ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ‘ಸೆಲ್ಪಿ’ ತೆಗೆದುಕೊಳ್ಳಬೇಕಿದೆ..

dhaarmesh

ಧರ್ಮೇಶ್ 

ಮಗಳೊಂದಿಗೆ ‘ಸೆಲ್ಫಿ’ ತೆಗೆದುಕೊಳ್ಳಬೇಕಿದೆ!
ದಯವಿಟ್ಟು ಹುಡುಕಿಕೊಡಿ
ಪ್ರಧಾನಿಯವರ ‘ಆಜ್ಞೆ’ ಮೀರಲಾಗದು
ಅದೂ, ‘ಮನದಾಳದ ಮಾತು’ ಬೇರೆ

selfie2ಮಗಳನ್ನು ಉಳಿಸಿ’ಕೊಳ್ಳಲಾಗದ
ಗುಜರಾತಿನ ಬೀದಿಯ, ಗಲ್ಲಿಗಳಲ್ಲಿ
ಬರ್ಬರತೆಯ ಖೈರ್ಲಾಂಜಿಗಳಲ್ಲಿ,
ರಥಯಾತ್ರೆ ಸಂಚರಿಸಿದ ಹಾದಿಯುದ್ದಕ್ಕೂ….
ಕೀಚಕರ ಅಟ್ಟಹಾಸಕ್ಕೆ ಸಿಕ್ಕು
ನಲುಗಿಹೋದವರ ನಡುವೆ
ಕೆಂಪು ದೀಪದಡಿಯ ನರಳಿಕೆಯಲ್ಲಿ
ಬಿಡದೆ ಹುಡುಕಿ ಕಂಗಾಲಾಗಿದ್ದೆನೆ

ಹುಡುಕಿಕೊಡಿ, ಎಂದು ಕೇಳಿದ್ದೇನೆ
ಸಂಸ್ಕೃತಿ, ಧರ್ಮ ರಕ್ಷಕರಲ್ಲಿ
ನೈತಿಕ ಪೋಲೀಸರಿಗೂ ದೂರಿತ್ತಾಗಿದೆ
ಜಿಹಾದಿಗಳಿಗೂ ಮನವಿ ಕೊಟ್ಟಿದ್ದೇನೆ

ಆಳರಸರ ಅಂತಃಪುರ,
‘ಭೋಗ’ದ ಸರಕಿನ ಮಾರುಕಟ್ಟೆಯಲ್ಲಿ
ಕಳೆದು ಕರಗಿಹೋಗಿರುವ
ಮಗಳಿಗಾಗಿ ಹುಡುಕುತ್ತಿದ್ದೇನೆ

ದಯವಿಟ್ಟು ಹುಡುಕಿಕೊಡಿ
ಕಮರಿದ ಗರ್ಭಗಳಿಂದ,
ಮಗಳನ್ನು ‘ಉಳಿಸಿ’ಕೊಡಿ
ಒಂದು ‘ಸೆಲ್ಪಿ’ ತೆಗೆದುಕೊಳ್ಳಬೇಕಿದೆ.

‍ಲೇಖಕರು Admin

3 July, 2016

2 Comments

  1. ನಾಗರಾಜ್ ಹರಪನಹಳ್ಳಿ

    ಧ್ವನಿಪೂರ್ಣ ವ್ಯಂಗ್ಯ ಭರಿತ, ಹರಿತ ಪದ್ಯ

  2. Sudha ChidanandGowd

    good usage of metaphors

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading