ಭ್ರಮೆ
– ಪೃಥ್ವಿ ಶೆಟ್ಟಿ
ನಾನೊಂದು ಭ್ರಮೆ
ಬೆನ್ನತ್ತ ಬೇಡ
ಕಳೆದುಕೊಂಡದ್ದು ಒಡಲಾಳ
ಒಡೆದ ಮುತ್ತು ನಮ್ಮಿಬ್ಬರ ಕೊಂಡಿ …..
ನಾನೊಂದು ಮರೀಚಿಕೆ
ಹುಡುಕಾಡಬೇಡ
ಭಾವನೆಗಳ ಸಮ್ಮಿಲನಕ್ಕೊಂದು
ಸ್ಥಬ್ದ ಉದಾಹರಣೆ ……
ಸ0ವತ್ಸರಗಳು ಕಳೆದಿವೆ
ಮನಸು ಮಾಗಿದೆ
ಹ್ರದಯ ಬಾಡಿದೆ
ಸನಿಹವು ಅಪಸ್ವರದ ಭಾವವಷ್ಟೆ ………
ನಾನೊಂದು ತೀರ
ನೀನೊಂದು ತೀರ
ದೋಣಿ ಮುಳುಗುವುದೊಂದೇ
ಭೇಟಿಯ ತವಕದ ಫಲ …….
ನೀನಿರು ನಿನ್ನ ಗೂಡೊಳಗೆ
ನಾನಿರುವೆ ನನ್ನೀ ಪಂಜರದಲಿ
ನಿನ್ನ ನೆರಳ ಸೊಂಕೂ
ಕಹಿ ನೆನಪು ತರಬಹುದು ಎನಗೆ …..






uttama kavana……