ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಒಂದು ಮೈಥುನ…’ – ನಳಿನಾ ಕವಿತೆ

ನಳಿನಾ

 
ನಿದ್ದೆಯಲ್ಲೆಲ್ಲಾ ಎದೆ ಗುಡುಗಿದಂತಾಗಿ,
ಎದ್ದು ನೋಡಿದರೆ ಹೌದು
’ಅವನಿಲ್ಲ’
 
ಎಲ್ಲಿ ಹೋದ, ಮತ್ತು ಈ ಹೊತ್ತಿನಲ್ಲಿ ಏತಕ್ಕಾಗಿ?
ಎಂಬ ಪ್ರಶ್ನೆಗಳು ಆ ಹುಡುಗಿಯ
ಸರುಹೊತ್ತಿನಲ್ಲಿ ಮನಕೆಡಿಸಿದವು.
 
ಗ್ಯಾಸ್ ಸ್ಟೌವ್ ನ ಮೇಲೆ ತಯಾರಾದ
ಅನ್ನ ಹುಡುಗನ ನಿರೀಕ್ಷೆಯಲ್ಲಿತ್ತು,
ಹುಡುಗಿ ತಾನೂ ತಿನ್ನದೆ
ಸುಮ್ಮನಾದಳು.
ಅವನಿಗೆ ಕ್ಲೀನ್ ಕಾನ್ಸೆಫ್ಟ್.
ಇವಳು ಹೊರಾಂಡ, ರೂಮು, ಎಲ್ಲಾ ಒರೆಸಿ
ಸ್ವಚ್ಛವಾಗಿಸಿಟ್ಟಿದ್ದಳು.

ಅವನು ಬರಲಿಲ್ಲ, ಹಸಿ ಮೈಯ
ಹುಡುಗಿ ಒಂದುಕ್ಷಣ ಕಣ್ಮುಚ್ಚಿ
ನೆನೆದಳು ಅದನ್ನು.
ಸುಖ ಸೋಪಾನದ ಲೋಲುಪತೆಗಿಳಿಸುವ
ಮೂರು ಇಂಚಿನ ಆಕೃತಿಯೇ
ನಿನಗಾಗಿ ಏನೆಲ್ಲಾ ಮಾಡಬೇಕು.
 
ಮನೆಯ ಹಿಂಬಾಗದ ರಸ್ತೆಯಲ್ಲಿ
ಇದ್ದ ಹೆಂಡದ ಅಂಗಡಿಯಿಂದ ಆತ
ಕಾಲು ಕಿತ್ತಿಡುತ್ತಾ ಸರು ಹೊತ್ತು ಮೀರಿ
ಅವಳ ಮೈಮುಟ್ಟಲು ಬಂದ,
ಗಬ್ಬು ನಾರುವ ಅವನ ಬಾಯಿಗೆ
ದಂಗಾಗಿ ಬಾಯಿಬಿಟ್ಟಳು,
ಮೂರು ನಿಮಿಷಗಳೂ ಬೇಕಾಗಲಿಲ್ಲ,
ಅವನು ಸುಸ್ತಾಗಿ ಪಕ್ಕಕ್ಕೆ ಒರಗಲು.
ಇವಳಿಗೆ ಏನಾಯಿತೋ ಗೊತ್ತಾಗಲೇ ಇಲ್ಲ.
 
 

‍ಲೇಖಕರು G

5 October, 2013

6 Comments

  1. nagraj.harapanahalli

    ಕವಿತೆ ಇಷ್ಟವಾಯಿತು.

    • Anonymous

      ಧನ್ಯವಾದಗಳು

  2. nagendra malladihalli

    kavithe chennagide adare maithunada matheke

  3. D.Ravivarma

    ಮೂರು ನಿಮಿಷಗಳೂ ಬೇಕಾಗಲಿಲ್ಲ,
    ಅವನು ಸುಸ್ತಾಗಿ ಪಕ್ಕಕ್ಕೆ ಒರಗಲು.
    ಇವಳಿಗೆ ಏನಾಯಿತೋ ಗೊತ್ತಾಗಲೇ ಇಲ್ಲ.
    heart touching….

    • nalina200082@gmail.com

      thank for the comments

  4. Anonymous

    good
    🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading