ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಮಾತು ಹೇಳದೆ ಹೊರಟೋದೆ..

ಹೃದಯದಲಿ ಅರಳಿದ ಗುಲಾಬಿ

bidaloti ranganath

 

 

 

 

 

 

 

 

 

 

ಬಿದಲೋಟಿ ರಂಗನಾಥ್

ಬೆಚ್ಚಗೆ ಕೌದಿ ಹೊದ್ದು
ಮಲಗಿದ್ದ ಹೃದಯವ ಎಬ್ಬಿಸಿ
ಒಂದು ಮಾತು ಹೇಳದೆ
ಹೊರಟೋದೆ.

ಹೊರಗೆ ಗಾಳಿ ಮಳೆ
ರೌರವ ಬಿಸಿಲು ಕಾಲ ಸನ್ಹಿತ.
ನಿದ್ದೆಯನು ಹೊತ್ತೊಯ್ದ ನೀನು
ಬರುವುದಾದರು ಯಾವಾಗ?

ಕಾಲನ ನಡಿಗೆ ಜೋರಾಗೇ ಇದೆ
ಮಂಕು ಮೂತಿಯ ಭಾವನೆಗಳಿಗೆ
ಅಂಕವಂತು ಶೂನ್ಯ.
ಬೆತ್ತಲಾದ ಹೃದಯಕೆ
ಬತ್ತುವ ಸಂಭದಗಳ ರುಜುಗಳೇ ಜಾಸ್ತಿ.

ಹೃದಯದ ಅಂದವಿಲ್ಲದೆ
ಬೆಳೆದ ಉಗುರು ,ಯಾರನ್ನು ಚುಚ್ಚಿ
ಗಾಯಗೊಳಿಸುವುದೊ,
ಎದುರಿಸುವ,ಕಾಯುವ ಖಡ್ಗ ನನ್ನಲ್ಲಿಲ್ಲ.

ನಿದ್ದೆಯನ್ನೆ ಕಿತ್ತ ನೀನ್ನದು
ಎಲ್ಲಿದ್ದರು ಅಂಕು ಡೊಂಕು ನಡೆ
ಹೃದಯದಲಿ ಅರಳಿದ ಗುಲಾಬಿಗೆ
ನೀನು ಕಾರಣಳಾಗಿ,
ಯಾಕೆ ಕಣ್ಣೀರಾಕಿಸುವೆ,?
ಪ್ರೀತಿಯ ಪನ್ನೀರಾಕದೆ.

ನಾನಿರುವ ಸೂರು ತೂತು ಬಿದ್ದಿದೆ
ಬೆಚ್ಚಗೆ ಮಲಗಿದ್ದ ನಾನು
ಮತ್ತೆ ಮಲಗಲು ನೀನೆ ಹೊತ್ತೊಯ್ದ ಪ್ರೀತಿಯ
ಕೌದಿ,ಚಾದರ,ಜೊತೆಗೆ ನೀನು, ಇದ್ದರೆ ಮಾತ್ರ
ಬೆಚ್ಚನೆಯ ನಿದ್ದೆ
ಮೆಲಕಾಕುವ ಕನಸು.
ಹೃದಯಕೆ ನಿರಾಳ ಉಸಿರು.

love2

‍ಲೇಖಕರು Admin

14 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading