಣ…

ಗಜಲ್

–  ಪ್ರಕಾಶ ಬಿ ಜಾಲಹಳ್ಳಿ

ನನ್ನ ಗೋರಿಯ ಮೇಲೂ ನಿನ್ನೆಸರೆ ನೀ ಹೋದ ಮರುದಿನ
ಅಪ್ಪುವ ಗಾಳಿಯೊಳಗೂ ನಿನ್ನುಸಿರೆ ನೀ ಹೋದ ಮರುದಿನ
 
ಎಲ್ಲ ನೋವುಗಳಿಗೆ ಸಾವೊಂದೆ ಮುಲಾಮಲ್ಲ ಬದುಕು ದೊಡ್ಡದಿದೆ
ಮುಗ್ದ ನಗುವು ಮುಲಾಮಗಬಹುದು ಲೋಕದೆದರು ನೀ ಹೋದ ಮರುದಿನ
 
ಬಳೆ ಚೂರಾಗಬಹುದು ಕಳೆದ ನೆನಪು ಎಂದೂ ಚೂರಾಗುವುದಿಲ್ಲ
ಇಳೆಯೊಳಗೆ ಗಾಯಗಳವೆಷ್ಟೊ ನಗುವ ನೆನೆದೆ ಕಾದಿವೆ ನೀ ಹೋದ ಮರುದಿನ
 
ಒತ್ತಿ ಹಿಡಿದ ತುಟಿಗಳು ಕಣ್ಣ ಹನಿಗಳ ತುಂಬಿಕೊಳ್ಳುತ್ತಿವೆ ಅನುಕ್ಷಣ
ಮಾತಾಗು ಜೀವದ ಭಾಷೆಯೆದರು ನಾಳೆಗಾಗಿ ಬದುಕಬೇಕು ನೀ ಹೋದ ಮರುದಿನ
 
`ಪ್ರಕಾಶ’ನ ಮುಂದೆ ಕತ್ತಲೂ ಮಂಡಿಯೂರಿ ಕೂತಿದೆ ಬೊಗಸೆಯೊಡ್ಡಿ
ಹೇಳು ನಶೆ ಬೇಕು ನಿಜ ಬಯಲೊಳಗಿನ ವಿಷ ಅರಿತು ಸಾಗಬೇಕು ನೀ ಹೋದ ಮರುದಿನ
 

‍ಲೇಖಕರು G

11 November, 2014

3 Comments

  1. mmshaik

    gazal chennaagide..prakash..

  2. Nagaraj kamble

    Channagide…

  3. AMU APPAJI

    ಚೆನ್ನಾಗಿದೆ ಗಜಲ್‌

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading