ಮಕರಂದ
ಹೇಮಾ ಕಳ್ಳಂಬೆಳ್ಳ
ಕೊಲ್ಲುವುದರ ಕುರಿತು
ಕವಿತೆ ಬರೆಯಲು ಹೇಳಿದೆ,
ಅವನು ಅರ್ಧ ಕವಿತೆಯನ್ನಷ್ಟೇ ಬರೆದ.
ಒಡೆದ ಕನ್ನಡಿಯ ಬಗ್ಗೆ
ಕವಿತೆ ಬರೆಯಲು ಹೇಳಿದಾಗ,
ಪೂರ್ತಿ ಕವಿತೆಯನ್ನು ಬರೆದವನು
ಹಾಳೆಯನ್ನು ತುಂಡು ತುಂಡಾಗಿ ಹರಿದ.
ಹಸಿವಿನ ಕುರಿತು ಕವಿತೆ ಬರೆಯಲು
ಹೇಳಿದಾಗ
ಏನನ್ನೂ ಬರೆಯಲಿಲ್ಲ!
ಹೂವು-ಜೇನಿನ ಕುರಿತ
ಕವಿತೆ ಬರೆಯಲು ಹೇಳಿದಾಗ,
ಬಳಿ ಬಂದವನು ತುಟಿಗೆ ತುಟಿಯಿಟ್ಟ,
ಅಷ್ಟೇ….
ಮನಸೀಗ ಮಕರಂದ
ಹೃದಯ ಜೇನುಗೂಡು







ಚೆನ್ನಾಗಿದೆ.