ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದೇ ತಕ್ಕಡಿಯಲ್ಲಿ ಇಟ್ಟು ತೂಗಿರುವುದು ಸರಿಯಲ್ಲ..

ಹಿರಿಯ ವಿದ್ವಾಂಸರಾದ ಪಂಡಿತಾರಾಧ್ಯ ಅವರು ಇತ್ತೀಚಿಗೆ ಯಕ್ಷಗಾನದ ಮಧ್ಯೆ ನಡೆದ ಅನುಚಿತ ಪ್ರಸಂಗದ ಬಗ್ಗೆ ಬರೆದಿದ್ದರು. ಆ ಮೂಲಕ ಧರ್ಮ ನಿರಪೇಕ್ಷ ರಾಷ್ಟ್ರದಲ್ಲಿ ಮಾಧ್ಯಮಗಳು ಬಿತ್ತುವ ಧರ್ಮ ಕಾರ್ಯಕ್ರಮಗಳು ಹೇಗೆ ಬದಲಾಗಬೇಕು ಎನ್ನುವ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದ್ದರು. ಅದು ಇಲ್ಲಿದೆ

ಅದಕ್ಕೆ ವ್ಯಕ್ತವಾದ ಕಾಮೆಂಟ್ ಗಳು ಇಲ್ಲಿವೆ 

ನಿಮ್ಮ ಸಲಹೆ ಏನು 

ಪ್ರತಿಕ್ರಿಯೆಗೆ ಸ್ವಾಗತ 

noise

C J Rajeeva Cheeranahally

ಸರ್, ವಿವಿಧ ಮತಧರ್ಮಗಳನ್ನು ಮೆರೆಸುವ ಭಕ್ತಿ ಗೀತೆಗಳು ಹಾಗೂ ಮೌಢ್ಯವೇ ಆಗಿರುವ ಜ್ಯೋತಿಷ್ಯದಂಥ ಕಾರ್ಯಕ್ರಮಗಳನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗಿರುವುದು ಸರಿಯಲ್ಲ.

ಯಾವತ್ತೂ ಯಾವುದೇ ದೇವರನ್ನು ಪೂಜಿಸದ, ಚರ್ಚ್ ಮಸೀದಿಗಳ ಕಡೆ ಮುಖ ಮಾಡದ ನನ್ನ ಗೆಳೆಯನೊಬ್ಬ- ಬೆಳಗ್ಗೆ ಆಕಾಶವಾಣಿಯಲ್ಲಿ ಬರುವ ಸುಬ್ಬಲಕ್ಷ್ಮೀಯ ಗಾಯನವನ್ನೂ, ದೇವ ಬಂದ ನಮ್ಮ ಏಸು ಬಂದ ಎಂಬ ಏಸುವಿನ ಭಜನೆಯನ್ನೂ – ಸಮಾನವಾಗಿ ಇಷ್ಟಪಡುತ್ತಾನೆ. ಆಸ್ವಾದಿಸುತ್ತಾನೆ. ಅಂತೆಯೇ ಆತ- ನೂರು ದೇವರನ್ನು ನೂಕಾಚೆ ದೂರ ಎಂಬ ಕುವೆಂಪು ಗೀತೆಗೂ ಮಾರು ಹೋಗುತ್ತಾನೆ.

ಸಂಗೀತ,ಗಾಯನ- ಈ ಎಲ್ಲವೂ ಮನಸ್ಸಿಗೆ ಅಹ್ಲಾದ ಉಂಟು ಮಾಡುವ ಲಲಿತ ಕಲೆಗಳಷ್ಟೆ. ಅವುಗಳಿಗೆ ತರ್ಕವನ್ನು, ವೈಜ್ಞಾನಿಕತೆಯನ್ನು, ಪ್ರಗತಿಪರ ವಿಚಾರಧಾರೆಯನ್ನು ಆರೋಪಿಸಿ- ಮೌಢ್ಯದ ಪಟ್ಟಿಯಲ್ಲಿ ಇಡಬಾರದೇನೋ.

ಹಾಗೆ ಮಾಡಿದರೆ, ಕವಿಗಳು ಬರೆದ ಕಾವ್ಯವೆಲ್ಲವೂ ಸುಳ್ಳಾಗಿಬಿಡುತ್ತದೆ. ಅಳುವ ಕಂದನಿಗೆ ತುತ್ತು ತಿನ್ನಿಸುವಾಗ, ತಾಯಿಯೊಬ್ಬಳು ಹೇಳುವ- ಅಲ್ನೋಡ ಚಿನ್ನ, ಆಕಾಶದಲ್ಲಿ ಚಂದ ಮಾಮ ಇದ್ದಾನೆ… ಎನ್ನುವ ಮಾತು ಕೂಡ ಮೌಢ್ಯವೇ ಆಗಿ ಬಿಡುತ್ತದೆ. ಏಕೆಂದರೆ, ವಿಜ್ಞಾನದ ಪ್ರಕಾರ ಹುಟ್ಟಿದ ಮಗು ಒಂದು ಜೀವ, ಬೆಳದಿಂಗಳ ಚಂದ್ರ ಒಂದು ನೈಸರ್ಗಿಕ ಉಪಗ್ರಹವಷ್ಟೇ !

ಪಂಡಿತಾರಾಧ್ಯ ಮೈಸೂರು
ಮೈಸೂರು ಸಂಗೀತ ಬೇರೆ. ಸಂಗೀತ ಮಾಧ್ಯಮದಲ್ಲಿ ಹರಿಸುವ ವಿಚಾರ ಬೇರೆ. ಸಂಗೀತ ಸೊಗಸಾಗಿದ್ದು ಅದರ ಜೊತೆ ಇರುವ ಚಿಂತನೆ ಮನುಷ್ಯ ವಿರೋಧಿ ಜೀವ ವಿರೋಧಿಯಾಗಿದ್ದರೆ ಏನು ಪ್ರಯೋಜನ?

C J Rajeeva Cheeranahally

ಅಲ್ಲಾ ಎಲ್ಲರಿಗೂ ಒಳಿತನ್ನು ಉಂಟು ಮಾಡಲಿ, ಆ ಏಸು ನೆಮ್ಮದಿಯನ್ನು ಉಂಟು ಮಾಡಲಿ, ಈಶ್ವರ ಲೋಕವನ್ನು ಕಾಯಲಿ.. ಎಂಬಂರ್ಥದ ಭಕ್ತಿಗೀತೆಗಳಲ್ಲಿ ಜೀವ ವಿರೋಧಿ ಚಿಂತನೆ ಇರುವುದನ್ನು ನಾನಂತೂ ಕಂಡಿಲ್ಲ. ಎಂ ಎಸ್ ಸುಬ್ಬುಲಕ್ಷ್ಮೀ ಸೇರಿದಂತೆ ಯಾವುದೇ ಗಾಯಕರು ಹಾಡಿರುವ ಭಕ್ತಿಗೀತೆಗಲ್ಲಿ ಅಂಥದ್ದೇನಾದರೂ ಇದ್ದರೆ ತಿಳಿಸಿ, ಅದನ್ನು ವಿರೋಧಿಸೋಣ.

ಸಾವಿತ್ರಿ ವೆಂ ಹಟ್ಟಿ

1. “ಮಸೀದಿಯ ಗೋಡೆಗಳ ನಡುವೆ ಖಾಸಗಿಯಾಗಿ ಪ್ರಾರ್ಥನೆ ನಡೆಯುವಂತೆ ಬಾಂಗಿಗೂ ಖಾಸಗಿ ವಿಧಾನಗಳನ್ನು ಅನುಸರಿಸಬೇಕು”- ಸರಿಯಾದ ಮಾತು

೨. “ಮತಧರ್ಮನಿರಪೇಕ್ಷ ಸಂವಿಧಾನದ ಹೆಸರಿನಲ್ಲಿ ಆಧಿಕಾರ ಸ್ವೀಕರಿಸಿರುವ ಸರಕಾರದ ಮಾಧ್ಯಮವಾದ ಆಕಾಶವಾಣಿ ಪ್ರತಿ ಶನಿವಾರ ರಾಷ್ಟ್ರೀಯ ಮಹತ್ವದ್ದೆನ್ನುವಂತೆ ಸುಬ್ಬಲಕ್ಷ್ಮಿಯವರು ಹಾಡಿರುವ ಮತಧರ್ಮದ ದೇವತೆಯೊಂದರ ಸುಪ್ರಭಾತವನ್ನು ಪ್ರಸಾರಮಾಡುವುದು ನಿಲ್ಲಬೇಕು”- ಈ ಮಾತು ಸಮ್ಮತವೆನ್ನಿಸುತ್ತಿಲ್ಲ. ಸುಪ್ರಭಾತವನ್ನು ಕೇಳಿ ಮನಸ್ಸಿಗೆ ಚೈತನ್ಯ ಪಡೆದುಕೊಳ್ಳುವವರ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕಿಗೆ ಕಲ್ಲೆಸೆದಂತೆ. ಬಾನುಲಿ ಪ್ರಸಾರವನ್ನು ಕೇಳುವವರು ಸೌಂಡ್ ಸಣ್ಣಗಿರಿಸಿ ಕೇಳಿಕೊಳ್ಳಬೇಕಾದುದು ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯದು.

೩.”ಬಾನುಲಿ, ದೃಶ್ಯ ಮಾಧ್ಯಮಗಳಲ್ಲಿ ಯಾವುದೇ ಮತಧರ್ಮವನ್ನು ಮೆರೆಸುವ, ಭಕ್ತಿ ಗೀತೆಗಳು, ಜ್ಯೋತಿಷ್ಯ ಮೊದಲಾದ ಮೌಢ್ಯವನ್ನು ಬಿತ್ತರಿಸುವ ಕಾರ್ಯಕ್ರಮಗಳನ್ನು ನಿರ್ಬಂಧಿಸಬೇಕು’”- ಯಾವುದೇ ಧರ್ಮ ಮತ್ತು ಮತದ ಹೆಸರಿನಲ್ಲಿ ಮೌಢ್ಯ ಬಿತ್ತುವಂತಹ ಕಾರ್ಯಕ್ರಮಗಳನ್ನು ನಿರ್ಭಂದಿಸಬೇಕು. ಆದರೆ ಭಕ್ತಿಗೀತೆಗಳನ್ನು ಬಿತ್ತರಿಸಬಾರದು ಅನ್ನುವುದು ಯಾವ ನ್ಯಾಯ?

ಭಾಷೆ ಮತ್ತು ಸಂಸ್ಕೃತಿ- ಆಚರಣೆಗಳಿಗೆ ಅನುಸಾರವಾಗಿ ರಚಿತವಾಗಿರುವ ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲೂ ಪ್ರತಿಯೊಬ್ಬರಿಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕು ಇದೆ. ಯಾವುದೇ ಮತ-ಪಂಗಡದವರು ತಮ್ಮ ಆಚರಣೆಗಳನ್ನು ನಡೆಸುವಾಗ ಇತರರಿಗೆ ತೊಂದರೆಯಾಗದ ಹಾಗೆ ವ್ಯವಸ್ಥೆ ಮಾಡಿಕೊಳ್ಳುವುದು ಸಾತ್ವಿಕವೆನ್ನಿಸುತ್ತದೆ.

‍ಲೇಖಕರು admin

15 April, 2016

2 Comments

  1. Sangeeta Kalmane

    ಭಕ್ತಿ ಗೀತೆ ಯೆ ಆಗಲಿ, ಭಾವಗೀತೆಯೆ ಆಗಲಿ ಅದು ಯಾವ ಧರ್ಮದ ಗೀತೆಯೆ ಆಗಿರಲಿ ಆ ಬರೆದಿರುವ ಕೈ ಯೋಚಿಸಿರೋದಿಲ್ಲ. ಮನಸ್ಸಿನ ಆಳದಿಂದ ಮೂಡಿಬಂದ ಬರಹವದು. ಹಾಡುವ ಕಂಠ ಸುಶ್ರಾವ್ಯವಾಗಿ ಆಯಾ ಮಾಸಕ್ಕೆ ತಕ್ಕಂತೆ ಹಾಡಿರುವ (ಉದಾ: ಈಗ ಚೈತ್ರ ಮಾಸ ವಸಂತರಾಗ, ಬೆಳಗಿನ ಭೈರವಿ ರಾಗ) ರಾಗದ ಹಾಡನ್ನು ಕೇಳುವುದರಿಂದ ಎಂಥ ಕಟುಕನಾದರೂ ತಲೆ ದೂಗಲೇ ಬೇಕು. ಅಷ್ಟೊಂದು ಶಕ್ತಿ ಸಾಹಿತ್ಯಕ್ಕಿದೆ, ಸಂಗೀತಕ್ಕಿದೆ. ಇಲ್ಲಿ ಜಾತಿ ಧರ್ಮ ಅವನು/ಳು ಬರೆದಿದ್ದು ಇವನು/ಳು ಬರೆದಿದ್ದು ಅನ್ನುವ ತಾರ ತಮ್ಯ ಮಾಡದೆ ಕೇಳುವ ಮನಸ್ಸು ನಿಮ೯ಲವಾಗಿರಬೇಕು ಅಷ್ಟೆ. ಆದುದರಿಂದ ಮನಸ್ಸಿಗೆ ಮುದ ನೀಡುವ ಸಂತೋಷ ನೀಡುವ ಆಗಾಗ ನೆನಪಿಸಿಕೊಂಡು ಪರೋಕ್ಷವಾಗಿ ನಮ್ಮನ್ನೂ ಹಾಡುಗಾರನನ್ನಾಗಿ ಮಾಡುವ ಸಂಗೀತಕ್ಕೆ, ಬರಹಗಾರಿಗೆ, ಅದಕ್ಕೆ ತಕ್ಕ ಹಾಗೆ ನುಡಿಸುವ ಹಿನ್ನೆಲೆಯ ವಾದ್ಯಕಲಾವಿದರಿಗೆ, ರಾಗ ಸಂಯೋಜಕರಿಗೆ ಒಂದು ಕೃತಜ್ಞತೆ ಸಲ್ಲಿಸಿಬಿಡೋಣ.

    ಅಲ್ಲಾ…..‌‌‌..ಅನ್ನುವ ರಾಗದಲ್ಲಿ ಲಕ್ಷಗೊಟ್ಟು ಕೇಳಿ, ಓಂ ಅನ್ನುವ ನಾದ ಗುರುತಿಸಬಹುದು.
    ಚಚಿ೯ನ ಗಂಟೆಯಲ್ಲೂ ಓಂ ನಾದ ಗುರುತಿಸಬಹುದು.
    ನಮ್ಮ ಮನಸ್ಸಿನ ಭಾವನೆಗಳನ್ನು ಬದಲಾಯಿಸಿಕೊಳ್ಳಬೇಕಷ್ಟೆ. ಅದು ಅಹಿಂಸೆಯಿಂದ ಕೂಡಿರಬೇಕಷ್ಟೆ. ಹಿಂದೆ ತಿರುಗಿ ಹೀಗಾಗಿತ್ತು ಹಾಗಾಗಿತ್ತು ಅನ್ನುವ ಬದಲು ಮುಂದೆ ಆಧುನಿಕತೆ ಸಮಾಜದಲ್ಲಿ ಬದಲಾವಣೆ ನಿರೀಕ್ಷಿಸೋಣ.

  2. Satya

    Adu heegirabaaradittu, haagiranaaradittu endu iradiruvudakke golaaduva badalu hegideyo haage aaswadisuvudannu kaliyuvudu mukhya.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading